Posts

Showing posts with the label ಸಣ್ಣ ಕಥೆಗಳು

ಆಟೋಚಾಲಕನ ಕಥೆ -ವ್ಯಥೆ

  ಆಟೋಚಾಲಕನ ಕಥೆ -ವ್ಯಥೆ       ಕಡಲ ತೀರದಲ್ಲಿ ಕುಳಿತ ರಾಜು ನೀರನ್ನೇ ದಿಟ್ಟಿಸುತ್ತಿದ್ದ. ಅಲೆಗಳು ಒಂದಾದಮೇಲೊಂದು ಬಂದು   ದಡಕ್ಕೆ ಅಪ್ಪಳಿಸುತ್ತಿದ್ದರೂ ದಡ ಮಾತ್ರ ಯಾವ ಪ್ರತಿರೋಧವನ್ನೂ ತೋರಿಸದೇ ಶಾಂತವಾಗಿ ಅವುಗಳನ್ನು ಅಪ್ಪಿಕೊಳ್ಳುತಿತ್ತು.ಮೌನದಿಂದ ಅವುಗಳ ಆಹತವನ್ನು ಸಹಿಸಿತ್ತು.ದಡದ ಅಸಾಹಾಯಕತೆಯನ್ನು ನೋಡಿ ರಾಜುವಿಗೆ ಮರುಕ ಬಂದಿತು. ಜೊತೆಜೊತೆಗೆ ಅದರ ಸ್ಥಿರತೆಯ ಬಗ್ಗೆ ಹೆಮ್ಮೆಯೂ ಆಯಿತು. ಜೀವನವೂ ಹಾಗೆಯೇ ಅಲ್ಲವೆ ? ಕಷ್ಟ ನೋವುಗಳೆಂಬ ಹೊಡೆತಗಳು ಎಷ್ಟು ಬಿದ್ದರೂ ಸಹಿಸಲೇಬೇಕು. ಅವಗಳನ್ನು ಅಪ್ಪಿಕೊಂಡು ಒಪ್ಪಿಕೊಳ್ಳಲೇ ಬೇಕು. ಅದರಲ್ಲೂ ನಮ್ಮಂತಹ ಕೆಳ ವರ್ಗದ ಜನ! ನಮ್ಮ ಪರಿಸ್ಥಿತಿಯೇ ಇದಕ್ಕೆ ಕಾರಣವೇ ? ಪ್ರತಿಭಟಿಸಲು ಸಾಧ್ಯವೇ ಇಲ್ಲವೆ ? ನೂರಾರು ಆಲೋಚನೆಗಳು ತಲೆಯನ್ನು ತುಂಬಿ ಕಾಡುತ್ತಿದ್ದವು. ಏಕ ಕೋಣೆಯ ಪುಟ್ಟಮನೆಯಲ್ಲಿ ಅಪ್ಪ ಅಮ್ಮಂದಿರೊಂದಿಗೆ   ವಾಸ. ಅಮ್ಮನ ಜೊತೆಗೆ   ಅಪ್ಪನೂ ಮನೆಯಲ್ಲೇ ಸದಾ ಇರುತ್ತಿದ್ದ.   ಎಲ್ಲೂಕೆಲಸಕ್ಕೆ ಹೋಗದಿದ್ದ ಅವನಿಗೆ ಹೆಂಡತಿಯ ಜೊತೆ ಕುಳಿತು ಟಿವೀ ನೋಡುವುದೊಂದೇ ಹವ್ಯಾಸ. ಹಾಗಿದ್ದರೂ ಇದುವರೆಗೂ ಹೇಗೋ ನಡೆದುಕೊಂಡು ಬಂದಿತ್ತು .ಆದರೆ ನೆನ್ನೆ ತಾನೇ ಮದುವೆಯಾಗಿ ಹೆಂಡತಿಯನ್ನು ಮನೆಗೆ ಕರೆತಂದಾಗಿದೆ.ಹೆಂಡತಿಯ ಹೆಸರು ಲಕ್ಷ್ಮಿ.   ಅದೂ ಅಮ್ಮನ ಆಯ್ಕೆಯೇ! ರಾಜು ತನ್ನ ಹೆಂಡತಿಯಾಗುವವಳನ್ನು ಮದುವೆಗೆ ಮುನ್ನ ನೋಡುವ ಅ...

