Posts

Showing posts with the label Kavithegalu

ಅಮರ ಪ್ರೇಮ

  ಅಮರ ಪ್ರೇಮ   ಮದುವೆಯೆಂಬುದೊಂದಾತ್ಮಗಳಮಿಲನವದಕೇ ಕೆದೇಹಗಳ ಮಿಲನಕ್ಕೆ ಬಂಧನ ? ತೊಡರೇಕೆ ? ಪ್ರೇಮ ಪ್ರೇಮವೆ ಸಲ್ಲ ಮಣಿದಿರಲು ಪರಿಸರಕೆ ಪ್ರೇಯಸಿಯಪ್ರೇಮರಾಗದಪಶ್ರುತಿಮಿಡಿತಕೆ.     ಚಿರವಾದ ಬೆಳಕಿನ ಮನೆಯದುವೆ ದಾರಿಗುಸುರು ಬಿರುಗಾಳಿಗಂಜದೆಲೆ ಅಳುಕದೆಲೆ ನಿಲ್ವುದದು ದಡಮುಟ್ಟೆತೊಳಲಾಡ್ವನಾವಿಕರಕಲ್ಪತರು ಎತ್ತರದಿ ನಿಂದಿಹ ಧ್ರುವತಾರೆ ನಿತ್ಯವದು     ಅಧರವದರಮೃತವಕಳೆದುಕೆನ್ನೆ ರಂಗಳಿಸಿ ನಿಂದರೂ ಕಾಲನ ಹೊಡೆತಕೆ ಸಿಗದು ಪ್ರೇಮ ವರುಷಗಳುರುಳಿದರೂ ಮಾಸದದರ ರಂಗಳಿಸಿ ಮರಣದಂಗಳದಲೂ ಮಿನುಗುವುದು ನಿಜಪ್ರೇಮ   ಇದಸತ್ಯವೆನಿಸಿದರೆ ನಿಲಿಸುವೆನು ಬರೆವುದನು ಇರಲಿಲ್ಲ ಇಂಥ ಪ್ರೇಮಿಗಳೆಂದು ನಂಬುವೆನು.   ಈ ಕವನದ ಮೂಲ Let me not to the marriage of true minds  BY  WILLIAM SHAKESPEARE   ಡಾ ಸತ್ಯವತಿ ಮೂರ್ತಿ  26-06-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ ಕುವೆಂಪು ಪ್ರಾಧಿಕಾರದಿಂದ ಪ್ರಕಟವಾಗುವ ಚಾತುರ್ಮಾಸಿಕ ಪತ್ರಿಕೆ೩ ರಲ್ಲೂ ಪ್ರಕಟವಾಗಿದೆ

