ಕವಾಲಿ
- Get link
- X
- Other Apps
ಬೆಳಗಾಯ್ತು ಎಂದರೆ ಶಾಲೆಗೆ ಓಟ
ಸಂಜೆಗೆ ಬರುವುದು ಟ್ಯೂಷನ್ ಕಾಟ
ರಾತ್ರಿಬೆಳಗೂ ಓದುವ ಭೂತ
ಟಿವಿ ಆಟ ಎಲ್ಲವೂ ಖೋತ
ಬೆಳಗಾದ್ರೆ ಶಾಲೆಗೆ ಹೋಗುವ ಸಡಗರ
ರಾತ್ರಿಗೆ ಟ್ಯೂಷನ್ಇದ್ದರೆ ಆದರ
ರಾತ್ರಿಬೆಳಗೂ ಪಾಠವನೋದಲು
ಸಂಜೆಯ ಸಮಯದಿ ಆಟವೇ ಆಟ
ಬಿಳಿಷೂಸಿಗಾಗ್ಬೇಕು ಆಗಾಗ್ಗೆ ಪಾಲಿಷು
ಕರಿಷೂಸಿಗಾಗ್ಬೇಕು ನಿತ್ಯವೂ ಮಾಲೀಷು
ಇಸ್ತ್ರೀನ ಮಾಡ್ಬೇಕು ಬಟ್ಟೆಗಳನೊಗೆದು
ಟೈ ಅಂತೂ ಕಟ್ಬೇಕು ಕುತ್ತಿಗೆಗೆ ಬಿಗಿದು
ಬಿಳಿಯ ಷೂಸು ಕರಿಯ ಷೂಸು
ನೋಡೋಕ್ಕೆ ಚೆನ್ನ ಮಕ್ಕಳಪೋಸು
ಮಾಡಿದ್ರೆ ಬಟ್ಟೇಗಳನೊಗೆನೊಗೆದು ಇಸ್ತ್ರೀ
ಶಿಸ್ತಿನ ಸಿಪಾಯಿ ಹೆಚ್ಚೇನು ಮಿಲ್ಟ್ರಿ
ನೋಡೋಕ್ಕೆ ಚೆನ್ನ ಮಕ್ಕಳಪೋಸು
ಮಾಡಿದ್ರೆ ಬಟ್ಟೇಗಳನೊಗೆನೊಗೆದು ಇಸ್ತ್ರೀ
ಶಿಸ್ತಿನ ಸಿಪಾಯಿ ಹೆಚ್ಚೇನು ಮಿಲ್ಟ್ರಿ
ಕೊಡ್ತಾರೆ ಸ್ಕೂಲ್ನಲ್ಲಿ ಗಾಡಿ ಹೋಂವರ್ಕೂ
ಮಾಡ್ದಿದ್ರೆ ನೀಡ್ತಾರೆ ಮೈನೆಸ್ಸು ಮಾರ್ಕೂ
ಬೈತಾರೆ ಕಿವಿಯನ್ನು ಹಿಂಡುತ್ತ ಟೀಚರ್ರು
ಆಗ್ತೀವಿ ನಾವಂತು ಅಲ್ಲಿಯೇ ಪಂಕ್ಚರ್ರು
ಮಾಡಿದ್ರೆ ಸರಿಯಾಗಿ ಕೊಟ್ಟ ಹೋಂವರ್ಕು
ಬಂದೇ ಬರುತ್ತೆ ಟೆಸ್ಟನಲ್ಲಿ ಮಾರ್ಕು
ಓದುಬರಹವ ಕಲಿಯಲು ಬೇಕಣ್ಣ
ಅದಿಲ್ಲದೆ ಹೋದ್ರೆ ಎಮ್ಮೆಯ ಕೋಣ
ಬಂದೇ ಬರುತ್ತೆ ಟೆಸ್ಟನಲ್ಲಿ ಮಾರ್ಕು
ಓದುಬರಹವ ಕಲಿಯಲು ಬೇಕಣ್ಣ
ಅದಿಲ್ಲದೆ ಹೋದ್ರೆ ಎಮ್ಮೆಯ ಕೋಣ
ಲೆಕ್ಕವ ಕಲಿಯೋದು ಬಹಳ ಕಷ್ಟ
ಮಗ್ಗೀಯ ಕಲಿಬೇಕು ನಮ್ಮದುರದ್ರಷ್ಟ
ವಿಜ್ಞಾನದಲ್ಲಿ ವಿನೋದ ಕಾಣದು
