Posts

Showing posts with the label GURUCHARITRE

ಏಳು ಪಾವನ ಚರಣ /ಏಳು ಪರಮಾ ಕರುಣ

 ಏಳು ಪಾವನ ಚರಣ /ಏಳು ಪರಮಾ ಕರುಣ ಏಳು ದತ್ತಾತ್ರೇಯ /ಏಳು ಗುರುವೇ ಏಳು ದೇವರದೇವ /ಗಾಣಗಾಪುರದೊಡೆಯ  ಏಳು ಭಕ್ತರರಕ್ಷ / ಪರಮ ಗುರುವೇ ಹಕ್ಕಿ ಚಿಲಿಪಿಲಿ ಗಾನ /ಮಧುರತೆಯ ಸುರತಾನ ನಿನಗೆ ಕಾದಿಹು/ದು  ಶ್ರೀಪಾದನೆ ಮಂದವಾಗೆಸೆಯುತಿಹ/ ಮಾರುತನು ತಾನಿಂದು ನಿನಗೆ ಕಾದಿಹನಯ್ಯ ಬೆಳಗಾಯಿತೂ ರಾಜ್ಯಪದವಿಯ ಪಡೆದ/ ರಜಕನಿಂದಿಹನಿಲ್ಲಿ ಚರಣವಾರೋಗಿಸಲು/ ಏಳು ಗುರುವೇ ವೇದವನೆ ನುಡಿದನಾ / ಕುಲಕೆ ಹೀನನು ತಾನು ಬಂದಿಹನು ನಿನ್ನನ್ನು/ ಸೇವಿಸೆ ದೇವ ವಿಶ್ವಮೂರ್ತಿಯು ನಿ/ನ್ನಪರಿಮಿತ ಶಕ್ತಿಯನು ಅರಿತ ತಿವಿಕ್ರ/ಮ ಯತಿ  / ಐತಂದಿಹನೂ ಪರಿಪರಿಯ ಪುಷ್ಪದೊಳು /ನಿನ್ನ ಪೂಜಿಸಲು ಕಾದು ನಿಂದಿಹನೇಳು/ ಬೆಳಗಾಯಿತೂ ಬಂಜೆ ಎಮ್ಮೆಯು ಕರೆದ /ಅದ್ಭುತವ ನೋಡಿದಾ ದಂಪತಿಗಳೈತಂದು /ನಿಂದಿಹರಿಲ್ಲಿ ಅಷ್ಟರೂಪದಿ ಅಂದು /ದೀವಳಿಗೆಗೈತಂದು ವಿಶ್ವರೂಪವ ನೀನು /ಮೆರೆದೆ ಗುರುವೇ ಈಶ ಕಲ್ಲೇಶ ನೀ /ಈಶ ಸರ್ವೇಶನೀ  ಪೊಗಳುತಲಿಹನು/ ನರಹರಿ ಕವಿಯು ಕುಷ್ಟರೋಗವ ಕಳೆದೆ /ಜ್ಞಾನವನು ಕರುಣಿಸಿದೆ ಮೂರ್ಖನಿಗೆ ಬುದ್ಧಿಯನು/ ನೀಡಿದೆ ಗುರುವೆ ನಿನ್ನ ನಂಬದೆ ಬಂದ/ ಎನಗನುಗ್ರಹಮಾಡಿ ಎನ್ನ ಉದ್ಧರಿಸಿದಾ/ ಗುರುವೆ ಏಳು ಎಂದು ಬೇಡುತಲಿಹನು/ ನಂದಿಕವಿ ಬಂದಿಲ್ಲಿ ಬೆಳಗಾಯಿತೇಳಯ್ಯ/ ಪರಮ ಗುರುವೇ ಭಕ್ತವೃಂದವು ನಿನ್ನ /ಸೇವೆಗೆ ಬಂದು  ನಿಂದಿಹರೇಳು/ ಬೆಳಗಾಯಿತೂ ನಿನ್ನ ಸೇವಿಸಲೆಂದು /ಹಾಲು ತುಪ್ಪವ ತಂದು ನೆರೆದಿಹರು ಶಿಷ್ಯರೇ/ಳಯ್ಯ ಗುರುವೇ  ...

