ಅಮರ ಪ್ರೇಮ
ಅಮರ ಪ್ರೇಮ
ಮದುವೆಯೆಂಬುದೊಂದಾತ್ಮಗಳಮಿಲನವದಕೇ
ಕೆದೇಹಗಳ ಮಿಲನಕ್ಕೆ ಬಂಧನ? ತೊಡರೇಕೆ?
ಪ್ರೇಮ ಪ್ರೇಮವೆ ಸಲ್ಲ ಮಣಿದಿರಲು ಪರಿಸರಕೆ
ಪ್ರೇಯಸಿಯಪ್ರೇಮರಾಗದಪಶ್ರುತಿಮಿಡಿತಕೆ.
ಚಿರವಾದ ಬೆಳಕಿನ
ಮನೆಯದುವೆ ದಾರಿಗುಸುರು
ಬಿರುಗಾಳಿಗಂಜದೆಲೆ
ಅಳುಕದೆಲೆ ನಿಲ್ವುದದು
ದಡಮುಟ್ಟೆತೊಳಲಾಡ್ವನಾವಿಕರಕಲ್ಪತರು
ಎತ್ತರದಿ ನಿಂದಿಹ
ಧ್ರುವತಾರೆ ನಿತ್ಯವದು
ಅಧರವದರಮೃತವಕಳೆದುಕೆನ್ನೆ
ರಂಗಳಿಸಿ
ನಿಂದರೂ ಕಾಲನ ಹೊಡೆತಕೆ
ಸಿಗದು ಪ್ರೇಮ
ವರುಷಗಳುರುಳಿದರೂ
ಮಾಸದದರ ರಂಗಳಿಸಿ
ಮರಣದಂಗಳದಲೂ
ಮಿನುಗುವುದು ನಿಜಪ್ರೇಮ
ಇದಸತ್ಯವೆನಿಸಿದರೆ
ನಿಲಿಸುವೆನು ಬರೆವುದನು
ಇರಲಿಲ್ಲ ಇಂಥ
ಪ್ರೇಮಿಗಳೆಂದು ನಂಬುವೆನು.
ಈ ಕವನದ ಮೂಲ
Let me not to the marriage of true minds
ಡಾ ಸತ್ಯವತಿ ಮೂರ್ತಿ
26-06-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ
ಕುವೆಂಪು ಪ್ರಾಧಿಕಾರದಿಂದ ಪ್ರಕಟವಾಗುವ ಚಾತುರ್ಮಾಸಿಕ ಪತ್ರಿಕೆ೩ ರಲ್ಲೂ ಪ್ರಕಟವಾಗಿದೆ
Comments
Post a Comment