ಆಶಾವಾದ

  ಆಶಾವಾದ ಜೀವನ ತೋಟದ ಉಸ್ತುವಾರಿಯ ಬಂಟರು ನಾವು ದೊರೆತಿಹುದೆಮಗೆ ನಾನಾತೆರನ ಕಾಳುಗಳ ಬಟ್ಟಲು ನಮ್ಮದೇ ತೋಟವಿದು ನಮ್ಮಂತೆ ಬೆಳೆಯಬಹುದು ಜೀವನವ ಸೊಗಯಿಸಲು ನಮ್ಮದೇ ಅಳತೆಗೋಲು ಶಿಶಿರ ಋತುಬರಬಹುದು ಅಂಜಿಕೆಯ ತರಬಹುದು ನೆನಪಿರಲಿ ಮುಂದಿಹುದು ವಸಂತ, ಶ್ರಮಿಸುವುದ ಬಿಡದಿರು ತಾಳಬೇಕು ತಾಳಿಗೆಲ್ಲಬೇಕು , ಪಡೆಯಬೇಕು ಬಯಸಿದುದು ಖಿನ್ನನಾಗದೆ ’ಸೋವಾಟ್?’ಎನುತ ನಗುತ ಮುನ್ನುಗ್ಗುತಿರು ಪ್ರತಿಕೂಲದಲಿ ನೆನೆ ವಾಲ್ಮೀಕಿಯ ’ಮರಾ’ ದಲ್ಲಿದ್ದ’ರಾಮ’ ನೆಗೆತದಲಿ ನುರಿತವಗೆ ಉಂಟು ತಡಕೆ ಪಂದ್ಯದ ಜಯ ಬಾಗಿಲೊಂದು ಮುಚ್ಚಿದೆಅಷ್ಟೆ, ತೆರೆದಿರುವುವಸೀಮ ನೀರ ಕೊರತೆಯಲಿ ನೆಲವಗೆದು ತೆಗೆವಾ ತೋಳ್ಬಲಕೆ ಜಯ ಹುಟ್ಟದಿದ್ದರೇನು ಅಮಿತ ಭಾಗ್ಯವ ಹೊತ್ತು ಆತ್ಮನಂಬಿಕೆಯಿರೆ ಒಣಮರವು ಚಿಗುರುವುದು ಸೋತರೇನು ತರಬಹುದದೇ! ಗೆಲುವಿನ ರಾಗದ ಸೊತ್ತು  ನಾಗರ ಹೆಡೆಯಲೂ ಮಣಿಯ ಕಾಣ್ವ ಶಕ್ತಿ ಮೂಡುವುದು ನಿರಾಶೆಯನು ಬದಿಗಿಡು, ಆಶಾವಾದಿಯಾಗಿರು ಸದಾ ಕಮರಿಯಲಿ ಬಿದ್ದರೂ ಮೆಲೇರು ಭರವಸೆಯ ಹಗ್ಗಹಿಡಿದು ಧೈರ್ಯದಲಿ ಮುನ್ನುಗ್ಗು ,ಹೊಸ ಹಾದಿ, ಬೆಳಕು ನಿನಾದ  ನೂರಾರು ಕವಲುಗಳು , ಒಂದೊಂದೂ ಉಜ್ವಲವಹುದು ನೆಲಕಂಟಿದ ಮರವಾಗದಿರು, ಅಸಹಾಯತೆಗೆ ಶರಣಾಗದಿರು ಓಡಲು ಕಾಲುಗಳಿಗೆ ಬಲವುಂಟು, ರೆಕ್ಕೆಗಳುಂಟು ಹಾರಲು ಹುಟ್ಟುಸ್ವತಂತ್ರ ನೀನು, ಹಿಡಿದಿಡುವ ಬಂಧನಕೆ ಬೆದರದಿರು ಜಯದೇವಿಯಪ್ಪುವಳು ಸಾಧನೆಯ ಹಾದಿಯಲಿ ನೀನಿರಲು ಡಾ ಸತ್ಯವತಿ ಮೂರ್ತಿ ಈ ಕವನ  ಡಾ ಜೀ.ವಿ ಕುಲ...

