Posts

ದತ್ತಾತ್ರೆಯ ಅಷ್ಟೋತ್ತರ

ಓಂ ದತ್ತಾತ್ರೇಯಾಯ ನಮಃ ಓಂ ದತ್ತದೇವಾಯ ನಮಃ ಓಂ ದತ್ತ ಮೂರ್ತಯೇ ನಮಃ ಓಂ ದಕ್ಷಿಣಾ ಮೂರ್ತಯೇ ನಮಃ ಓಂ ದೀನಬಂಧುವೇ ನಮಃ ಓಂ ದುಷ್ಟ ಶಿಕ್ಷಕಾಯ ನಮಃ ಓಂ ದಂಡಧಾರಿಣೇ ನಮಃ ಓಂಧರ್ಮಚರಿತಾಯ ನಮಃ ಓಂ ದಿಗಂಬರಾಯ ನಮಃ ಓಂ ದೀನ ರಕ್ಷಕಾಯ ನಮಃ ಓಂ ಧರ್ಮಮೂರ್ತಯೇ ನಮಃ ಓಂ ಬ್ರಹ್ಮರೂಪಾಯ ನಮಃ ಓಂ ತ್ರಿಮೂರ್ತಿರೂಪಾಯ ನಮಃ ಓಂ ತ್ರಿಗುಣಾತ್ಮಕಾಯ ನಮಃ ಓಂ ಅತ್ರಿಪುತ್ರಾಯ ನಮಃ ಓಂ ಅಶ್ವತ್ಠರೂಪಾಯ ನಮಃ ಓಂ ಅಪ್ರತಿಮಾಯ ನಮಃ ಓಂ ಅನಾಥರಕ್ಷಕಾಯ ನಮಃ ಓಂ ಅನಸೂಯಾ ತನಯಾಯ ನಮಃ ಓಂ ಆದಿಮೂರ್ತಯೇ ನಮಃ ಓಂ ಆದಿ ಮೂಲಾಯ ನಮಃ ಓಂ ಆದಿರೂಪಾಯ ನಮಃ ಓಂ ಭಕ್ತಕಲ್ಯಾಣದಾಯ ನಮಃ ಓಂ ಬಹು ರೂಪಾಯ ನಮಃ ಓಂಭಕ್ತವರದಾಯ ನಮಃ ಓಂಓಂ ಭಕ್ತಿಪ್ರಿಯಾಯ ನಮಃ ಓಂ ಭಕ್ತಪರಾಧೀನಾಯ ನಮಃ ಓಂ ಭಕ್ತ ರಕ್ಷಕಾಯ ನಮಃ ಓಂ ಭವಭಯ ದೂರಕೃತೇ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಭಕ್ತ ವಂದಿತಾಯ ನಮಃ ಓಂಭವಬಂಧನ ಮೋಚಕಾಯ ನಮಃ ಓಂ ಸಿದ್ಧಾಯ ನಮಃ ಓಂ ಶಿವರೂಪಾಯ ನಮಃ ಓಂಶಾಂತರೂಪಾಯ ನಮಃ ಓಂಸುಗುಣರೂಪಾಯ ನಮಃ ಓಂಶ್ರೀಪಾದಯತಯೇ ನಮಃ ಓಂ ಶ್ರೀ ವಲ್ಲಭಾಯ ನಮಃ ಓಂ ಶಿಷ್ಟರಕ್ಷಣಾಯ ನಮಃ ಓಂಶಂಕರಾಯ ನಮಃ ಓಂಕಲ್ಲೇಶ್ವರಾಯ ನಮಃ ಓಂಕವಿ ಪ್ರಿಯಾಯ ನಮಃ ಓಂ ಕಲ್ಪಿತ ವರದಾಯ ನಮಃ ಓಂ ಕರುಣಾಸಾಗರಾಯ ನಮಃ ಓಂ ಕಲ್ಪದ್ರುಮಾಯ ನಮಃ ಓಂಕೀರ್ತನ ಪ್ರಿಯಾಯ ನಮಃ ಓಂ ಕೋಟಿಸೂರ್ಯ ಪ್ರಕಾಶಾಯ ನಮಃ ಓಂ ಜಗದ್ವಂದ್ಯಾಯ ನಮಃ ಓಂ ಜಗದ್ರೂಪಾಯ ನಮಃ ಓಂ ಜಗದೀಶಾಯ ನಮಃ ಓಂಜಗದ್ಗುರವೇ ನಮಃ ಓಂ ಜಗತ್ಪತಯೇ ನಮಃ ಓಂ ಜಗದಾತ್ಮನೇ ನಮಃ ಓಂ ಗಾನಲೋಲುಪ...