ದೇವಾ ಕರುಣೆಯ ನು ತೋರ ಲಾರೆಯ

 ದೇವಾ ಕರುಣೆಯ ನು ತೋರ ಲಾರೆಯ ಮುನಿಸಿಂ ದನೀ ಛಲವಾಂತು ನಿಂದೆಯ ಎಲ್ಲೆಡೆ  ನಿನ್ನನೆ  ಅರಸುತ ನಡೆದೇ ನಿನ್ನನೆ ಸತತವು ಅರ್ಚಿಸಿ ದಣಿದೇ ನಿನ್ನಯ ಪಾದಕೆ ಎನ್ನನೆ ಮಣಿದೇ ಎನ್ನಯ  ಕಾಯುವ ಗುರು ನೀ ನೆಂದೇ/೧/ ಪಾಪದ ಬದುಕಿಗೆ ರೋಸಿದೆ ಜೀವಾ ನಿನ್ನನು ಕಾಣದೆ  ಮಿಡಿದಿದೆ ನೋವಾ ಶಾಂತಿಯ ಕರುಣಿಸು ನೋವನು ಹರಿಸೂ ಕ್ಲೇಶವನೆಲ್ಲವ ಕೊನೆಗೊಳಿಸು ಹರಸು//೨// ಅನಸೂಯೆಗಂದೊಲಿದೆಯೋ ಗುರುವೇ ಸೌಮಿನಿಯನಂದು ಕಾಯ್ದೆಯೋ ನೀನು ದೀನಳ ಮೇಲೀ ಕೋಪವಿದೇಕೋ ಕಾಯೋ ಗಾಣಗಾ ಪುರದರಸನೇ /೩ ಡಾ ಸತ್ಯವತಿ ಮೂರ್ತಿ- ಗಾಯನ  ಸುರೇಖ ಹೆಗ್ಗಡೆ

ರಜಕನಾದನು ರಾಜನು

 ರಜಕನಾದನು ರಾಜನು 1.ಬಿನ್ನಪವ ಲಾಲಿಪುದು ಗುರುವೇ ಗನ್ನಮಹಿಮಾ ಪಾದಯತಿಗಳ ಪೊನ್ನ ಚರಿತೆಯನು  ಕೇಳ್ವ  ಬಯಕೆಯು ಅಂತರಂಗದೊಳು ಇನ್ನು ಮುಂದಕೆ ಎತ್ತ ಪೋದರು ಸನ್ನುತವರ ಗುರುಯತಿಗಳೆಂಬು ದನೊಲುಮೆಯಲಿತಿಳಿಯಲುಲಿವುದೆನುತೆರಗಿದನು ಪದಕೆ 2.ಪದದೊಳೆರಗಿದ ಭಕ್ತನೇಳಿಸಿ ಮುದದೆ ಹರಸಿದ ಸಿದ್ಧರವನಿಗೆ ಪದುಮನಾಭನ ವಿಮಲಚರಿತೆಯ ಬಿಡದೆ ಪೇಳಿದರು ಪದವ ಬಿಡು ನೀ ಮೇಲೆ ಏಳೈ ಪದವ ಕೊಡುವಾ ಕತೆಯ ಪೇಳುವೆ ಪದದಿನುಡಿಯುತ ಗುರುಮಹಿಮೆಯಪಾದಯತಿವರನ 3.ಕುರುವ ಪುರದೊಳು ಗುರುವು ನೆಲೆಸಿರೆ ವರವ ಕೋರಿದ ರಜಕನೋರ್ವನು ಭರದಿ ಪಡೆದಾ ರಾಜ್ಯಪದವಿಯ ದೇಶಕೋಶಗಳ ಆರಿಗಾದರು ವರವ ನೀವರು ಗುರುವ ಕರುಣೆಯು ಹಿರಿದು ಎಲ್ಲಕು ಸಿರಿಯ ತರುವುದು ಬಯಸಿದೊಡನೆಯೆ ತಡವ ಮಾಡದೆಲೆ 4.ಗುರುವೆ ಕರುಣಿಪುದು ವಿವರಿಸುವುದು ವರಗುರುವ ವೃತ್ತಾಂತವನೆನಗೆ ಕರುಣೆತೋರ್ವುದುಪಾವನಗೊಳಿಸುವುದು ಜನುಮವನ್ನು ಕುರುವಪುರದಲಿ ರಜಕನವನಿಗೆ ಕರುಣೆಯಾದುದ ತಿಳಿಯೆ ಪೇಳ್ವುದು ವರವದೇವನು ಇತ್ತರೆನುವುದ ಬಿಡಿಸಿ ತಿಳಿಸುವುದು 5.ಅಂದು ಅಂಬಿಕೆ ವರವ ಪಡೆಯಲು ಮುಂದು ನಡೆದುದು ಬಹಳ ಮಹಿಮೆಯು ಚಂದದಿಂದಲಿ ಗುರುವು ಕುರುವಪುರದಲಿ ನೆಲೆಸಿರಲು ಬಂದು ನಿತ್ಯದಿ ಸ್ನಾನಗೈವರು ಸಂದ ಸಂಗಮ ತೀರ್ಥಗಳಲ್ಲಿ ಬಂದ ಭಕ್ತರ ಕರುಣಿಸುತತಾ ಪಾದಯತಿವರರು 6.ನಿತ್ಯದಲಗಸನೋರ್ವ ಬರುವನು ಸತ್ಯಮೂರುತಿ ಗುರುವ ಕಾಣುತ ಸತ್ಯದಿಂದಲಿ ನಮಿಸಿ ನಡೆವನುಪರಿವಿಡಿಯಲಂತೆ ಇಂತುದಿನಗಳು ಉರುಳಿಪೋಗಲು ಬಂತು ದಿನವದು ಬಾಳಲಗಸನ...