ಆಶಾವಾದ

  ಆಶಾವಾದ   ಜೀವನದ ತೋಟದಲಿ ಕೆಲಸದಾಳುಗಳು ನಾವು ದೊರಕಿಹುದೆಮಗೆಹಲತೆರನ ಕಾಳುಗಳ ಬಟ್ಟಲು ಬಿತ್ತಲು ನಮ್ಮದೇ ನೆಲ ; ಆಯ್ಕೆಯೂ ನಮ್ಮವು ಅಂದಗೈಯಲು ಬೇಕು ಜೀವನವ , ಗುರಿಯು ತಿಳಿದಿರಲು   ಋತುಗಳುಬದಲಾಗಿ ಪ್ರಕೃತ್ತಿ ತೋರಲು ವಿರೋಧವನು ಕಾಲವದು ಬಹುದು ನಮ್ಮ ನಿಶ್ಚಲ ದೃಢತೆಗೆ ತಕ್ಕಂತೆ ತಾಳಿದವ ಬಾಳಿಯಾನು ಬೇಕೆಂದ ಫಲ ಪಡೆಯುವನು ಅಪಶೃತಿಗೆಡೆಗೊಡದೆ ಮೀಟಬೇಕು ತಂತಿ ಶೃತಿಗೆ ತಕ್ಕಂತೆ     ವಿಧಿ ಪ್ರತಿಕೂಲವಾಗಿರಲು ಪೂರ್ಣಪ್ರಜ್ಞ್ಯತೆಯಲಿ ಸ್ಪಂದಿಸು ತಡಕೆ ಪಂದ್ಯದ ಗುಟ್ಟು ಗೊತ್ತು ವಿಜಯದ ಲಕ್ಶ್ಯವುಳ್ಳವಗೆ ಒಂದು ಬಾಗಿಲು ಮುಚ್ಚಲು ತೆರೆವುದು ನೂರಾರು ಗುರುತಿಸು ಸುರಿವ ನೀರಿನ ಕೊರತೆಯಿರಲು ಶರಣಾಗು ನೆಲಬಾವಿಗೆ   ಹುಟ್ಟಿನೊಡನೆ ಬಲು ಭಾಗ್ಯವನು ತರದಿದ್ದರೇನು ? ಕರಗಳ ಮಂತ್ರ ಸ್ಪರ್ಶದಿ ಕಾಷ್ಟವ ಸುವರ್ಣವಾಗಿಸು ಒಮ್ಮೆ ಸೋತರದರಲ್ಲಡಗಿಲ್ಲವೇ ಗೆಲುವಿನಾ ಜೇನು ? ಹಾವಿನಾ ಹೆಡೆಯಲು ವಜ್ರವಡಗಿಹುದು ಗುರುತಿಸು   ಸಕಾರನಂಬಿಕೆಯಲಿ ನಡೆ ತೊರೆದು ನಕಾರದಾಲೋಚನೆಗಳ ಬೀಳುತಲೆಕಲಿ ಪಾಠವ ನೇಳಲು , ಭರವಸೆಯ ಹಗ್ಗದಲಿ ಧೈರ್ಯದಲಿ ಮುನ್ನುಗ್ಗು ನೋಡು ಮುಂದಿಹ ಪ್ರಜ್ವಲಿಪ ಕಿರಣಗಳ ಅವಕಾಶವನಂತವಪಾರ  ಹೊಸಯೋಜನೆಗಳ ಸಾಕ್ಷಾತ್ಕಾರದಲಿ   ನೆಲಕ್ಕಂಟಿದ ಮರದಂತಸಹಾಯನೆನಸಂಜದಿರು ನಿನಗುಂಟು ಬಲಿಷ್ಠ ಕಾಲುಗಳು , ರೆಕ್ಕೆಗಳು ಹಾರಲು ...