ಅಜ್ಞಾನವಿದ್ದರೂ ಆನಂದ ಸಾಕದು
ಮ್ಯಾಥ್ಸನ್ನ ಕಲಿಯೊಕ್ಕೆ ನಾಚಿದ್ರೆ ಕಷ್ಟ
ಮನವಿಟ್ಟು ಕಲಿಯಲು ಪೂರ್ಣವು ನಮ್ಮಿಷ್ಟ
ಮಗ್ಗಿಯ ಕಲಿತರೆ ಜೀವನ ಪಕ್ಕ
ಲೆಕ್ಕವೆ ಇರದಿಹ ಜೀವನ ವೇಸ್ಟಕ್ಕ
ಮನವಿಟ್ಟು ಕಲಿಯಲು ಪೂರ್ಣವು ನಮ್ಮಿಷ್ಟ
ಮಗ್ಗಿಯ ಕಲಿತರೆ ಜೀವನ ಪಕ್ಕ
ಲೆಕ್ಕವೆ ಇರದಿಹ ಜೀವನ ವೇಸ್ಟಕ್ಕ
ಇಂಗ್ಳಿಷು ಗಿಂಗ್ಲೀಷು ಬರಿ ಷೋಪೀಸು
ಸ್ಪೆಲ್ಲಿಂಗು ಗಿಲ್ಲಿಂಗು ಬಹಳೇ ತ್ರಾಸು
ಕನ್ನಡದಲ್ಲಂತು ಆದ್ರೆ ನಪಾಸು
ಆಗುತ್ತೆ ನಮ್ಮದು ಹೋಪ್ಲೆಸ್ಸು ಕೇಸು
ಇಂಷು ಗಿಂಗ್ಲೀಷು ಅನ್ಬೇಡ ಷೋಪೀಸು
ಪ್ರಪಂಚತಿಳಿಯಲು ಇಂಗ್ಲೀಷು ಸಲೀಸು
ಕನ್ನಡ ನಮ್ಮ ಜೀವನದ ಉಸಿರು
ಕನ್ನಡನೆಲವೇ ನಮ್ಮಯ ಬೇರು
ವಿಜ್ಞಾನದಲ್ಲೇ ವಿನೋದವೆಲ್ಲ
ಅಜ್ಞಾನ ತರುವುದು ಆನಂದವಲ್ಲ
ಕನ್ನಡನಮ್ಮದು ಕಸ್ತೂರಿ ನೋಡು
ಕಲಿಯಲು ಸರಳ ಸುಲಭವು ನೋಡು
ಅಜ್ಞಾನ ತರುವುದು ಆನಂದವಲ್ಲ
ಕನ್ನಡನಮ್ಮದು ಕಸ್ತೂರಿ ನೋಡು
ಕಲಿಯಲು ಸರಳ ಸುಲಭವು ನೋಡು
ಉರುಹೊಡೀಬೇಕು ಪುಟಗಟ್ಲೆ ಹಿಸ್ಟ್ರಿ
ತಿಳಿಯದು ಅದರೊಳಗೇನಿದೆ ಮಿಸ್ಟ್ರಿ
ಏಕಾಗಿ ಹುಟ್ಟಿದ್ಯೋ ಇ ನಮ್ಮ ಭೂಗೋಳ
ಕೇಳೋವ್ರು ಯಾರಿಲ್ವೆ ಈ ನಮ್ಮ ಗೋಳ
ನಿತ್ಯವು ಪುಟಗಟ್ಲೆಹಿಸ್ಟ್ರಿ ಓದ್ದಾಗ
ಗತಕಾಲದ ಸಂಸ್ಕೃತಿಯ ತಿಳಿಯುವೆ ಆಗ
ಹುಟ್ಟದೆ ಇದ್ದಿದ್ರೆ ಈ ನಮ್ಮ ಭೂಗೋಳ
ನೀನೆಲ್ಲಿ ಇರ್ತಿದ್ದೆ ಹೇಳೋಕೆ ಗೋಳ
ಗತಕಾಲದ ಸಂಸ್ಕೃತಿಯ ತಿಳಿಯುವೆ ಆಗ
ಹುಟ್ಟದೆ ಇದ್ದಿದ್ರೆ ಈ ನಮ್ಮ ಭೂಗೋಳ
ನೀನೆಲ್ಲಿ ಇರ್ತಿದ್ದೆ ಹೇಳೋಕೆ ಗೋಳ