ಗಿಳಿಯ

ಗಿಳಿಯ ನೋಡಿ ಉಲಿಯುವಾಸೆ ಹೂವ ನೋಡಿ ಹಾಡುವಾಸೆ ಹಕ್ಕಿ ನೋಡಿ ಹೊಮ್ಮುವಾಸೆ ಮನದಿ ಮೂಡಿ ನಿಂದರೂ ಹೊರಗೆ ಬಾರದಾಗಿದೆ ಏನೋ ಕೊರೆಯ ಕಂಡಿದೆ ದಿನ ಉಂಬಿದ ಹೆಣ್ಣು  ಸುಸೂತ್ರ ಆಗದ ಹೆರಿಗೆ ಕವನ

ಕಾಫಿ

ಕಾಫಿ ಇದ್ರೇನೆ ನಮಗೆ ಪ್ರೀತಿ ಅದಿಲ್ಲದೆ  ಹೋದ್ರೆ ಫಜೀತಿ ಕಾಫಿಯ ಬಿಟ್ಟು ಕಾವಿಯ ತೊಟ್ಟೂ  ನಾ ಹೇಗೆ ಬದುಕೇನು //ಕಾಫೀ.... ಕಾಫಿಯ ಬಣ್ಣವು ಸೊಗಸು  ಅಹ  ಅದರ ವಾಸನೆ ಇನ್ನೂ ಸೊಗಸು ಕಾಫಿಗೆ ಹಾಲು ಸಕ್ಕರೆ  ಸೇರಿಸಿ ಕುಡಿದಾಗ  ಗಮ್ಮತ್ತೂ/ಕಾಫಿ..... ಕರಿಯ ಬಣ್ಣದ ಕಾಫಿ  ನೀ ಕೊಡುವೆ ನಿದ್ದೆಗೆ ಮಾಫಿ ನಿನ್ನನ್ನು ಕುಡಿದು ನಾ ಹಾಡಿ ಕುಣಿದು ಸಂತಸದಿ ನಲಿದೇನೂ.....ಕಾಫಿ..... ಕಾವಿಯ ತೊಟ್ಟೆನು ನಾನು ಕಾಮಿನಿ ಬಿಟ್ಟೆನು ನಾನು ಕವಿಯ ತೊಟ್ಟು ಕಾಫಿಯ ಬಿಟ್ಟು ನಾ ಹೇಗೆ ಬದುಕೇನೂ / ಕಾಫಿ.....

