ಕಾಫಿ

ಕಾಫಿ ಇದ್ರೇನೆ ನಮಗೆ ಪ್ರೀತಿ
ಅದಿಲ್ಲದೆ  ಹೋದ್ರೆ ಫಜೀತಿ
ಕಾಫಿಯ ಬಿಟ್ಟು ಕಾವಿಯ ತೊಟ್ಟೂ 
ನಾ ಹೇಗೆ ಬದುಕೇನು //ಕಾಫೀ....

ಕಾಫಿಯ ಬಣ್ಣವು ಸೊಗಸು 
ಅಹ  ಅದರ ವಾಸನೆ ಇನ್ನೂ ಸೊಗಸು
ಕಾಫಿಗೆ ಹಾಲು ಸಕ್ಕರೆ  ಸೇರಿಸಿ
ಕುಡಿದಾಗ  ಗಮ್ಮತ್ತೂ/ಕಾಫಿ.....

ಕರಿಯ ಬಣ್ಣದ ಕಾಫಿ 
ನೀ ಕೊಡುವೆ ನಿದ್ದೆಗೆ ಮಾಫಿ
ನಿನ್ನನ್ನು ಕುಡಿದು ನಾ ಹಾಡಿ ಕುಣಿದು
ಸಂತಸದಿ ನಲಿದೇನೂ.....ಕಾಫಿ.....

ಕಾವಿಯ ತೊಟ್ಟೆನು ನಾನು
ಕಾಮಿನಿ ಬಿಟ್ಟೆನು ನಾನು
ಕವಿಯ ತೊಟ್ಟು ಕಾಫಿಯ ಬಿಟ್ಟು
ನಾ ಹೇಗೆ ಬದುಕೇನೂ / ಕಾಫಿ.....

Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