ನಿಲ್ಲಿಸದಿರು ಉಸಿರಾಟವ

  17-05-2021 ನಿಲ್ಲಿಸದಿರು ಉಸಿರಾಟವ ನನ್ನಮ್ಮಾ...... ನಿಲ್ಲಿಸದಿರು ನನ್ನಮ್ಮ ಉಸಿರಾಟವ ವಾಯುವನು ನೀ ನಿಯಂತ್ರಿಸು ಅವನೊಡನೆ ಹೋಗದಿರು ಕತ್ತಲೆಯ ರಾತ್ರಿಯೊಳಗೆ ನುಸುಳಿ ಇನ್ನೇನು ಬಂದೀತು ಕೊರೆಯಾದ ಆಮ್ಲಜನಕ ......   ಮುಖವಾಡದಲ್ಲಿರಬೇಕು ದೂರನಿಲ್ಲಬೇಕು ನಾನು ಎಷ್ಟುಹತ್ತಿರವಾದರೂ ಬಲುದೂರ ಸಮುದ್ರದ ನೀರು ನಾನಿಲ್ಲೇ ನಿನ್ನ ಸನಿಹದಲ್ಲಿ ! ಅಮ್ಮ ಕೇಳುವುದೇ ನನ್ನೀ ಕೂಗು ! ಇನ್ನೇನು ಬಂದೀತು ಬಂದೀತು ಆಮ್ಲಜನಕ ......   ತಾತಮುತ್ತಾತಂದರು , ಅಜ್ಜಿಯರು ಕರೆದರೆಂಬ ನೆಪಬೇಡ ಹೊಳೆವತಾರೆಗಳು ಮನಸೆಳೆದವೆನ್ನಬೇಡ ಕಾಲವಿನ್ನೂ ಮುಗಿದಿಲ್ಲ , ತೆರಳದಿರು ನಮ್ಮನಗಲಿ ! ಇನ್ನೇನು ಬಂದೀತು ಬಂದೀತು ಆಮ್ಲಜನಕ ......   ಹಾಲು ನೀಡುವವ , ಪೇಪರನು ಹಾಕುವವ ನೆರೆಮನೆಯ ಪುಟ್ಟಹುಡುಗಿ ಅವಳಾ ಮುದ್ದುಬೆಕ್ಕು ಅತ್ತೆ , ಅಮ್ಮ , ಅಕ್ಕ , ನಿನ್ನ ಹಿತೈಷಿಗಳು ಕಾದಿಹರು ಇನ್ನೇನು ಬಂದೀತು ಬಂದೀತು ಆಮ್ಲಜನಕ ..... [31]   ..   ಯಮನೊಡನೆ ಹೋರಾಡುವ ಡಾಕ್ಟರುಗಳು ಗಳಿಗೆಗೊಮ್ಮೆ ನಿನ್ನ ನೋಡುವ ನರ್ಸುಗಳು ಎಲ್ಲರ ಶುಭಾಶಯವು ನಿನಗೆ , ಉಸಿರಾಡುತ್ತಿರಮ್ಮ ಇನ್ನೇನು ಬಂದೀತು ಬಂದೀತು ಆಮ್ಲಜನಕ .......       ಆಮ್ಲಜನಕಕ್ಕಾಗಿ ಸಾಲಿನಲಿ ನಿಂತೆ ಗಂಟೆಗಂಟೆ ...

