ಜಗದಲಿ ಸುಂದರವಾದುದು


ಜಗದಲಿ ಸುಂದರವಾದುದು

ದತ್ತದೇವನ ನಾಮವಿದು

ಪಾಹಿ ದತ್ತ ಪಾಹಿ ದತ್ತ 

ಪಾಹಿ ದತ್ತ ಪಾಹಿ ದತ್ತ


ಅನ್ಸೂಯೆಗೆ ಮಗನಾದ

 ಅತ್ರಿಮುನಿಯ ಪುತ್ರನಾದ

ತ್ರಿಮೂರ್ತಿ ರೂಪವ ತಾಹೊತ್ತ

ದತ್ತಾತ್ರೇಯನು ತಾನಾದ / ಪಾಹಿ ದತ್ತ


ಅಗಸಗೆ ಅನುಗ್ರಹ ಮಾಡಿದನು

ರಾಜ್ಯ ಪದವಿಯ ನೀಡಿದನು

ಅವರೆ ಬಳ್ಳಿಯ ಕಿತ್ತನು

ಹೊನ್ನಿನ ಹೊಳೆಯನು ಹರಿಸಿದನು /ದತ್ತ


ಗಾಣಗಪುರದಲಿ  ನೆಲೆಸಿದನು

ಭಕ್ತರ ವರವಾಗಿ ಮೆರೆದನು

ಶರಣರ ಪೊರೆಯುವ ಗುರುವನು

ದತ್ತಾತ್ರೇಯ ದೇವನು /ಪಾಹಿ ದತ್ತ









Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