ಡಾ.ಸತ್ಯವತಿ ಮೂರ್ತಿ ಪರಿಚಯ ಒಂದು ಮುಖ

ಡಾ ಸತ್ಯವತಿ ಮೂರ್ತಿ : ಪರಿಚಯ ಒಂದು ಮುಖ:

 

ಬಿ.ಎಸ್.ಸಿ,  ಬಿ.ಎ,   ಎಮ್.ಎ,   ಬಿ.ಎಡ್,  ಪಿ.ಎಚ್.ಡಿ,  ಎ.ಎ ಟಿ, ( ಸಿಐಎಂಎ) ವಿಶಾರದ (ಹಿಂದಿ)

ಇದೆಲ್ಲದರ ಜೊತೆಗೆ ಕಂಪ್ಯೂಟರ್ ಡೆಟಾಬೇಸ್  ಡಿಪ್ಲೊಮ  ಡಿಗ್ರಿಯನ್ನೂ ಪಡೆದ ಇವರು "ಮೈಕ್ರೊಸಾಫ಼್ಟ್ ಆಫ಼ೀಸ್ ಪೇರೋಲ್ಹಾಗೂ ಸೀಕ್ವೆಲ್ ಸರ್ವರ್  " ಗಳಲ್ಲೂ ತರಬೇತಿಯನ್ನು ಪಡೆದಿದ್ದಾರೆ.

ಬಿ.ಎಡ್ ನಲ್ಲಿ  ವರ್ಷ ಇಡೀ ವಿಶ್ವವಿದ್ಯಾನಿಲಯಕ್ಕೆ ಅತಿ ಹೆಚ್ಚು ಅಂಕಗಳನ್ನು ಕನ್ನಡ ಬೋಧನೆಯಲ್ಲಿ ಪಡೆದ ಹೆಮ್ಮೆ.

ಡಾಜಿವೆಂಕಟಸುಬ್ಬಯ್ಯ , ಡಾ.ಪದ್ಮಾದೇವಿ ಮೊದಲಾದವರಿಂದ ತಮ್ಮ ಕವಿತಾ ವಾಚನ ಹಾಗೂ ಬೋಧನೆಗೆ ಶಹಭಾಸಗಿರಿಯನ್ನು ಪಡೆದುದೇ ಅಲ್ಲದೆ ’ವಿಜಯ ಟೀಚರ್ಸ್ ಕಾಲೇಜಿನಲ್ಲಿ’ ಅಧ್ಯಾಪಕ ವೃತ್ತಿಗಾಗಿ ಅಹ್ವಾನವನ್ನೂ ಪಡೆದರೆಂಬುದು ಹೆಮ್ಮೆಯ ಸಂಗತಿ.

 

ಏಕಪಾತ್ರಾಭಿನಯ ಇವರ ಹವ್ಯಾಸಗಳಲ್ಲೊಂದುಹಲವಾರು ಐತಿಹಾಸಿಕ , ಸಾಮಾಜಿಕ ಘಟನೆಗಳನ್ನು ನಾಟಕೀಕರಿಸಿ ಅಭಿನಯಿಸಿದ್ದಾರೆ. ಇವರ ಏಕಪಾತ್ರಾಭಿನಯಗಳು ನೂರಕ್ಕೂ ಹೆಚ್ಚು ಬಾರಿ ಅಭಿನಯಿಸಲ್ಪಟ್ಟಿವೆ.

 

ಅಧ್ಯಾಪಕಿಯಾಗಿ ೨೦ಕ್ಕೂ ಹೆಚ್ಚು ವರ್ಷಗಳ ಸೇವೆ. ಮನೆಯಲ್ಲಿ ಗಣಿತ ಹಾಗೂ ವಿಜ್ಞಾನಗಳನ್ನು  ಪ್ರೌಢಶಾಲಾ ವಿದ್ಯಾರ್ಥಿಗಳಿಗೆಕನ್ನಡವನ್ನು ವಿಶ್ವವಿದ್ಯನಿಲಯದ ವಿದ್ಯಾರ್ಥಿಗಳಿಗೆ ಬೋಧಿಸಿದರೆ