ಸಿಗಲಿಲ್ಲ ಪುರಸೊತ್ತು

  ಸಿಗಲಿಲ್ಲ ಪುರಸೊತ್ತು     ಒಂದೊಮ್ಮೆ ಹುಡುಕಿ ದಣಿದಿದ್ದಳು ರಮಾಳ ಹೆಣ್ಮಗಳು ಮನೆಗೆಲಸದ ನಡುವಲ್ಲಿ, ಟಿಫಿನ್, ಕ್ಯಾರಿಯರ್ಗಳ ತಯಾರಿಯಲ್ಲಿ ಗಂಡನ ಉಪಚಾರದಲಿ , ಮಕ್ಕಳ ಹೋಂವರ್ಕ್ ಸಮಯಕ್ಕೆ ಮುಗಿಸುವಲ್ಲಿ  ಸಮೀಪದ ಅಂಗಡಿಗಳಲಿ,  ಎಲ್ಲಿ ,ಎಲ್ಲಿಯಾದರೂ ದೊರೆತೀತೆ? ಒಮ್ಮೆ ನಿಟ್ಟುಸಿರುಬಿಟ್ಟು ಕುಳಿತಿರಲು ದೊರೆತೀತೆ ? ಎಂದು ಎಲ್ಲೆಲ್ಲಿ ಅಲೆದು ಹುಡುಕಾಡಿದರೂ ಸಿಕ್ಕಿರಲಿಲ್ಲ  ಪುರಸೊತ್ತು , ಅಂತೂ ಇಂತೂ ಎಡೆಬಿಡದ ಭಗೀರಥ ಪ್ರಯತ್ನದಲಿ ಕಡೆಗೂ ಸಿಕ್ಕಿತ್ತು ಬಹಳಷ್ಟು ಹಂಬಲಿಸಿದ ಆ ಸವಲತ್ತು! ಮಹಿಳೆಯರ ಸ್ವಾತಂತ್ರ್ಯದ ಕೂಗಿನಡಿಯಲ್ಲಿ ಸಮಾನತೆಗೆ ಹೋರಾಡುವ ಸತ್ಯಾಗ್ರಹದ ನಡುವಲ್ಲಿ ಪುರುಷರೊಡನೆ ಪೈಪೋಟಿಮಾಡುವ ಆಕ್ರೋಶದಲ್ಲಿ ತಮಗಾಗಿ ” ಸ್ಪೇಸ್ ” ಹುಡುಕುವ ತರಾತುರಿಯಲ್ಲಿ ! ಅಂದೇ ಬಂದಿತು ಕುತ್ತಿಗೆ!   ಗಂಡಸಿನ ಪುರಸೊತ್ತಿಗೆ ಹುಡುಕುವ ಸರದಿ   ಬಂದಿತು ಬಡಪಾಯಿ ಗಂಡಸಿಗೆ! ಮಕ್ಕಳನು ಶಾಲೆಗಟ್ಟುವ ಗಡಿಬಿಡಿಯಲ್ಲಿ, ಆಫೀಸಿನಲ್ಲಿ ದುಡಿದು ಸಂಜೆ ಮನೆ ಸೇರುವಲ್ಲಿ. ಒಗೆದ ಬಟ್ಟೆಗಳ ಮಡಿಸಿ ಜೋಡಿಸುವಲ್ಲಿ ಸ್ವಿಂಮ್ಮಿಂಗು , ಕ್ರಿಕೆಟ್ಟು , ಇತ್ಯಾದಿ ಗಳಿಗೆ ಮಕ್ಕಳನೊಯ್ಯುವಲ್ಲಿ ಮಾಡಿದ್ದ ಅಡಿಗೆ ಬಡಿಸುವಲ್ಲಿ . ಪಾತ್ರೆ ತೊಳೆಯುವಲ್ಲಿ. ಕಡೆಗೆ ಮನೆಕಸ ಗುಡಿಸಿ ಒರೆಸುವಲ್ಲಿ! ಸಂದು ಗೊಂದುಗಳಲಿ   ಹುಡುಕಿ ದಣಿದದ...
                                                                               ಯುಗಾದಿ                           ಮಗಳಿಗೆ ಜ್ವರ                         ಔಷಧಿಗಾಗಿ ನಡೆದಿದ್ದೆ ಡಾಕ್ಟರೆಡೆಗೆ                         ದಾರಿಯಲ್ಲಿ ಕುಳಿತಿದ್ದ ಹಸ್ತ ಸಾಮುದ್ರಿಕ                         ನಗರಿವಿರದೆಯೆ ಕೈಚಾಚಿದ್ದೆ ಅವನ ಮುಂದೆ                         ಭೇಷ್ ಭೇಷ್ ಬಲ್ಸೊಗಸು ಬಲ್ಸೊಗಸು                ...

