ರಜಕನಾದನು ರಾಜನು

 ರಜಕನಾದನು ರಾಜನು


1.ಬಿನ್ನಪವ ಲಾಲಿಪುದು ಗುರುವೇ

ಗನ್ನಮಹಿಮಾ ಪಾದಯತಿಗಳ

ಪೊನ್ನ ಚರಿತೆಯನು  ಕೇಳ್ವ  ಬಯಕೆಯು ಅಂತರಂಗದೊಳು

ಇನ್ನು ಮುಂದಕೆ ಎತ್ತ ಪೋದರು

ಸನ್ನುತವರ ಗುರುಯತಿಗಳೆಂಬು

ದನೊಲುಮೆಯಲಿತಿಳಿಯಲುಲಿವುದೆನುತೆರಗಿದನು ಪದಕೆ


2.ಪದದೊಳೆರಗಿದ ಭಕ್ತನೇಳಿಸಿ

ಮುದದೆ ಹರಸಿದ ಸಿದ್ಧರವನಿಗೆ

ಪದುಮನಾಭನ ವಿಮಲಚರಿತೆಯ ಬಿಡದೆ ಪೇಳಿದರು

ಪದವ ಬಿಡು ನೀ ಮೇಲೆ ಏಳೈ

ಪದವ ಕೊಡುವಾ ಕತೆಯ ಪೇಳುವೆ

ಪದದಿನುಡಿಯುತ ಗುರುಮಹಿಮೆಯಪಾದಯತಿವರನ


3.ಕುರುವ ಪುರದೊಳು ಗುರುವು ನೆಲೆಸಿರೆ

ವರವ ಕೋರಿದ ರಜಕನೋರ್ವನು

ಭರದಿ ಪಡೆದಾ ರಾಜ್ಯಪದವಿಯ ದೇಶಕೋಶಗಳ

ಆರಿಗಾದರು ವರವ ನೀವರು

ಗುರುವ ಕರುಣೆಯು ಹಿರಿದು ಎಲ್ಲಕು

ಸಿರಿಯ ತರುವುದು ಬಯಸಿದೊಡನೆಯೆ ತಡವ ಮಾಡದೆಲೆ


4.ಗುರುವೆ ಕರುಣಿಪುದು ವಿವರಿಸುವುದು

ವರಗುರುವ ವೃತ್ತಾಂತವನೆನಗೆ

ಕರುಣೆತೋರ್ವುದುಪಾವನಗೊಳಿಸುವುದು ಜನುಮವನ್ನು

ಕುರುವಪುರದಲಿ ರಜಕನವನಿಗೆ

ಕರುಣೆಯಾದುದ ತಿಳಿಯೆ ಪೇಳ್ವುದು

ವರವದೇವನು ಇತ್ತರೆನುವುದ ಬಿಡಿಸಿ ತಿಳಿಸುವುದು


5.ಅಂದು ಅಂಬಿಕೆ ವರವ ಪಡೆಯಲು

ಮುಂದು ನಡೆದುದು ಬಹಳ ಮಹಿಮೆಯು

ಚಂದದಿಂದಲಿ ಗುರುವು ಕುರುವಪುರದಲಿ ನೆಲೆಸಿರಲು

ಬಂದು ನಿತ್ಯದಿ ಸ್ನಾನಗೈವರು

ಸಂದ ಸಂಗಮ ತೀರ್ಥಗಳಲ್ಲಿ

ಬಂದ ಭಕ್ತರ ಕರುಣಿಸುತತಾ ಪಾದಯತಿವರರು


6.ನಿತ್ಯದಲಗಸನೋರ್ವ ಬರುವನು

ಸತ್ಯಮೂರುತಿ ಗುರುವ ಕಾಣುತ

ಸತ್ಯದಿಂದಲಿ ನಮಿಸಿ ನಡೆವನುಪರಿವಿಡಿಯಲಂತೆ

ಇಂತುದಿನಗಳು ಉರುಳಿಪೋಗಲು

ಬಂತು ದಿನವದು ಬಾಳಲಗಸನ

ಅಂತರಂಗವ ತಿಳಿದು ವರವನು ನೀಡುವಾಚಣವು


7.ನದಿಗೆ ಬರುವನು ದಿನವು ರಜಕನು

ಉದರಪೋಷಣೆಗಾಗಿ ನಿತ್ಯವು

