ದೇವಾ ಕರುಣೆಯ ನು ತೋರ ಲಾರೆಯ
ದೇವಾ ಕರುಣೆಯ ನು ತೋರ ಲಾರೆಯ
ಮುನಿಸಿಂ ದನೀ ಛಲವಾಂತು ನಿಂದೆಯ
ಎಲ್ಲೆಡೆ ನಿನ್ನನೆ ಅರಸುತ ನಡೆದೇ
ನಿನ್ನನೆ ಸತತವು ಅರ್ಚಿಸಿ ದಣಿದೇ
ನಿನ್ನಯ ಪಾದಕೆ ಎನ್ನನೆ ಮಣಿದೇ
ಎನ್ನಯ ಕಾಯುವ ಗುರು ನೀ ನೆಂದೇ/೧/
ಪಾಪದ ಬದುಕಿಗೆ ರೋಸಿದೆ ಜೀವಾ
ನಿನ್ನನು ಕಾಣದೆ ಮಿಡಿದಿದೆ ನೋವಾ
ಶಾಂತಿಯ ಕರುಣಿಸು ನೋವನು ಹರಿಸೂ
ಕ್ಲೇಶವನೆಲ್ಲವ ಕೊನೆಗೊಳಿಸು ಹರಸು//೨//
ಅನಸೂಯೆಗಂದೊಲಿದೆಯೋ ಗುರುವೇ
ಸೌಮಿನಿಯನಂದು ಕಾಯ್ದೆಯೋ ನೀನು
ದೀನಳ ಮೇಲೀ ಕೋಪವಿದೇಕೋ
ಕಾಯೋ ಗಾಣಗಾ ಪುರದರಸನೇ /೩
ಡಾ ಸತ್ಯವತಿ ಮೂರ್ತಿ- ಗಾಯನ ಸುರೇಖ ಹೆಗ್ಗಡೆ
Comments
Post a Comment