ಓಂ ಜಯಜಯ ದತ್ತ ಪ್ರಭು

ಆರತಿ ಹಾಡು ಓಂ ಜಯಜಯ ದತ್ತ ಪ್ರಭು ಜಯ ದತ್ತ ಪ್ರಭು ಭಕ್ತರ ರಕ್ಷಕ ನೀನೇ ಕರುಣಾಕರನೆ ಅತ್ರಿಯ ತಪಸಿಗೆ ಮಣಿದೇ ಅನಸೂಯೆಗೊಲಿದೇ ಹರಿಹರ ರೂಪನು ನೀನೆ ದತ್ತಾತ್ರೇಯನೆ ಅವರೆಯ ಬಳ್ಳಿಯ ಕೀಳುತ ಬಡತನವ ಕಳೆದೆ ಗೊಡ್ಡೆಮ್ಮೆಯ ಕರೆಸಿದೆ ನೀ ನಿನಗೆಣೆ ಯಾರೈ ಒಣಗಿದ ಮರವನು ಚಿಗುರಿಸಿ ನರಹರಿಗೆ ಒಲಿದೆ ನಂದಿಯ ಸಂಶಯ ಬಿಡಿಸಿದೆ ಕುಷ್ಟವನು ಕಳೆದೆ ರಜಕನ ಭಕ್ತಿಗೆ ಮೆಚ್ಚಿದೆ ರಾಜ್ಯವ ನೀಡಿದೆ ಪಿಶಾಚ ಬಾಧೆಯ ಬಿಡಿಸಿದೆ ಮಗುವ ಬದುಕಿಸಿದೆ ಭಾಸ್ಕರ ತಂದ ಹಿಡಿಯನ್ನ ಅಕ್ಷಯವೆಸಗಿದೆ ಊರಿಗೆ ಊರನು ತಣಿಸುತ ಅದ್ಭುತವ ಮೆರೆದೆ ತಂತುಕ ಭಕ್ತಗೆ ಮರುಗಿ ಶಿಶೈಲಕ್ಕೊಯ್ದೆ ಹೊಲದ ಬೆಳೆಯನು ಹೆಚ್ಚಿಸಿ ರೈತನ ಹರಸಿದೆ ದತ್ತಾತ್ರೇಯನು ನೀನೆ ಶ್ರೀಪಾದನು ನೀ ನರಸಿಂಹ ಸರಸ್ವತಿ ನೀ ಲೀಲಾಮಯನೆ ನಿನ್ನಯ ಶರಣಕೆ ಬಂದೆನು ನಿನ್ನಾ ಮೊರೆಹೊಕ್ಕೆ ನೀನೇ ಕಾಯಲು ಬೇಕೈ ಅನ್ಯರ ಕಾಣೆನೋ ಅರ್ಚಿಸಲರಿಯೆನು ನಿನ್ನನು ಮೆಚ್ಚಿಸಲರಿಯೆನು ನೇಮ ನಿಯಮದರಿವಿಲ್ಲಾ ನೀನೇ ನನಗೆಲ್ಲ ನರಹರಿಯಾ ಭಕುತಿಯಿರದು ನಂದಿ ಹಟವಿರದು ರಜಕನ ನೇಮ ನನಗಿರದು ನೀಡೋ ನಿಷ್ಟೆಯಾ ಗಾಣಗಪುರದರಸನು ನೀ ನಂಬಿದರ ಪೊರೆದೆ ಕರುಣಿಸಿ ನಮ್ಮನು ಕಾಯೋ  ದತ್ತಾತ್ರೇಯನೇ