ವಿವಿಧ ಬಟ್ಟೆಗಳೊಗೆದು ಶುದ್ಧಿಯ ಮಾಡುತಿರುತಿಹನು

ನದಿಗೆ ಬರುತಿರೆ ಗುರುವು ನಿತ್ಯವು

ಉದಯ ಸಮಯದಿ ಮಿಂದು ಜಪಿಸಲು

ನದಿಯ ತೀರದಿ ಕಾಣುವಗಸನುಮಣಿವನಿತ್ಯದಲಿ


8.ಕಸವುಡುಗತ ಮಠದಮುಂದನ

ಗಸಬಳಿದುಸಾರಿಸಿಹಸನುಮಾ

ಡಾಸ್ಥೆಯಿಂದಲಿಕಾದುನಿಲುವನು ಗುರುವ ಬರವನ್ನು

ಏಸುದಿನಗಳು ಕಳೆದುಹೋದರು 

ಮಾಸಲಿಲ್ಲವು ಅವನ ಭಕುತಿಯು

ವಾಸುದೇವನ ರೂಪಗುರುವನು ಮೆಚ್ಚಿಸುವ ಪರಿಯ


9.ಒಂದುದಿನದಲಿ ನಿತ್ಯದಂದದಿ

ಬಂದನಗಸನು ಕಸವಬಳಿದನು

ಬಂದುನಿಂದಿರೆಗುರುವಕಾಣಲು ಕಂಡನರಸನನು

ಬಂದುನಿಂದವು ಸಕಲಪಡೆಯದು

ಚಂದದೊಳರಸ ತಾನಿಳಿ ದರ

ಥದಕೆಳಗೆಸುತ್ತಿಬರುತಿಹಪರಿವಾರದೊಡನಾಗ


10.ನೋಡಿದನಗಸತಾನುದೊರೆಯನು

ನೋಡಿದನವರ  ಠೀವಿ ವೈಭವ 

ಆಡುತಾಡುತಬರುವವನನುಸಕಲಪರಿಜನರನು

ನೋಡುನೋಡುತಮನದಲಾದುದು

ಪಡಲು ಸುಖವನು ,ರಾಜ್ಯಬಯಕೆಯು

ಆಡುಮಾತಿನದಲ್ಲಪದವಿಯುಬೇಕದಕೆ ಪುಣ್ಯ


11.ಚಿಂತಿಸುತ ಮೈಮರೆತನಗಸನು

ಅತ್ತಬಂದಿಹ ಗುರುವ ಮರೆತನು

ಅಂತರಂಗವನರಿತಗುರುಗಳುನಸುನಗುತನುಡಿದರ್

ಎತ್ತಲಿಹುದೈ ಅಗಸ ನಿನ್ನಯ 

ಚಿತ್ತವೃತ್ತಿಯು ಇಂತಿದೇತಕೆ

ಚಿತ್ತವಾಯಿತು ರಾಜ್ಯದಾಹಕೆ ಸರಿಯೆ ನೀಪೇಳು


12.ಗುರುವು ಮನದಿಂಗಿತವನುಡಿದಿರ

ಲಾರಜಕ ನಾಚಿದನು ಮನದಲಿ

ಶರಣುಗುರುವೇ ಮನ್ನಿಸುವುದೆನ್ನ ಚಪಲತೆಗಾಗಿ

ಅರಿವು ಹೋದುದು ದೊರೆಯ ನೋಡಿರೆ

ಮರೆತನದರಲಿ ಮನವನಾನೈ

ಅರಿವುನೀಡುತಪೊರೆವುದೆನುತೆರಗಿದನುಪದದೊಳು


13.ರಾಜವಂಶದಿ ಹುಟ್ಟುವಾಸೆಯು

ರಾಜ್ಯಪದವಿಯಪಡೆಯುವಾಸೆಯು

ರಜಕನಿನಗಾದುದನು ಬಲ್ಲೆನುವರವನಿತ್ತೆನು ನಾ

ರಾಜವಂಶದಿಹುಟ್ಟಿಬೆಳೆಯುತ

ರಾಜಭೋಗವಸವಿದಬಳಿಕವೆ

ರಜಕ ನೀನೆಮ್ಮ ಬಳಿಗೆಬರುವುದು ದರುಶನಕೆಂದರ್.........bhaga2


