ನಮ್ಮನೀ ಕಪಾಟು
ನಮ್ಮನೀ ಕಪಾಟು
ನಮ್ಮನೀ ಕಪಟಿನೊಳ್ಗ ಸೀರೆಗಳ್ನಗ್ತಾವ?
ಅವ್ರೇನ್ ಹೇಳ್ತಾರಂತ ನಿತ್ಕೊಂಡ್ವಸಿ ಕೇಳಾಂವ?
ಭಾಳದಿನಗಳ್ಮೇಲೆ ಸಿಕ್ಕದ ನಮಗೊಂದಿಷ್ಟಾರಾಮ
ಸದ್ಯ ತಪ್ತುಮೈಗಂಟಿಕೊಂಡಿರೋ ವ್ಯಾಯಾಮ
ಬಲೇ ಕುಸಿ ಮಾಸ್ದಿರೋ ಇಸ್ತ್ರೀನ ನೋಡಿ
ಏನ್ಹೇಳ್ತಿ ನಗಂತೂ ಚಾನ್ಸು ಉಳಿಯೋಕ್ಕೆ ನಿಂಜೋಡಿ.
ಬೆಚ್ಗೆ ಒಳ್ಗೆಇರ್ಬೋದು ಹ್ಯಾಂಗರ್ಗೆ ತಬ್ಕೊಂಡು
ಹೊರಗೋದ್ರೆ ಕಾಡ್ತದೆ ಸೀತ್ಗಾಳಿ ಹೊಡ್ಕೊಂಡು
ಆದ್ರೂನೆ ಏನೋ ಅಪಸ್ವರ ಕೇಳಿಸ್ತದ
ನಮ್ಮೊಡ್ತಿ ಕಣ್ಣಾಗ ನಿರಾಸೆ ಕಾಣಿಸ್ತದ
ಒಂದಿಷ್ಟು ದಿನ ಚೆಂದಅಲ್ಪ ವಿರಾಮ
ನುಸಿಗ್ನಮ್ಮನ್ನತಳ್ತದೆ ಈ ದೀರ್ಘವಿರಾಮ
ಅಷ್ಟೆ ಏನು ನಮ್ಮಂದ ಎಲ್ಲ್ರಿಗೂ ತೋರ್ಸ್ಬೇಕು
ನೋಡೋರ್ಕಣ್ ಬೆರ್ಗಾಗಿ ಶಾಭಾಸ್ ಅನ್ಬೇಕು
ಅದ್ಕೊಂದೇ ಉಪಾಯ ಕರೋನ ತೊಲಗ್ಬೇಕು
ಮೊದ್ಲಿದ್ದ ನೆಮ್ದಿ ಬೇಗ್ಲೇನೆ ಬರ್ಬೇಕು
ನಮಸ್ಕಾರ ಕರೋನ ಅಡ್ಬಿದ್ದೆ ನಿನಗಣ್ಣ
ನಮ್ಮನ್ನ ಬಿಟ್ಟು ಬೇಗನೆ ತೊಲಗಣ್ಣ
ನಮ್ಮೊಡತಿ ನಮ್ಮನ್ನ ತಬ್ಕೊಂಡು ನಲೀಲಿ
ನಮ್ಗೂನೆ ಒಡಹುಟ್ಟಿದೋರ್ನ್ನೋಡೊ ಚಾನ್ಸ್ ಬೇಗನೆ ಸಿಗ್ಲಿ
ಡಾ ಸತ್ಯವತಿ ಮೂರ್ತಿ
23-01-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ
Comments
Post a Comment