ಜಗದಲಿ ಸುಂದರವಾದುದು

ಜಗದಲಿ ಸುಂದರವಾದುದು ದತ್ತದೇವನ ನಾಮವಿದು ಪಾಹಿ ದತ್ತ ಪಾಹಿ ದತ್ತ  ಪಾಹಿ ದತ್ತ ಪಾಹಿ ದತ್ತ ಅನ್ಸೂಯೆಗೆ ಮಗನಾದ  ಅತ್ರಿಮುನಿಯ ಪುತ್ರನಾದ ತ್ರಿಮೂರ್ತಿ ರೂಪವ ತಾಹೊತ್ತ ದತ್ತಾತ್ರೇಯನು ತಾನಾದ / ಪಾಹಿ ದತ್ತ ಅಗಸಗೆ ಅನುಗ್ರಹ ಮಾಡಿದನು ರಾಜ್ಯ ಪದವಿಯ ನೀಡಿದನು ಅವರೆ ಬಳ್ಳಿಯ ಕಿತ್ತನು ಹೊನ್ನಿನ ಹೊಳೆಯನು ಹರಿಸಿದನು /ದತ್ತ ಗಾಣಗಪುರದಲಿ  ನೆಲೆಸಿದನು ಭಕ್ತರ ವರವಾಗಿ ಮೆರೆದನು ಶರಣರ ಪೊರೆಯುವ ಗುರುವನು ದತ್ತಾತ್ರೇಯ ದೇವನು /ಪಾಹಿ ದತ್ತ