14.ಜಗದ ಭೋಗಕೆ ನಾನು ಗೈದೆನು

ಜಗದ ಜನಕನು ನಿನ್ನ ಮರೆತೆನು

ಜಗವನೀಡುವ ಶಕ್ತದೇವರ ಕಿಲುಬ ಬೇಡುತಲಿ

ನಗಧರನು ನೀನೆಂಬಮಾತನು

ಅಂಗಮೋಹದಿಮರೆತುಮೆರೆದೆನ

ನಂಗಭಸಿತನೆಕಾವುದೆನ್ನನುಮತಿಯನೀಡುತಲಿ


15.ಹಲವುಬಗೆಯಲಿ ಬೇಡಲಗಸವಿ

ಮಲಚರಿತ ಶ್ರೀಪಾದರವನನು

ಹಲವುಮಾತಲಿಸಂತಯಿಸುತಿಂತೆಂದು ನುಡಿದಿರಲು

ಎಲವೊ ರಜಕನೆ ಆಸೆಯೆನುವುದು

ಹಲವುಬಗೆಯದುಗುಣವುತಾಮಸ

ಹಲವುಮಾತೇನರಸನಾಗುತಕಳೆದುಬರುವುದು ನೀ


16.ನಿಮಗೆ ನಮ್ಮಯ ಹರಕೆ ಸಲ್ವುದು

ಕೊನೆಯಕಾಲಕೆ ಬಂದುನೋಳ್ಪೆವು

ನಿನ್ನರಾಜ್ಯದ ಗಡಿಗೆ ಬರುವೆವು ಚಿಂತಿಸದಿರುವುದು

ಎನ್ನ ನಾಮವುಬೇರೆಯಪ್ಪುದು

ನಿನ್ನ ಕಾಣುವಸಮಯಬರಲಿರೆ

ಇನ್ನು ನೀನೀಗಹೊರಡುವುದು ಪದವಿ ಪಡೆಯಲಹುದು


17.ಅಗಸಕೇಳೈ ಮಾತದೊಂದಿದೆ

ಈಗನಿನಗೆಲೆಮುಪ್ಪುಕವಿದಿದೆ

ಮಗುಳಿಬರುವಾಜನುಮದಲ್ಲಿಯರಸನೆನೆಸುವುದುನೀ

ಆಗಬಹುದೇನೆನುತಕೇಳಲು

ಅಗಸನೊಪ್ಪಿದ ಬಹಳಹರುಷದ

ಲಾಗುರುವುನುಡಿದಿರಲು ತನ್ನ ಮನದಿಚ್ಛೆಯನಾಗ


18.ಅಗಸಪೋಪುದು ಬೇಗ ನೀನೈ

ಜಗವ ತೊರೆವುದು ಮರಳಿಪುಟ್ಟಲು

ಮುಗಿದುಹೋಯಿತು ನಿನ್ನಹೊತ್ತದು ಈ ಜನುಮದೊಳಗೆ

ಜಗದಿಪುಟ್ಟುವೆ ಮರಳಿನೀನೈ

ಮಗನೆನಿಸಿ ರಾಜಗೆ ಧರೆಯೊಳಗೆ

ಭೋಗಸುಖಗಳಕಂಡುಬಾರೈರಜಕರಾಜನೆ ನೀ


19.ತಾಮಸಗುಣದಲಿಬಯಸಿದೆ ನೀ

ನೀಮುಕುಟವನು ಪುಟ್ಟುವೆ ಮ್ಲೇ

ಚ್ಛಮತದೊಳಗದುಕಾರಣವೆನಲು ಜಗದೊಳಗೆ ನೀನು

ತಾಮಸಗುಣವಕಳೆದುಬಂದಿರೆ

ನಮ್ಮದರುಶನನಿನಗೆದೊರೆವುದು

ನಮ್ಮ ನರಸಿಂಹಸರಸತಿರೂಪದಲಿನಾವಿರಲು


20.ಕೇಳುಕೇಳುತಲಗಸಮರುಗಿದ

ಹಾಳುಮನದೀತಪ್ಪಮನ್ನಿಸಿ

ಬಾಳಬೆಳಗಿರಿಎನುತನಮಿಸಿದಪರಮಪದಕಾಗ

ಕೋಳಹಿಡಿದಿದೆ ಭವದ ಬಂಧವ

ಆಳವರಿಯದೆಮರೆತುನಡೆದೆನು

ಆಳಿಕೊಳ್ಳುವ ಗನ್ನಮಹಿಮಾರಕ್ಷಿಸೆನ್ನನು ನೀ