ನಮ್ಮನೀ ಕಪಾಟು

  ನಮ್ಮನೀ ಕಪಾಟು ನಮ್ಮನೀ ಕಪಟಿನೊಳ್ಗ ಸೀರೆಗಳ್ನಗ್ತಾವ? ಅವ್ರೇನ್ ಹೇಳ್ತಾರಂತ ನಿತ್ಕೊಂಡ್ವಸಿ ಕೇಳಾಂವ? ಭಾಳದಿನಗಳ್ಮೇಲೆ ಸಿಕ್ಕದ ನಮಗೊಂದಿಷ್ಟಾರಾಮ ಸದ್ಯ ತಪ್ತುಮೈಗಂಟಿಕೊಂಡಿರೋ ವ್ಯಾಯಾಮ ಬಲೇ ಕುಸಿ ಮಾಸ್ದಿರೋ ಇಸ್ತ್ರೀನ ನೋಡಿ ಏನ್ಹೇಳ್ತಿ ನಗಂತೂ ಚಾನ್ಸು ಉಳಿಯೋಕ್ಕೆ ನಿಂಜೋಡಿ. ಬೆಚ್ಗೆ ಒಳ್ಗೆಇರ್ಬೋದು ಹ್ಯಾಂಗರ್ಗೆ ತಬ್ಕೊಂಡು ಹೊರಗೋದ್ರೆ ಕಾಡ್ತದೆ ಸೀತ್ಗಾಳಿ ಹೊಡ್ಕೊಂಡು ಆದ್ರೂನೆ ಏನೋ ಅಪಸ್ವರ ಕೇಳಿಸ್ತದ ನಮ್ಮೊಡ್ತಿ ಕಣ್ಣಾಗ ನಿರಾಸೆ ಕಾಣಿಸ್ತದ ಒಂದಿಷ್ಟು ದಿನ ಚೆಂದಅಲ್ಪ ವಿರಾಮ  ನುಸಿಗ್ನಮ್ಮನ್ನತಳ್ತದೆ ಈ ದೀರ್ಘವಿರಾಮ  ಅಷ್ಟೆ ಏನು ನಮ್ಮಂದ ಎಲ್ಲ್ರಿಗೂ ತೋರ್ಸ್ಬೇಕು ನೋಡೋರ್ಕಣ್ ಬೆರ್ಗಾಗಿ ಶಾಭಾಸ್ ಅನ್ಬೇಕು ಅದ್ಕೊಂದೇ ಉಪಾಯ ಕರೋನ ತೊಲಗ್ಬೇಕು ಮೊದ್ಲಿದ್ದ ನೆಮ್ದಿ ಬೇಗ್ಲೇನೆ ಬರ್ಬೇಕು ನಮಸ್ಕಾರ ಕರೋನ  ಅಡ್ಬಿದ್ದೆ ನಿನಗಣ್ಣ ನಮ್ಮನ್ನ ಬಿಟ್ಟು ಬೇಗನೆ ತೊಲಗಣ್ಣ ನಮ್ಮೊಡತಿ ನಮ್ಮನ್ನ ತಬ್ಕೊಂಡು ನಲೀಲಿ ನಮ್ಗೂನೆ ಒಡಹುಟ್ಟಿದೋರ್ನ್ನೋಡೊ ಚಾನ್ಸ್ ಬೇಗನೆ ಸಿಗ್ಲಿ ಡಾ ಸತ್ಯವತಿ ಮೂರ್ತಿ 23-01-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ

ಗಿಳಿಯ

ಗಿಳಿಯ ನೋಡಿ ಉಲಿಯುವಾಸೆ ಹೂವ ನೋಡಿ ಹಾಡುವಾಸೆ ಹಕ್ಕಿ ನೋಡಿ ಹೊಮ್ಮುವಾಸೆ ಮನದಿ ಮೂಡಿ ನಿಂದರೂ ಹೊರಗೆ ಬಾರದಾಗಿದೆ ಏನೋ ಕೊರೆಯ ಕಂಡಿದೆ ದಿನ ಉಂಬಿದ ಹೆಣ್ಣು  ಸುಸೂತ್ರ ಆಗದ ಹೆರಿಗೆ ಕವನ