ಬಂದಿತು ಬಂದಿತು ದೀಪಾವಳಿ

ಬಂದಿತು ಬಂದಿತು ದೀಪಾವಳಿ ತಂದಿತು ತಂದಿತು ಪ್ರಭಾವಳಿ ಮಲಗಿಹ ಜನರನು ಎಚ್ಚರಿಸುತಲಿ ನಿದ್ದೆಯ ಹರಿಸಿ ಬೆಳಕನು ತೋರುತ  ರವಿಯದು ತಾನ್ರೆ ಉದಯಿಪ ಮೊದಲೇ ಸುರು ಸುರು ಬತ್ತಿಯ ಬೆಳಕನು ನೀಡಿ/ ದೀಪಾವಳಿ ಅಹ ದೀಪಾವಳಿ ನರಕನ ವಧೆಯ ನೆನಪಿಗೆ ತರುವ  ಪಟಾಕಿ ಶಬ್ದವ ತನ್ನೊಳು ಹೊತ್ತು ತ್ಯಾಗಶೀಲ ಬಲೀಂದ್ರ ದೇವನ  ಪೂಜಿಸಿ ಪಾಡುವ ಹರುಷವ ಹೊತ್ತು / ದೀಪಾವಳಿ  ಅಹ ದೀಪಾವಳಿ ಸೋದರರನ್ನೇ ಆದರಿಸುತಲಿ ಸೋದರ ಬಿದಿಗೆಯ ಸಂಭ್ರಮ ತೋರಿ ಸಡಗರವನ್ನೆ ಹ್ರದಯದ್ ತುಂಬಿ ನೋವನು ಮರೆಸುವ ಶಕ್ತಿಯ ಹೊತ್ತು/ ದೀಪಾವಳಿ ಅಹ ದೀಪಾವಳಿ ಜನದ ಮನದ ತಮವನು ಕಳೆಯುತ  ದೀಪದ ಬೆಳಕನು ಎಲ್ಲೆಡೆ ಚೆಲ್ಲಿ ಜ್ಞಾನ ಜ್ಯೋತಿಯ ಹಚ್ಚುವ ತೆರದಿ ಉರಿಯಿತು ಎಲ್ಲೆಡೆ ದೀಪಗಳಾವಳಿ/ ದೀಪಾವಳಿ ಅಹ ದೀಪಾವಳಿ
ಓಂ ದತ್ತ ಓಂ ದತ್ತ ಪರಾತ್ಪರಾ ದತ್ತ ಓಂಕಾರಾ ದತ್ತ ತವಶರಣಂ ನಮಾಮಿ ದತ್ತ ಸ್ಮರಾಮಿ ದತ್ತ ಪಾಹಿ ಪಾಹಿ ದತ್ತ ತವಶರಣಂ /ಓಂ ದತ್ತ ಬ್ರಹ್ಮ ವಿಷ್ಣು ಮಹೇಶ್ವರ ರೂಪ ತ್ರಿಮೂರ್ತ್ಯಾತ್ಮಕ ತವ ಶರಣಂ /ಒಂ ದತ್ತ ತ್ರಿಮೂರ್ತಿರೂಪ ತ್ರಿಗುಣಾತೀತ ಹೇ ಅತ್ರಿಪುತ್ರ ತವಶರಣಂ/ ಒಂ ದತ್ತ ದತ್ತಾತ್ರೇಯ ಓಂ ಶ್ರೀಪಾದ ಯತಿ ಓಂ ನರಸಿಂಹ ಸರಸ್ವತಿ ತವಶರಣಂ/ ಓಂ ದತ್ತ ಭಕ್ತವತ್ಸಲ  ಭಕ್ತಪರಾಧೀನ ಗಾಣಗಾಪುರಧೀಶ ತವಶರಣಂ/ ಓಂ ದತ್ತ ಎಲ್ಲ ಸಾಲುಗಳನ್ನೂ ಎರಡೆರಡು ಬಾರಿ ಹೇಳಬೇಕು  