ಸ್ನೂಪಿ

  ಸ್ನೂಪಿ ಆಫೀಸಿನಲ್ಲಿ ಎಂದಿನಂತೆ ಫೈಲುಗಳ ಸಮುದ್ರದಲ್ಲಿ ಮುಳುಗಿದ್ದೆ . ಕೂಡುವ ಕಳೆಯುವ ಲೆಕ್ಕದಲ್ಲಿ ತಲೆ ಬಿಸಿಯಾಗಿತ್ತು . ಹೊರಗಿನ ಪ್ರಪಂಚದ ಅರಿವೂ ಇರಲಿಲ್ಲ . ಸ್ವಾಭಾವಿಕವಾಗಿಯೇ ನಾನು ಯಾವುದೇ ಕೆಲಸ ಮಾಡಹೊರಟವ್ರಾ   ಸುತ್ತಲಿನ ಪರಿವೆ ಇರುವುದಿಲ್ಲ .   ಅಂತಹುದರಲ್ಲಿ ಅಂಕೆ ಸಂಖ್ಯೆಗಳ ನಡುವೆ ಮುಳುಗಿದ್ದೆನೆಂದರೆ ಕೇಳುವುದೇನು ? ಇಹಪರದ ಅರಿವೂ ಇರಲಿಲ್ಲ . ಇದ್ದಕಿದ್ದ ಹಾಗೆ ಆಫೀಸಿನಲ್ಲಿ ಗದ್ದಲ ಕೇಳಿಸಿತು . ಎಲ್ಲರೂ ಆತಂಕಗೊಂಡಿದ್ದಾರೆ . ಎಲ್ಲರ ಬಾಯಲ್ಲೂ ಒಂದೇ ಮಾತು . ಸ್ನೂಪಿ ಎಲ್ಲೋ ಕಾಣಿಸುತ್ತಿಲ್ಲ . ಅಯ್ಯೋ ನನ್ನ ಸ್ನೂಪಿ ಯಿಲ್ಲದೆ ಜೀವದಿಂದ ಇರುವುದಾದರೂ ಹೇಗೆ ? ನನ್ನ ಬಾಳೇ ಬರಡಾಯಿತು . ಜೀವಕ್ಕೆ ಜೀವದಂತಿದ್ದ ನನ್ನ ಸ್ನೂಪಿಯೇ ನನ್ನನ್ನು ತೊರೆದು ಹೋದಮೇಲೆ ಬದುಕಿದ್ದುತಾನೇ ಏನು ? ಬಾಸ್ ನ ಉವಾಚ . ಡ್ಯಾಡಿ ಯಾಕ್ ಡ್ಯಾಡಿ ? ಸ್ನೂಪಿ ಹೀಗ್ಮಾಡ್ದ ? ಅವ್ನಿಗೇನು ಕಡಿಮೆ ಮಾಡಿದ್ರಿ ನೀವು ? ಅವನಿಗೆ ಬೇಕಾದದ್ದೆಲ್ಲ ತೆಕ್ಕೊಟ್ಟಿದ್ದೀರಿ . ರಾಜಕುಮಾರನ ಹಾಗೆ ನೋಡ್ಕೊಂಡಿದಿರಿ . ಅಂತಹುದರಲ್ಲಿ ಹೀಗೆ ಮಾಡೋದೆ ?   ಬಾಸ್ನ ಪ್ರೀತಿಯ ಪುತ್ರಿ ನೀತಾಳ ಉವಾಚ ”   ಮಮ್ಮಿ ಮಮ್ಮಿ ಏನ್ಮಮ್ಮಿ ಸ್ನೂಪಿ ಬರೋಲ್ವಂತ ?"   ಯಾಕ್ ಡ್ಯಾಡಿ ನೀನ್ಹೇಳು ಡ್ಯಾಡಿ ? ಯಾಕ್ ಬರೋಲ್ವಂತೆ...