ಕಾಫಿ

ಕಾಫಿ ಇದ್ರೇನೆ ನಮಗೆ ಪ್ರೀತಿ ಅದಿಲ್ಲದೆ  ಹೋದ್ರೆ ಫಜೀತಿ ಕಾಫಿಯ ಬಿಟ್ಟು ಕಾವಿಯ ತೊಟ್ಟೂ  ನಾ ಹೇಗೆ ಬದುಕೇನು //ಕಾಫೀ.... ಕಾಫಿಯ ಬಣ್ಣವು ಸೊಗಸು  ಅಹ  ಅದರ ವಾಸನೆ ಇನ್ನೂ ಸೊಗಸು ಕಾಫಿಗೆ ಹಾಲು ಸಕ್ಕರೆ  ಸೇರಿಸಿ ಕುಡಿದಾಗ  ಗಮ್ಮತ್ತೂ/ಕಾಫಿ..... ಕರಿಯ ಬಣ್ಣದ ಕಾಫಿ  ನೀ ಕೊಡುವೆ ನಿದ್ದೆಗೆ ಮಾಫಿ ನಿನ್ನನ್ನು ಕುಡಿದು ನಾ ಹಾಡಿ ಕುಣಿದು ಸಂತಸದಿ ನಲಿದೇನೂ.....ಕಾಫಿ..... ಕಾವಿಯ ತೊಟ್ಟೆನು ನಾನು ಕಾಮಿನಿ ಬಿಟ್ಟೆನು ನಾನು ಕವಿಯ ತೊಟ್ಟು ಕಾಫಿಯ ಬಿಟ್ಟು ನಾ ಹೇಗೆ ಬದುಕೇನೂ / ಕಾಫಿ.....

ಬಂದಿತು ಬಂದಿತು ದೀಪಾವಳಿ

ಬಂದಿತು ಬಂದಿತು ದೀಪಾವಳಿ ತಂದಿತು ತಂದಿತು ಪ್ರಭಾವಳಿ ಮಲಗಿಹ ಜನರನು ಎಚ್ಚರಿಸುತಲಿ ನಿದ್ದೆಯ ಹರಿಸಿ ಬೆಳಕನು ತೋರುತ  ರವಿಯದು ತಾನ್ರೆ ಉದಯಿಪ ಮೊದಲೇ ಸುರು ಸುರು ಬತ್ತಿಯ ಬೆಳಕನು ನೀಡಿ/ ದೀಪಾವಳಿ ಅಹ ದೀಪಾವಳಿ ನರಕನ ವಧೆಯ ನೆನಪಿಗೆ ತರುವ  ಪಟಾಕಿ ಶಬ್ದವ ತನ್ನೊಳು ಹೊತ್ತು ತ್ಯಾಗಶೀಲ ಬಲೀಂದ್ರ ದೇವನ  ಪೂಜಿಸಿ ಪಾಡುವ ಹರುಷವ ಹೊತ್ತು / ದೀಪಾವಳಿ  ಅಹ ದೀಪಾವಳಿ ಸೋದರರನ್ನೇ ಆದರಿಸುತಲಿ ಸೋದರ ಬಿದಿಗೆಯ ಸಂಭ್ರಮ ತೋರಿ ಸಡಗರವನ್ನೆ ಹ್ರದಯದ್ ತುಂಬಿ ನೋವನು ಮರೆಸುವ ಶಕ್ತಿಯ ಹೊತ್ತು/ ದೀಪಾವಳಿ ಅಹ ದೀಪಾವಳಿ ಜನದ ಮನದ ತಮವನು ಕಳೆಯುತ  ದೀಪದ ಬೆಳಕನು ಎಲ್ಲೆಡೆ ಚೆಲ್ಲಿ ಜ್ಞಾನ ಜ್ಯೋತಿಯ ಹಚ್ಚುವ ತೆರದಿ ಉರಿಯಿತು ಎಲ್ಲೆಡೆ ದೀಪಗಳಾವಳಿ/ ದೀಪಾವಳಿ ಅಹ ದೀಪಾವಳಿ