ಕವಾಲಿ

ಇದ್ದರೆ ಶಾಲೆಗೆ ನಿತ್ಯವೂ ರಜ  ಮಕ್ಕಳಿಗೆಲ್ಲ ಮಜವೇ ಮಜ ಒಡುವ ಗೋಜು ಇಲ್ಲವೇ ಇಲ್ಲ  ಆಟವೇ ಆಟ ಇಡಿ ದಿನವೆಲ್ಲ ಇದ್ದರೆ ಶ್ಹಲೆಗೆ ನಿತ್ಯವೂ ರಜ ಆದೀತು ಮಕ್ಕಳ ಪಾಲಿಗೆ ಸಜ ಬರಬೇಕು ಒಮ್ಮೊಮ್ಮೆ ನಡುವಲಿ ರಜ ಹಾಲಿಗೆ ಸಕ್ಕರೆ ಬೆರೆತಂತೆ ನಿಜ ಬೆಳಗಾಯ್ತು ಎಂದರೆ ಶಾಲೆಗೆ ಓಟ ಸಂಜೆಗೆ ಬರುವುದು ಟ್ಯೂಷನ್ ಕಾಟ ರಾತ್ರಿ ಬೆಳಗೂ ಓದುವ ಭೂತ ಟಿ.ವಿ.ಆಟ ಎಲ್ಲವೂ ಖೋತ ಬೆಳಗಾದ್ರೆ ಶಾಲೆಗೆ ಹೋಗುವ ಸಡಗರ ರಾತ್ರಿಗೆ ಟ್ಯೂಷನ್ ಇದ್ದರೆ ಆದರ ರಾತ್ರಿಬೆಳಗೂ ಪಾಠವನೋದಲು ಸಂಜೆಯ ಸಮಯದಿ ಆಟವೇ ಆಟ ಬಿಳಿ ಷೂಸಿಗಾಗ್ಬೇಕು ಆಗಾಗ್ಗೆ ಪಾಲೀಷು ಕರಿಷೂಸಿಗ್ಮಾಡ್ಬೇಕು ನಿತ್ಯವೂ ಮಾಲೀಷು ಇಸ್ತ್ರೀನ ಮಾಡ್ಬೇಕು ಬಟ್ಟೆಗಳನೊಗೆದು ಟೈ ಅಂತೂ ಕಟ್ಬೇಕು ಕುತ್ತಿಗೆಗೆ ಬಿಗಿದು ಬಿಳಿಯ ಷೂಸು ಕರಿಯ ಷೂಸು  ನೋಡೋಕ್ಕೆ ಚೆನ್ನ ಮಕ್ಕಳಾ ಪೋಸು ಮಾಡಿದ್ರೆ ಬಟ್ಟೆಗಳನೊಗೆದೊಗೆದು ಇಸ್ತ್ರೀ ಶಿಸ್ತಿನ ಸಿಪಾಯಿ ಹೆಚ್ಚೇನು ಮಿಲ್ಟ್ರಿ ಕೊಡ್ತಾರೆ ಸ್ಕೋಲಲ್ಲಿ ಗಾಡಿಹೋಂವರ್ಕೂ ಮಾಡ್ದಿದ್ರೆ ನೀಡ್ತಾರೆ  ಮೈನಸ್ಸು ಮಾರ್ಕೂ ಬೈಯ್ತಾರೆ ಕಿವಿಯನ್ನು ಹಿಂಡುತ್ತ ಟೀಚ ಆಗ್ತೀವಿ ಅಲ್ಲಿಯೇ ನಾವಂತು ಪಂಕ್ಚರು ಮಾಡಿದ್ರೆ ಸರಿಯಾಗಿ ಕೊಟ್ಟ ಹೋಂವರ್ಕು ಬಂದೇ ಬರುತ್ತೆ ಟೆಸ್ಟ್ನಲ್ಲಿ ಮಾರ್ಕುಮಾರ್ಕು ಓದು ಬರಹವ ಕಲಿಯಲು ಬೇಕಣ್ಣ ಅದಿಲ್ಲದೆ ಹೋದರೆ ಎಮ್ಮೆಯ ಕೋಣ ಲೆಕ್ಕವ ಕಲಿಯೋದು ಬಹಳ ಕಷ್ಟಕರ ಮಗ್ಗೀಯ ಕಲಿಯೋದು ನಮ್ಮ ದುರದ್ರುಷ್ಟ ವಿಜ್ಞಾನದಲ್ಲಿ ವಿನೋದ ಕಾಣದು ಅಜ್ಞಾನವಿದ್ದರೂ ಆ...