ದತ್ತಾತ್ರೇಯ ಸುಪ್ರಭಾತ

 ಏಳು ಪಾವನ ಚರಣ ಏಳು ಪರಮಾ ಕರುಣ ಏಳು ದತ್ತಾತ್ರೇಯ ಏಳು ಗುರುವೇ ಏಳು ದೇವರದೇವ ಗಾಣಗಾಪುರದೊಡೆಯ  ಏಳು ಭಕ್ತರಕ್ಷ ಪರಮ ಗುರುವೇ ಹಕ್ಕಿ ಚಿಲಿಪಿಲಿ ಗಾನ ಮಧುರತೆಯ ಸುರತಾನ ನಿನಗೆಂದೆ ಕಾದಿಹುದು  ಶ್ರೀಪಾದನೇ ಮಂದವಾಗೆಸೆಯುತಿಹ ಮಾರುತನು ತಾನಿಂದು ನಿನಗೆ ಕಾದಿಹನಯ್ಯ ಬೆಳಗಾಯಿತೂ ರಾಜ್ಯಪದವಿಯ ಪಡೆದ ರಜಕನಿಂದಿಹನಿಲ್ಲಿ ಚರಣವಾರೋಗಿಸಲು ಏಳು ಗುರುವೇ ವೇದವನೆ ನುಡಿದನಾ ಕುಲಕೆ ಹೀನನು ತಾನು ಬಂದಿಹನು ನಿನ್ನನ್ನು ಸೇವಿಸೆ ದೇವಾ ವಿಶ್ವಮೂರ್ತಿಯು ನಿನ್ನ ಅಪರಿಮಿತ ಶಕ್ತಿಯನು ಅರಿತ ತಿವಿಕ್ರಮ ಯತಿ   ಐತಂದಿಹನು ಪರಿಪರಿಯ ಪುಷ್ಪದೊಳು ನಿನ್ನ ಪೂಜಿಸಲೆಂದು ಕಾದು ನಿಂದಿಹನೇಳು ಬೆಳಗಾಯಿತೂ ಬಂಜೆ ಎಮ್ಮೆಯು ಕರೆದ ಅದ್ಭುತವ ನೋಡಿದಾ ದಂಪತಿಗಳೈತಂದು ನಿಂದಿಹರಿಲ್ಲಿ ಅಷ್ಟರೂಪದಿ ಅಂದು ದೀವಳಿಗೆಗೈತಂದು ವಿಶ್ವರೂಪವ ನೀನು ಮೆರೆದೆ ಗುರುವೇ ಈಶ ಕಲ್ಲೇಶ ನೀ ಈಶ ಸರ್ವೇಶ ನೀನೆಂದು  ಪೊಗಳುತಲಿಹನು ನರಹರಿ ಕವಿಯು ಕುಷ್ಟರೋಗವ ಕಳೆದೆ ಜ್ಞಾನವನು ಕರುಣಿಸಿದೆ ಮೂರ್ಖನಿಗೆ ಬುದ್ಧಿಯನು ನೀಡಿದೇ ಗುರುವೆ ನಿನ್ನ ನಂಬದೆ ಬಂದ ಎನಗನುಗ್ರಹಮಾಡಿ ಎನ್ನ ಉದ್ಧರಿಸಿದಾ ಗುರುವೆ ಏಳು ಎಂದು ಬೇಡುತಲಿಹನು ನಂದಿಕವಿ ಬಂದಿಲ್ಲಿ ಬೇಳಗಾಯಿತೇಳಯ್ಯ ಪರಮ ಗುರುವೇ ಭಕ್ತವೃಂದವು ನಿನ್ನ ಸೇವೆಗೆಂದೇ ಬಂದು ಕಾದು ನಿಂದಿಹರೇಳು ಬೆಳಗಾಯಿತೂ ನಿನ್ನ ಸೇವಿಸಲೆಂದು ಹಾಲು ತುಪ್ಪವ ತಂದು ನೆರೆದಿಹರು ಶಿಷ್ಯರೂ ಏಳು ಗುರುವೇ ಬಂಜೆ ಮುದುಕಿಯುಯೆನಗೆ ಪುತ್...

ಓಂ ದತ್ತ

 ಓಂ ದತ್ತ ಓಂದತ್ತ ಪರತ್ಪರಾ ದತ್ತ ಓಂಕಾರ ದತ್ತ ತವಶರಣಂ ನಮಾಮಿ ದತ್ತ ಸ್ಮರಾಮಿ ದತ್ತ ಪಾಹಿ ಪಾಹಿ ದತ್ತ ತವ ಶರಣಂ ಬ್ರಹ್ಮ ವಿಷ್ಣು ಮಹೇಶ್ವರ ರೂಪ ತ್ರಿಮೂರ್ತ್ಯಾತ್ಮಕ ತವಶರಣಂ ತ್ರಿಮೂರ್ತಿರೂಪ ತ್ರಿಗುಣಾತೀತ ಹೇ ಅತ್ರಿಪುತ್ರ ತವಶರಣಂ ದತ್ತಾತ್ರೇಯ ಓಂ ಶ್ರೀಪಾದ ಯತಿ ಓಂ ನರಸಿಂಹ ಸರಸ್ವತಿ ತವಶರಣಂ  ಭಕ್ತವತ್ಸಲ ಭಕ್ತ ಪರಧೀನ ಗಾಣಗಪುರಧೀಶ ತವಶರಣಂ ಪ್ರತಿ ಸಾಲನ್ನೂ ಎರಡೆರಡು ಬಾರಿ ಉಚ್ಚರಿಸಬೇಕು ಸತ್ಯವತಿ ಮೂರ್ತಿ