ಕವಾಲಿ

ಇದ್ದರೆ ಶಾಲೆಗೆ ನಿತ್ಯವೂ ರಜ  ಮಕ್ಕಳಿಗೆಲ್ಲ ಮಜವೇ ಮಜ ಒಡುವ ಗೋಜು ಇಲ್ಲವೇ ಇಲ್ಲ  ಆಟವೇ ಆಟ ಇಡಿ ದಿನವೆಲ್ಲ ಇದ್ದರೆ ಶ್ಹಲೆಗೆ ನಿತ್ಯವೂ ರಜ ಆದೀತು ಮಕ್ಕಳ ಪಾಲಿಗೆ ಸಜ ಬರಬೇಕು ಒಮ್ಮೊಮ್ಮೆ ನಡುವಲಿ ರಜ ಹಾಲಿಗೆ ಸಕ್ಕರೆ ಬೆರೆತಂತೆ ನಿಜ ಬೆಳಗಾಯ್ತು ಎಂದರೆ ಶಾಲೆಗೆ ಓಟ ಸಂಜೆಗೆ ಬರುವುದು ಟ್ಯೂಷನ್ ಕಾಟ ರಾತ್ರಿ ಬೆಳಗೂ ಓದುವ ಭೂತ ಟಿ.ವಿ.ಆಟ ಎಲ್ಲವೂ ಖೋತ ಬೆಳಗಾದ್ರೆ ಶಾಲೆಗೆ ಹೋಗುವ ಸಡಗರ ರಾತ್ರಿಗೆ ಟ್ಯೂಷನ್ ಇದ್ದರೆ ಆದರ ರಾತ್ರಿಬೆಳಗೂ ಪಾಠವನೋದಲು ಸಂಜೆಯ ಸಮಯದಿ ಆಟವೇ ಆಟ ಬಿಳಿ ಷೂಸಿಗಾಗ್ಬೇಕು ಆಗಾಗ್ಗೆ ಪಾಲೀಷು ಕರಿಷೂಸಿಗ್ಮಾಡ್ಬೇಕು ನಿತ್ಯವೂ ಮಾಲೀಷು ಇಸ್ತ್ರೀನ ಮಾಡ್ಬೇಕು ಬಟ್ಟೆಗಳನೊಗೆದು ಟೈ ಅಂತೂ ಕಟ್ಬೇಕು ಕುತ್ತಿಗೆಗೆ ಬಿಗಿದು ಬಿಳಿಯ ಷೂಸು ಕರಿಯ ಷೂಸು  ನೋಡೋಕ್ಕೆ ಚೆನ್ನ ಮಕ್ಕಳಾ ಪೋಸು ಮಾಡಿದ್ರೆ ಬಟ್ಟೆಗಳನೊಗೆದೊಗೆದು ಇಸ್ತ್ರೀ ಶಿಸ್ತಿನ ಸಿಪಾಯಿ ಹೆಚ್ಚೇನು ಮಿಲ್ಟ್ರಿ ಕೊಡ್ತಾರೆ ಸ್ಕೋಲಲ್ಲಿ ಗಾಡಿಹೋಂವರ್ಕೂ ಮಾಡ್ದಿದ್ರೆ ನೀಡ್ತಾರೆ  ಮೈನಸ್ಸು ಮಾರ್ಕೂ ಬೈಯ್ತಾರೆ ಕಿವಿಯನ್ನು ಹಿಂಡುತ್ತ ಟೀಚ ಆಗ್ತೀವಿ ಅಲ್ಲಿಯೇ ನಾವಂತು ಪಂಕ್ಚರು ಮಾಡಿದ್ರೆ ಸರಿಯಾಗಿ ಕೊಟ್ಟ ಹೋಂವರ್ಕು ಬಂದೇ ಬರುತ್ತೆ ಟೆಸ್ಟ್ನಲ್ಲಿ ಮಾರ್ಕುಮಾರ್ಕು ಓದು ಬರಹವ ಕಲಿಯಲು ಬೇಕಣ್ಣ ಅದಿಲ್ಲದೆ ಹೋದರೆ ಎಮ್ಮೆಯ ಕೋಣ ಲೆಕ್ಕವ ಕಲಿಯೋದು ಬಹಳ ಕಷ್ಟಕರ ಮಗ್ಗೀಯ ಕಲಿಯೋದು ನಮ್ಮ ದುರದ್ರುಷ್ಟ ವಿಜ್ಞಾನದಲ್ಲಿ ವಿನೋದ ಕಾಣದು ಅಜ್ಞಾನವಿದ್ದರೂ ಆ...