ಮೊದಲ ತೊದಲು ಮಾತು

ಆಭಿಮಾನಿ ಓದುಗರಿಗೆ ಕನ್ನಡ ನಿಮಗಾಗಿ   ಅಂಕಣಕ್ಕೆ ಸ್ವಾಗತ. ಇಲ್ಲಿ ನನ್ನ ಸ್ಥೂಲ ಪರಿಚಯದೊಂದಿಗೆ ಅಮ್ಮ ಅಜ್ಜಿಯರಿಂದ ಕಲಿತ ಗಾದೆಗಳು, ನನ್ನದೇ ಆದ ಕನ್ನಡ ಕವನಗಳು, ನಗೆಬರಹಗಳು ಹಾಗೂ ಗೀತೆಗಳನ್ನು  ಒಂದೇ ಕಡೆ ಸೇರಿಸಲು ಪ್ರಯತ್ನಿಸಿದ್ದೇನೆ. ತೆರೆದ ಕೈಗಳಿಂದ ಸ್ವಾಗತಿಸಿ ಓದಿ  ನಿಮ್ಮ ಅತ್ಯಮೂಲ್ಯವಾದ ಸಲಹೆಗಳೊಂದಿಗೆ  ಪ್ರೋತ್ಸಾಹಿಸಬೇಕೆಂಬುದು  ಕಳಕಳಿಯ ವಿನಂತಿ..

ಮುಖಪುಟ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ನುಡಿಯನ್ನು ನೀವೆಲ್ಲರೂ ಕೇಳಿರಬಹುದು. ಈ  ಪುಟದಲ್ಲಿ ಕನ್ನಡದ ಗಾದೆಗಳನ್ನು ಓದುಗರ ಅನುಕೂಲಕ್ಕಾಗಿ ಅವುಗಳಅರ್ಥದೊಡನೆ ಕೊಡಲಾಗಿದೆ. ಇಲ್ಲಿ ನೀವು ಜಾನಪದದ ಸೊಗಡನ್ನು ನೋಡಬಹುದು.ಗಾದೆಗಳು ಜೀವನದ  ಸತ್ಯವನ್ನು ಎತ್ತಿ ಹಿಡಿಯುತ್ತವೆ .ಹಿರಿಯರ ಅನುಭವದ ಸಾರವೇ ಗಾದೆಗಳು.ಎಷ್ಟೋ ಕಡೆ  ನಾಣ್ನುಡಿಗಳನ್ನು ಗಾದೆ ಎಂದು ಭ್ರಮಿಸುವ ಅಪಾಯವಿದೆ. ಆದರೆ ನಾಣ್ನುಡಿಗಳಿಗೂ ಗಾದೆಗಳಿಗೂ  ವ್ಯತ್ಯಾಸವಿದೆ. ನಾಣ್ನುಡಿಗಳು ಆಯಾನಾಡಿನ ಪರಿಸರಕ್ಕೆ ಹೊಂದಿದಂತೆ ನಿಜವಾಗುತ್ತವೆ.ನಾಣ್ನುಡಿಗಳಿಗೆ ಕಾಲದೇಶಗಳ ಮಿತಿಯಿದೆ.ಆಯಾ ಸಮಯಕ್ಕೆ, ಜೀವನದ ವಿವಿಧಮಜಲುಗಳಲ್ಲಿ ಅನುಭವಕ್ಕೆ ಬಂದ ಸತ್ಯಗಳನ್ನು ನುಡಿಗಳಲ್ಲಿ ಹಿಡಿದಿಟ್ಟಿದ್ದಾರೆ.ಅವು ಎಲ್ಲಾದೇಶಗಳಲ್ಲೂ,ಎಲ್ಲಾ ಕಾಲಗಳಲ್ಲೂ ಸತ್ಯವಾಗಬೇಕಾಗಿಲ್ಲ.ಗಾದೆಗಳಿಗೆಕಾಲದೇಶಗಳಮಿತಿಯಿಲ್ಲ.ಅವುಸರ್ವಕಾಲಿಕ,ಸಾರ್ವದೇಶಿಕವಾದವುಗಳು.ಎಲ್ಲದೇಶಗಳಲ್ಲೂ , ಎಲ್ಲಾ ಕಾಲಗಳಲ್ಲೂನಿಜವಾಗುವ ಸತ್ಯಗಳು.ಈ ಗಾದೆಗಳನ್ನು ಹೇಳಿದವರು ತಮ್ಮ ಹೆಸರು,ಪ್ರಸಿದ್ದಿಗೆ ಬರಲಿ ಎಂಬಉದ್ದೇಶದಿಂದ ಹೇಳಿದ್ದಲ್ಲ. ತಮ್ಮಹೆಸರನ್ನು ಸಹ ಹೇಳಿಲ್ಲ. ಗಾದೆಗಳು ಕನ್ನಡ ಸಾಹಿತ್ಯದಅತ್ಯಮೂಲ್ಯವಾದ ಸಂಪತ್ತು .ಈ ಗಾದೆಗಳ ಸಂಪತ್ತನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ.ಇಲ್ಲಿ ಗಾದೆಗಳನ್ನು ಅವುಗಳ ಅರ್ಥದೊಡನೆ ವಿವರಿಸುವಾಗ ನಾನು ಯಾವುದೇ ಒಂದುಕ್ರಮವನ್ನು ಅನುಸರಿಸಲು ಹೋಗಿಲ್ಲ.ಅವು ನೆ...