21.ನಿಮ್ಮ ಕರುಣವು ತಪ್ಪಿಹೋಹುದೆ

ನಿಮ್ಮನಗಲುತ ಬದುಕಬಲ್ಲೆನೆ

ಅಮ್ಮನನ್ನಗಲಿಮಗುವುಬದುಕಬಲ್ಲುದೆಸುಖದೊಳು

ಬೊಮ್ಮ ಮೂರುತಿ ಎನ್ನಕಾಯ್ವುದು

ನನ್ನ ತಪ್ಪನು ಮರೆತು ಮನ್ನಿಸಿ

ಅಮ್ಮ ಶಿಶುವನು ಕಾಯ್ವತೆರದೊಳು ರಕ್ಷಿಸುವುದೆನ್ನ


22.ಪಟ್ಟಬೇಡವು ಪದವಿ ಬೇಡವು

ಕಟ್ಟಿಆಳುವ ರಾಜ್ಯಬೇಡವು

ಪಟ್ಟದಾನೆಯು ಛತ್ರಚಾಮರಗೊಡವೆನನಗೇಕೆ

ಉಟ್ಟವಸ್ತ್ರಗಳೊಗೆವರಜಕನ

ಪಟ್ಟಪದವಿಯೆಸಾಕುಎನಗೆನೆ

ಅಟ್ಟಬೇಡಿರಿ ನಿಮ್ಮಸನಿಯದಿದೂರದೂರಕೆನ್ನ


23.ಎಂದುಅಗಸನು ಕರವ ಜೋಡಿಸಿ

ನಿಂದುಬೇಡುತಮೊರೆಯನಿಡುತಿರೆ

ಬಂಧು ಬಾಂಧವ ಇಂದಿರೇಶನುನಸುನಗುತ ನುಡಿದ

ಚಂದದೊಳುನೀರಾಜ್ಯವಾಳುತ

ಬಂಧನವನೆಲ್ಲ ಕಳೆಯುತಬಾರ

ಚಂದದಿಂದಲೆ ನಿನಗೆ ದರುಶನ ಕರುಣೆದೊರಕುವುದು


24.ಅಗಸನಲ್ಲಿಯೆ ಬೀಳುಕೊಂಡರು

ಜಗದ ದೇವರು ಪಾದ ಮೂರುತಿ

ಅಗಸನಿಗೆ ತಾವಿತ್ತವರವನುನಿಜವ ಮಾಡಿಸಲು

ಅಗಸಸತ್ತನುಚಣದೊಳಾಗಲೆ

ಅಗಸ ದೇಹವ ಬಿಟ್ಟುತೊರೆದನು

ರಾಗದೊಳುಸಿಲುಕಿದಗಸನರಸನೆನಿಸಿಮೆರೆಯಲೆನೆ


25.ಗುರುವಮಾತಿನೊಳಗಸಮಡಿದನು

ಮರಳಿ ಪುಟ್ಟಿದ ರಾಜವಂಶದಿ

ಗುರುವು ಕರುಣಿಸೆ ಕಾಣದಾವುದುಧರೆಯೊಳಗೆತಿಳಿಯೆ

ವರಗುರುಶ್ರೀಪಾದಯತಿಗಳು

ಮರುಳುರಜಕನರಾಜನಾಗಿಸೆ

ವರವನಿತ್ತರು ಒಂದೆ ಚಣದಲಿಭಕ್ತಿಗೊಲಿಯುತಲಿ


26.ನಿತ್ಯದೊಳು ಗುರುಕಥೆಯಪಠಿಸಲು

ಸತ್ಯದೊಳಗೀವಬಯಸಿದವರ

ಸತ್ಕಥೆಯ ಸಪ್ತಾಹದೊಳು ಭವದ ಪರಿಹರವಿಹುದು

ಅತಿಸುಲಭಮುಕುತಿಯೆನಿಪಗುರುಚ

ರಿತ್ರೆಯೋದುವವರಿಗೆನಿಜದೊಳು

ಸತ್ಪಥವತೋರುತಲಿಗುರುಕರುಣೆಯನುದೊರಕಿಪುದು


ಜನವರಿ 1988 ರಲ್ಲಿ ಸಪ್ತಗಿರಿ ಪತ್ರಿಕೆಯಲ್ಲಿ ಪ್ರಕಟವಾಗಿದೆ( ತಿರುಪತಿಯಿಂದ)



Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