ಶರಣು ಬಂದೆನು ನಾನು

 ಶರಣು ಬಂದೆನು ನಾನು  ನಿನ್ನ ಚರಣಕೆ ದೇವ ಅನ್ಯರನು ನಾ ಕಾಣೆ ಕಷ್ಟಗಳ ಪರಿಹರಿಸೋ  /ಪಲ್ಲವಿ                ನಾನು ನನ್ನದು ಎಂಬ ಸ್ವಾರ್ಥದಿಂದಲಿ ನಡೆದು                ನಿನ್ನ ಸ್ಮರಣೆಯನೂ ಮರೆತಿದ್ದೆನಯ್ಯ                ಎಲ್ಲ ಅರಿತಿಹೆನೆಂಬ ಅಹಂಕಾರದಲಿ ಮೆರೆದು                 ಏನನೂ ಅರಿಯದಿಹ ಮೂಢಳಾದೆ ದೇವಾ/1/ ಪತಿಸುತರು ಎನ್ನವರು ಹಿತವನ್ನೆ ಕೋರುವರು  ಒಡಹುಟ್ಟಿದವರಿವರು ಎನ್ನ ಬಾಂಧವರು ಎಂದೆಲ್ಲ ಗಳಹುತಲಿ ಮೆರೆದಿದ್ದೆ ನಾನು  ದಿಟವಾಗಿ ಎನ್ನೊಡೆಯ ನಿನ್ನ ಮರೆತೇನಯ್ಯ/2/                ಮೂಢತನವದು ನನ್ನ ಮುಸುಕಿರಲು ಹೇ ದೇವಾ           ನಿನ್ನ ಮಹಿಮೆಯ ನಾನು ಅರಿಯಲಾರದೆ ಹೋದೆ           ಅಂದು ಆ ರಜಕನಿಗೆ ತಿಳಿವ ನೀಡಿದ ತೆರದಿ           ಬಂದು ನೀ ನನ್ನನ್ನು ಉದ್ಧರಿಸು ಗುರುವೇ/3/ ಅನಸೂಯೆಗೊಲಿದ ತ್ರಿಮೂರ್ತಿಯೂ ನೀನೆ  ಶ್ರೀಪಾದನಾಗಿ ಮೆರೆದ ದತ್ತಮೂರ್ತಿಯು ನೀನೆ ನೀನೆ ...

ದತ್ತಾತ್ರೆಯ ಅಷ್ಟೋತ್ತರ

ಓಂ ದತ್ತಾತ್ರೇಯಾಯ ನಮಃ ಓಂ ದತ್ತದೇವಾಯ ನಮಃ ಓಂ ದತ್ತ ಮೂರ್ತಯೇ ನಮಃ ಓಂ ದಕ್ಷಿಣಾ ಮೂರ್ತಯೇ ನಮಃ ಓಂ ದೀನಬಂಧುವೇ ನಮಃ ಓಂ ದುಷ್ಟ ಶಿಕ್ಷಕಾಯ ನಮಃ ಓಂ ದಂಡಧಾರಿಣೇ ನಮಃ ಓಂಧರ್ಮಚರಿತಾಯ ನಮಃ ಓಂ ದಿಗಂಬರಾಯ ನಮಃ ಓಂ ದೀನ ರಕ್ಷಕಾಯ ನಮಃ ಓಂ ಧರ್ಮಮೂರ್ತಯೇ ನಮಃ ಓಂ ಬ್ರಹ್ಮರೂಪಾಯ ನಮಃ ಓಂ ತ್ರಿಮೂರ್ತಿರೂಪಾಯ ನಮಃ ಓಂ ತ್ರಿಗುಣಾತ್ಮಕಾಯ ನಮಃ ಓಂ ಅತ್ರಿಪುತ್ರಾಯ ನಮಃ ಓಂ ಅಶ್ವತ್ಠರೂಪಾಯ ನಮಃ ಓಂ ಅಪ್ರತಿಮಾಯ ನಮಃ ಓಂ ಅನಾಥರಕ್ಷಕಾಯ ನಮಃ ಓಂ ಅನಸೂಯಾ ತನಯಾಯ ನಮಃ ಓಂ ಆದಿಮೂರ್ತಯೇ ನಮಃ ಓಂ ಆದಿ ಮೂಲಾಯ ನಮಃ ಓಂ ಆದಿರೂಪಾಯ ನಮಃ ಓಂ ಭಕ್ತಕಲ್ಯಾಣದಾಯ ನಮಃ ಓಂ ಬಹು ರೂಪಾಯ ನಮಃ ಓಂಭಕ್ತವರದಾಯ ನಮಃ ಓಂಓಂ ಭಕ್ತಿಪ್ರಿಯಾಯ ನಮಃ ಓಂ ಭಕ್ತಪರಾಧೀನಾಯ ನಮಃ ಓಂ ಭಕ್ತ ರಕ್ಷಕಾಯ ನಮಃ ಓಂ ಭವಭಯ ದೂರಕೃತೇ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಭಕ್ತ ವಂದಿತಾಯ ನಮಃ ಓಂಭವಬಂಧನ ಮೋಚಕಾಯ ನಮಃ ಓಂ ಸಿದ್ಧಾಯ ನಮಃ ಓಂ ಶಿವರೂಪಾಯ ನಮಃ ಓಂಶಾಂತರೂಪಾಯ ನಮಃ ಓಂಸುಗುಣರೂಪಾಯ ನಮಃ ಓಂಶ್ರೀಪಾದಯತಯೇ ನಮಃ ಓಂ ಶ್ರೀ ವಲ್ಲಭಾಯ ನಮಃ ಓಂ ಶಿಷ್ಟರಕ್ಷಣಾಯ ನಮಃ ಓಂಶಂಕರಾಯ ನಮಃ ಓಂಕಲ್ಲೇಶ್ವರಾಯ ನಮಃ ಓಂಕವಿ ಪ್ರಿಯಾಯ ನಮಃ ಓಂ ಕಲ್ಪಿತ ವರದಾಯ ನಮಃ ಓಂ ಕರುಣಾಸಾಗರಾಯ ನಮಃ ಓಂ ಕಲ್ಪದ್ರುಮಾಯ ನಮಃ ಓಂಕೀರ್ತನ ಪ್ರಿಯಾಯ ನಮಃ ಓಂ ಕೋಟಿಸೂರ್ಯ ಪ್ರಕಾಶಾಯ ನಮಃ ಓಂ ಜಗದ್ವಂದ್ಯಾಯ ನಮಃ ಓಂ ಜಗದ್ರೂಪಾಯ ನಮಃ ಓಂ ಜಗದೀಶಾಯ ನಮಃ ಓಂಜಗದ್ಗುರವೇ ನಮಃ ಓಂ ಜಗತ್ಪತಯೇ ನಮಃ ಓಂ ಜಗದಾತ್ಮನೇ ನಮಃ ಓಂ ಗಾನಲೋಲುಪ...