ಬದುಕು ಕಾರಿನ ಬಂಡಿ

ಬದುಕು ಕಾರಿನ ಬಂಡಿ ತಾಯ್ನಾಡನ್ನು ಬಿಟ್ಟು ತಬ್ಬಲಿಗಳಂತೆ ಪರದೇಶಕ್ಕೆ ಬಂದು , ಪರದೇಶಿಗಳಾಗಿ ನೆಲೆಸುವ ಪರಿಸ್ಥಿತಿಯಲ್ಲಿ ನಮ್ಮನ್ನು ಪ್ರೀತಿಸುವ ನಮ್ಮೊಡನೆ ಇರುವ ಸಂಗಾತಿ ಬೇಕಲ್ಲವೇ? ನಾನು ಬೆಂಗಳೂರನ್ನು ಬಿಟ್ಟು ಮ್ಯಾಂಚೆಸ್ಟರ್ ಗೆ  ಬರುವ ವೇಳೆಗೆ ನನ್ನನ್ನು ಬರಮಾಡಿಕೊಳ್ಳಲು, ಆತ್ಮೀಯತೆಯ ಸವಿಯನ್ನು ನೀಡಲು ಏರ್ಪೋರ್ಟಿಗೇ ಬಂದಿದ್ದಳು ’ವಾಕ್ಸಾಲ್ ನಕ್ಷತ್ರ, ಆಸ್ಟ್ರಾ ರಾಶಿ’ಯಲ್ಲಿ ಜನಿಸಿದ ಪಚ್ಚೆಗಿಣಿ. ನೋಡಲು ಮುದ್ದಾಗಿದ್ದ ಆಕೆ ತನ್ನ ಸೌಂದರ್ಯದಿಂದ ಎಲ್ಲರ ಮನಸೆಳೆಯುವಂತಿದ್ದಳು. ಅವಳೊಡನೆ ಪ್ರಯಾಣಿಸುವುದು ಒಂದು ಸುಖಕರವಾದ ಅನುಭವ. ತನ್ನೊಡನೆ ಪ್ರಯಾಣಿಸಲು ಕುಳಿತವರ ಯೋಗಕ್ಶೇಮವನ್ನು ಎಲ್ಲ ರೀತಿಯಲ್ಲಿಯೂ ನೋಡಿಕೊಳ್ಳುವ ಅವಳು ಸ್ನೇಹಜೀವಿ. ಯಾವ ಸಮಯದಲ್ಲೂ ತೊಂದರೆ ಕೊಡುವ ಸ್ವಭಾವದವಳಲ್ಲ.ಅಂತೂ ನನ್ನವರೆಲ್ಲರನ್ನೂ ಬಿಟ್ಟು ಬಂದಿದ್ದ ನನಗೆ ಅಚ್ಚುಮೆಚ್ಚಿನ ಸಂಗಾತಿಯಾದಳು. ಕೆಲವೇ ತಿಂಗಳುಗಳಲ್ಲಿ ಅವಳನ್ನು ಬಿಟ್ಟಿರುವುದು ನನಗೆ ಬಹಳಕಷ್ಟವಾಗುತಿತ್ತು. ಅವಳು ನಮ್ಮನ್ನು ಗಮನಿಸಿಕೊಳ್ಳುತ್ತಿದ್ದಂತೆ ನಾನೂ ಅವಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದೆ. ಕಾಲಕಾಲಕ್ಕೆ ಸ್ನಾನಮಾಡಿಸಿ ಅವಳನ್ನು ಸುಂದರವಾಗಿ ಕಾಣುವಂತೆ ನೋಡಿಕೊಳ್ಳುತ್ತಿದ್ದೆ. ಆದರೆ ಎಲ್ಲದ್ದಕ್ಕೂ ಒಂದು ಕೊನೆಯಿರುತ್ತದೆ. ಎಂತಹ ಒಳ್ಳೆ ದಿನಗಳೂ ಮುಗಿದುಹೋಗುತ್ತವೆ. ಇಲ್ಲಿ ಬಂದವರು ಅಲ್ಲಿಗೆ ಹೋಗಲೇ ಬೇಕು. ಹಾಗೆಯೇ ನನ್ನ’ಪಚ್ಚೆಗಿಣಿ’ಯ ಆಯಸ್ಸೂ ಮುಗಿದು ಒಮ್ಮೆಕೊನೆ...

