ಬಂದಿತು ಬಂದಿತು ದೀಪಾವಳಿ

ಬಂದಿತು ಬಂದಿತು ದೀಪಾವಳಿ
ತಂದಿತು ತಂದಿತು ಪ್ರಭಾವಳಿ


ಮಲಗಿಹ ಜನರನು ಎಚ್ಚರಿಸುತಲಿ
ನಿದ್ದೆಯ ಹರಿಸಿ ಬೆಳಕನು ತೋರುತ 
ರವಿಯದು ತಾನ್ರೆ ಉದಯಿಪ ಮೊದಲೇ
ಸುರು ಸುರು ಬತ್ತಿಯ ಬೆಳಕನು ನೀಡಿ/ ದೀಪಾವಳಿ ಅಹ ದೀಪಾವಳಿ

ನರಕನ ವಧೆಯ ನೆನಪಿಗೆ ತರುವ 
ಪಟಾಕಿ ಶಬ್ದವ ತನ್ನೊಳು ಹೊತ್ತು
ತ್ಯಾಗಶೀಲ ಬಲೀಂದ್ರ ದೇವನ 
ಪೂಜಿಸಿ ಪಾಡುವ ಹರುಷವ ಹೊತ್ತು / ದೀಪಾವಳಿ  ಅಹ ದೀಪಾವಳಿ

ಸೋದರರನ್ನೇ ಆದರಿಸುತಲಿ
ಸೋದರ ಬಿದಿಗೆಯ ಸಂಭ್ರಮ ತೋರಿ
ಸಡಗರವನ್ನೆ ಹ್ರದಯದ್ ತುಂಬಿ
ನೋವನು ಮರೆಸುವ ಶಕ್ತಿಯ ಹೊತ್ತು/ ದೀಪಾವಳಿ ಅಹ ದೀಪಾವಳಿ

ಜನದ ಮನದ ತಮವನು ಕಳೆಯುತ 
ದೀಪದ ಬೆಳಕನು ಎಲ್ಲೆಡೆ ಚೆಲ್ಲಿ
ಜ್ಞಾನ ಜ್ಯೋತಿಯ ಹಚ್ಚುವ ತೆರದಿ
ಉರಿಯಿತು ಎಲ್ಲೆಡೆ ದೀಪಗಳಾವಳಿ/ ದೀಪಾವಳಿ ಅಹ ದೀಪಾವಳಿ



Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