ಆಶಾವಾದ

 ಆಶಾವಾದ

 

ಜೀವನದ ತೋಟದಲಿ ಕೆಲಸದಾಳುಗಳು ನಾವು

ದೊರಕಿಹುದೆಮಗೆಹಲತೆರನ ಕಾಳುಗಳ ಬಟ್ಟಲು

ಬಿತ್ತಲು ನಮ್ಮದೇ ನೆಲ; ಆಯ್ಕೆಯೂ ನಮ್ಮವು

ಅಂದಗೈಯಲು ಬೇಕು ಜೀವನವ, ಗುರಿಯು ತಿಳಿದಿರಲು

 

ಋತುಗಳುಬದಲಾಗಿ ಪ್ರಕೃತ್ತಿ ತೋರಲು ವಿರೋಧವನು

ಕಾಲವದು ಬಹುದು ನಮ್ಮ ನಿಶ್ಚಲ ದೃಢತೆಗೆ ತಕ್ಕಂತೆ

ತಾಳಿದವ ಬಾಳಿಯಾನು ಬೇಕೆಂದ ಫಲ ಪಡೆಯುವನು

ಅಪಶೃತಿಗೆಡೆಗೊಡದೆ ಮೀಟಬೇಕು ತಂತಿ ಶೃತಿಗೆ ತಕ್ಕಂತೆ

 

 

ವಿಧಿ ಪ್ರತಿಕೂಲವಾಗಿರಲು ಪೂರ್ಣಪ್ರಜ್ಞ್ಯತೆಯಲಿ ಸ್ಪಂದಿಸು

ತಡಕೆ ಪಂದ್ಯದ ಗುಟ್ಟು ಗೊತ್ತು ವಿಜಯದ ಲಕ್ಶ್ಯವುಳ್ಳವಗೆ

ಒಂದು ಬಾಗಿಲು ಮುಚ್ಚಲು ತೆರೆವುದು ನೂರಾರು ಗುರುತಿಸು

ಸುರಿವ ನೀರಿನ ಕೊರತೆಯಿರಲು ಶರಣಾಗು ನೆಲಬಾವಿಗೆ

 

ಹುಟ್ಟಿನೊಡನೆ ಬಲು ಭಾಗ್ಯವನು ತರದಿದ್ದರೇನು?

ಕರಗಳ ಮಂತ್ರ ಸ್ಪರ್ಶದಿ ಕಾಷ್ಟವ ಸುವರ್ಣವಾಗಿಸು

ಒಮ್ಮೆ ಸೋತರದರಲ್ಲಡಗಿಲ್ಲವೇ ಗೆಲುವಿನಾ ಜೇನು?

ಹಾವಿನಾ ಹೆಡೆಯಲು ವಜ್ರವಡಗಿಹುದು ಗುರುತಿಸು

 

ಸಕಾರನಂಬಿಕೆಯಲಿ ನಡೆ ತೊರೆದು ನಕಾರದಾಲೋಚನೆಗಳ

ಬೀಳುತಲೆಕಲಿ ಪಾಠವ ನೇಳಲು, ಭರವಸೆಯ ಹಗ್ಗದಲಿ

ಧೈರ್ಯದಲಿ ಮುನ್ನುಗ್ಗು ನೋಡು ಮುಂದಿಹ ಪ್ರಜ್ವಲಿಪ ಕಿರಣಗಳ

ಅವಕಾಶವನಂತವಪಾರ  ಹೊಸಯೋಜನೆಗಳ ಸಾಕ್ಷಾತ್ಕಾರದಲಿ

 

ನೆಲಕ್ಕಂಟಿದ ಮರದಂತಸಹಾಯನೆನಸಂಜದಿರು

ನಿನಗುಂಟು ಬಲಿಷ್ಠ ಕಾಲುಗಳು , ರೆಕ್ಕೆಗಳು ಹಾರಲು

ನೀ ಸ್ವತಂತ್ರ ಸುತ್ತಮುತ್ತಲಬೇಲಿ ಅಡ್ದಿಯೆಂದೆಣಿಸದಿರು

ಜಯದೇವಿಯಪ್ಪುವಳು ಧೈರ್ಯದಲಿ ಮುನ್ನುಗ್ಗಿ ಯತ್ನಿಸಲು

 

ಡಾ ಸತ್ಯವತಿ ಮೂರ್ತಿ

 ಕವನದ ಮೂಲ: ಶ್ರೀ ಜೀ.ವಿ ಕುಲಕರ್ಣಿಯವರ  ಇಂಗ್ಲೀಷ್ ಕವನ "HOPE

Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