ಓಂ ಜಯಜಯ ದತ್ತ ಪ್ರಭು
ಆರತಿ ಹಾಡು
ಓಂ ಜಯಜಯ ದತ್ತ ಪ್ರಭು
ಜಯ ದತ್ತ ಪ್ರಭು
ಭಕ್ತರ ರಕ್ಷಕ ನೀನೇ
ಕರುಣಾಕರನೆ
ಅತ್ರಿಯ ತಪಸಿಗೆ ಮಣಿದೇ
ಅನಸೂಯೆಗೊಲಿದೇ
ಹರಿಹರ ರೂಪನು ನೀನೆ
ದತ್ತಾತ್ರೇಯನೆ
ಅವರೆಯ ಬಳ್ಳಿಯ ಕೀಳುತ
ಬಡತನವ ಕಳೆದೆ
ಗೊಡ್ಡೆಮ್ಮೆಯ ಕರೆಸಿದೆ ನೀ
ನಿನಗೆಣೆ ಯಾರೈ
ಒಣಗಿದ ಮರವನು ಚಿಗುರಿಸಿ
ನರಹರಿಗೆ ಒಲಿದೆ
ನಂದಿಯ ಸಂಶಯ ಬಿಡಿಸಿದೆ
ಕುಷ್ಟವನು ಕಳೆದೆ
ರಜಕನ ಭಕ್ತಿಗೆ ಮೆಚ್ಚಿದೆ
ರಾಜ್ಯವ ನೀಡಿದೆ
ಪಿಶಾಚ ಬಾಧೆಯ ಬಿಡಿಸಿದೆ
ಮಗುವ ಬದುಕಿಸಿದೆ
ಭಾಸ್ಕರ ತಂದ ಹಿಡಿಯನ್ನ
ಅಕ್ಷಯವೆಸಗಿದೆ
ಊರಿಗೆ ಊರನು ತಣಿಸುತ
ಅದ್ಭುತವ ಮೆರೆದೆ
ತಂತುಕ ಭಕ್ತಗೆ ಮರುಗಿ
ಶಿಶೈಲಕ್ಕೊಯ್ದೆ
ಹೊಲದ ಬೆಳೆಯನು ಹೆಚ್ಚಿಸಿ
ರೈತನ ಹರಸಿದೆ
ದತ್ತಾತ್ರೇಯನು ನೀನೆ
ಶ್ರೀಪಾದನು ನೀ
ನರಸಿಂಹ ಸರಸ್ವತಿ ನೀ
ಲೀಲಾಮಯನೆ
ನಿನ್ನಯ ಶರಣಕೆ ಬಂದೆನು
ನಿನ್ನಾ ಮೊರೆಹೊಕ್ಕೆ
ನೀನೇ ಕಾಯಲು ಬೇಕೈ
ಅನ್ಯರ ಕಾಣೆನೋ
ಅರ್ಚಿಸಲರಿಯೆನು ನಿನ್ನನು
ಮೆಚ್ಚಿಸಲರಿಯೆನು
ನೇಮ ನಿಯಮದರಿವಿಲ್ಲಾ
ನೀನೇ ನನಗೆಲ್ಲ
ನರಹರಿಯಾ ಭಕುತಿಯಿರದು
ನಂದಿ ಹಟವಿರದು
ರಜಕನ ನೇಮ ನನಗಿರದು
ನೀಡೋ ನಿಷ್ಟೆಯಾ
ಗಾಣಗಪುರದರಸನು ನೀ
ನಂಬಿದರ ಪೊರೆದೆ
ಕರುಣಿಸಿ ನಮ್ಮನು ಕಾಯೋ
ದತ್ತಾತ್ರೇಯನೇ
Comments
Post a Comment