ಬಿಸಿಲಲ್ಲಿ ಒಣಗುತ್ತ ಮಾಡ್ಬೇಕು ಪೀಟೀನ
ನೋಡಿದ್ರ ನಮ್ಮಂಥ ಮಕ್ಕಳಾ ಪಿಟೀನ
ಬಾಯಾರಿ ಬಾಯ್ ಬಾಯ್ ಬಿಡ್ತಿದ್ರೆ ಸುಸ್ತಾಗಿ
ಟೀಚರ್ರು ಕೂಗ್ತಾರೆ ನಿಲ್ಲೀರಿ ಶಿಸ್ತಾಗಿ
ಬಿಸಿಲೋ ನೆರಳೋ ಮಾಡಲು ಡ್ರಿಲ್ಲು
ಸಿಗುತ್ತೆ ಶಿಸ್ತಂತು ಈ ನಮ್ಮ ಲೈಫಲ್ಲು
ಕಂಟೆಸ್ಟು ಮಾಡಲು ಓ ನನ್ನ ಕೂಸೆ
ಶಾಲೆಯ ಬಾಳಂತು ಸಂತಸದ ಮೂಸೆ
ಕಂಟೆಸ್ಟು ಮಾಡಲು ಓ ನನ್ನ ಕೂಸೆ
ಶಾಲೆಯ ಬಾಳಂತು ಸಂತಸದ ಮೂಸೆ
ಪ್ರಾಣಿಗಳು ಪಕ್ಷಿ ಹೂವು ಹಣ್ಣು
ಬರಿಬೇಕು ಅಂತಾರೆ ಬಿಡ್ತೀವಿ ಕಣ್ಕಣ್ಣು
ಗಣಪತಿ ಬರಿ ಅಂದ್ರೆ ಆಗುತ್ತೆ ಅವರಪ್ಪ
ಚಿತ್ರವ ಬರೆಯುವ ಕಾಟವು ಸಾಕಪ್ಪ
ಪ್ರಾಣಿಗಳು ಪಕ್ಷಿ ಹೂವು ಹಣ್ಣು
ಬರೆಯಲು ಸಿಗುತ್ತೆ ಬಣ್ಣಗಳ ಹೊನ್ನು
ಗಣಪತಿ ಬರೆಯದೆ ಶಿವನನ್ನೆ ಬರೆದರು
ಸಿಗುತ್ತೆ ಮನಸಿಗೆ ಶಾಂತಿಯ ಹೊದರು
ಹಾಡ್ಬೇಕು ಮ್ಯೂಸಿಕ್ಕು, ಬರಿಬೇಕು ಎಸ್ಸೆ
ಆಟವು ನೋಟವು ಎಲ್ಲವೂ ಟುಸ್ಸೆ
ಮಾರ್ಕ್ಸ್ ಕಾರ್ಡು ಹಣೆಯಬರದ ಠಸ್ಸೆ
ಈ ಸ್ಕೂಲು ಲೈಫ಼ಂತೂ ಬರಿ ಬೋರು ಪುಸ್ಸೆ
ಇಂದಿನ ಈ ನಿನ್ನ ಆಆಟದ ಹಂಬಲು
ಮುಂದಿನ ಬಾಳಿನ ದುಖಕ್ಕೆ ಮೆಟ್ಟಿಲು
ಚಿಕ್ಕಂದಿನಲ್ಲಿ ಓದಲು ಮಗುವೆ
ಮುಂದಿನ ಜೀವನ ತರುವುದು ನಗುವೆ
ಚಿಕ್ಕಂದಿನಲ್ಲಿ ಓದಲು ಮಗುವೆ
ಮುಂದಿನ ಜೀವನ ತರುವುದು ನಗುವೆ
ಹಗಲೂ ಇರುಳೂ ಆಟದ ಹಂಬಲು
ಮರೆಸಿತ್ತು ಎನಗೆ ಜೀವನದ ಗೋಲು
ಒಪ್ಪಿದೆ ನಿನ್ನ ಮಾತು ತೆರೆಸಿದೆ ಕಣ್ಣು
ವಿದ್ಯೆಯೊಂದಿರಲು ಲೈಫ಼ದು ಸಿಹಿ ಹಣ್ಣು
- Get link
- X
- Other Apps
Comments
Post a Comment