ಡಾ.ಸತ್ಯವತಿ ಮೂರ್ತಿ ಪರಿಚಯ ಒಂದು ಮುಖ

ಡಾ   ಸತ್ಯವತಿ   ಮೂರ್ತಿ   :   ಪರಿಚಯ   ಒಂದು   ಮುಖ:   ಬಿ.ಎಸ್.ಸಿ ,   ಬಿ.ಎ ,    ಎಮ್.ಎ ,    ಬಿ.ಎಡ್ ,   ಪಿ.ಎಚ್.ಡಿ ,   ಎ.ಎ   ಟಿ , (  ಸಿಐಎಂಎ)   ವಿಶಾರದ   (ಹಿಂದಿ) ಇದೆಲ್ಲದರ   ಜೊತೆಗೆ   ಕಂಪ್ಯೂಟರ್   ಡೆಟಾಬೇಸ್    ಡಿಪ್ಲೊಮ    ಡಿಗ್ರಿಯನ್ನೂ   ಪಡೆದ   ಇವರು   "ಮೈಕ್ರೊಸಾಫ಼್ಟ್   ಆಫ಼ೀಸ್   ,  ಪೇರೋಲ್ ,  ಹಾಗೂ   ಸೀಕ್ವೆಲ್   ಸರ್ವರ್   ೭   "   ಗಳಲ್ಲೂ   ತರಬೇತಿಯನ್ನು   ಪಡೆದಿದ್ದಾರೆ. ಬಿ.ಎಡ್   ನಲ್ಲಿ   ಆ   ವರ್ಷ   ಇಡೀ   ವಿಶ್ವವಿದ್ಯಾನಿಲಯಕ್ಕೆ   ಅತಿ   ಹೆಚ್ಚು   ಅಂಕಗಳನ್ನು   ಕನ್ನಡ   ಬೋಧನೆಯಲ್ಲಿ   ಪಡೆದ   ಹೆಮ್ಮೆ. ಡಾ .  ಜಿ .  ವೆಂಕಟಸುಬ್ಬಯ್ಯ  ,  ಡಾ . ಪದ್ಮಾದೇವಿ   ಮೊದಲಾದವರಿಂದ   ತಮ್ಮ   ಕವಿತಾ   ವಾಚನ   ಹಾಗೂ   ಬೋಧನೆಗೆ   ಶಹಭಾಸಗಿರಿಯನ್ನು   ಪಡೆದುದೇ   ಅಲ್ಲದೆ  ’ ವಿಜಯ   ಟೀಚರ್ಸ್   ಕಾಲೇಜಿನಲ್ಲಿ ’...