ಕವಾಲಿ

  ಇದ್ದರೆ ಶಾಲೆಗೆ ನಿತ್ಯವೂ ರಜ   ಮಕ್ಕಳಿಗೆಲ್ಲ ಮಜವೋ ಮಜ   ಪಾಠದ ಗೋಜು ಇಲ್ಲವೇ ಇಲ್ಲ   ಆಟವೇ ಆಟ ಇಡಿ ದಿನವೆಲ್ಲ  ಇದ್ದರೆ ಶಾಲೆಗೆ ನಿತ್ಯವೂ ರಜ ಆದೀತು ಮಕ್ಕಳ ಪಾಲಿಗೆ ಸಜ ಬರಬೇಕು ಒಮ್ಮೊಮ್ಮೆನಡುವಲಿ ರಜ ಹಾಲಿಗೆ ಸಕ್ಕರೆ ಬೆರತಂತೆ ನಿಜ ಬೆಳಗಾಯ್ತು ಎಂದರೆ ಶಾಲೆಗೆ ಓಟ  ಸಂಜೆಗೆ ಬರುವುದು ಟ್ಯೂಷನ್ ಕಾಟ   ರಾತ್ರಿಬೆಳಗೂ ಓದುವ ಭೂತ   ಟಿವಿ ಆಟ ಎಲ್ಲವೂ ಖೋತ ಬೆಳಗಾದ್ರೆ ಶಾಲೆಗೆ ಹೋಗುವ ಸಡಗರ ರಾತ್ರಿಗೆ ಟ್ಯೂಷನ್ಇದ್ದರೆ ಆದರ  ರಾತ್ರಿಬೆಳಗೂ ಪಾಠವನೋದಲು  ಸಂಜೆಯ ಸಮಯದಿ ಆಟವೇ ಆಟ                                         ಬಿಳಿಷೂಸಿಗಾಗ್ಬೇಕು ಆಗಾಗ್ಗೆ ಪಾಲಿಷು                                         ಕರಿಷೂಸಿಗಾಗ್ಬೇಕು ನಿತ್ಯವೂ ಮಾಲೀಷು           ...