ವಿಜಯ ಪ್ರೌಢಶಾಲೆಯಲ್ಲಿ ಬರಿಯ ಕನ್ನಡ ಮೇಡಂ. ಗಣಿತ ನನ್ನುಸಿರುಕನ್ನಡ ನನ್ನ ಜೀವ ಎನ್ನುವುದು ಇವರ ಮಂತ್ರ. ಇವರ ಮನೆಯ ಪಾಠಕ್ಕೆ ಬರಲು ಜಾಗ ಸಿಗಲೆಂದು ಹರಕೆ ಹೊತ್ತವರು ಕೆಲವರಾದರೆ ಮತ್ತೆ ಕೆಲವು ತಂದೆತಾಯಿಯರು , "ನೀವು ನಮ್ಮ ಮಗುವಿನ ಮುಂದೆ ಕುಳಿತುಕೊಳ್ಳಿ ಅವನು/ಳು ಪಾಸಾಗುತ್ತಾನೆ/ಳೆ ಎನ್ನುತ್ತಿದ್ದರು. ಆಶ್ಚರ್ಯವೆಂದರೆ ಎಂತಹ ದಡ್ಡ ಮಕ್ಕಳೂ  ಪರೀಕ್ಷೆಯಲ್ಲಿ ಪಾಸಾಗುತ್ತಿದ್ದರು. ಅದನ್ನು ಜನತೆ "ನಿಮ್ಮ ಕೈಗುಣ"  ಎಂದು ಹೇಳುತ್ತಿದ್ದರು. ಇವರು ಬೋಧಿಸುವ ಚರಿತ್ರೆ ಪಾಠವನ್ನು ಕೇಳಲು ಮಕ್ಕಳು ಬೇರೆಬೇರೆ ಶಾಲೆಗಳಿಂದ ಬಂದು ಅನುಮತಿ ಕೇಳಿ ಕುಳಿತುಕೊಳ್ಳುತ್ತಿದ್ದರು. ಇವರಿಗಿದ್ದ ಬಿ.ಎಸ್.ಸಿ ಹಾಗೂ ಬಿ.ಎ. ಡಿಗ್ರಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಬೇಕಾದ ಎಲ್ಲ ವಿಷಯಗಳನ್ನೂ ಬೋಧಿಸಲು ಅನುಕೂಲವಾಗಿತ್ತು.(ಇದಕ್ಕೆ ನ್ಯೂ ಪಬ್ಲಿಕ್ ಹೈಸ್ಕೂಲಿನ  ವರ್ಷಗಳ ಮುಖ್ಯೋಪಾಧ್ಯಾಯಿನಿಯ ಹುದ್ದೆ ಕಾರಣವಾಗಿತ್ತುಅಲ್ಲಿ ಮಕ್ಕಳಿಗೆ ಗಣಿತ ಹಾಗೂ ಭೌತಶಾಸ್ತ್ರವನ್ನು ಕಲಿಸುವ ಅವಕಾಶ ದೊರಕಿತ್ತುಶಾಲೆಯಲ್ಲಿನ ಕನ್ನಡ ಮೇಡಂ ಮನೆಗೆ ಬಂದೊಡನೆ ಸೈನ್ಸ್ ಟೀಚರ್.  ವಿಷಯ ಶಾಲೆಯಲ್ಲಿ ಗೊತ್ತಾಗದ ಹಾಗೆ ನೋಡಿಕೊಳ್ಳಲು ಪ್ರಯತ್ನಿಸಿದರೂ  ಇತರ ಅಧ್ಯಾಪಕರಿಗೆ ತಿಳಿದುಹೋದಾಗ  ಅಸೂಯೆಯಿಂದಲೋ ಇಲ್ಲ ನಿಜವಾಗಿಯೋ ತಿಳಿಯದು ಇವರ ಹೆಸರು ಸಕಲ ಕಲಾ ಸರಸ್ವತಿ’ ಎಂದಿರಬೇಕಾಗಿತ್ತು ಎಂದವರೂ ಇದ್ದಾರೆ. 

ಮರೆತ ಮಾತು : ನನ್ನ ವಿದ್ಯಾರ್ಥಿಗಳಲ್ಲಿ ನೂರಕ್ಕೆ ನೂರೂ ಉತ್ತೀರ್ಣ ರಾಗುತ್ತಿದ್ದುದರ ಜೊತೆಗೆ  ನನ್ನ ೧೦೦ ವಿದ್ಯಾರ್ಥಿಗಳಲ್ಲಿ ಕನಿಷ್ಟ ೨೦ ಜನರಾದರೂ ೧೦೦ ಕ್ಕೆ ೧೦೦ ಅಂಕಗಳನ್ನು ಗಣಿತದಲ್ಲಿ ಪಡೆದಿದ್ದಾರೆ. ನನ್ನ ಮಗನೂ ಸೇರಿದಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರೇಂಕ್ ತೆಗೆದುಕೊಂಡವರು ಸಾಕಷ್ಟು ಮಂದಿ

ಮುಸ್ಲಿಂ ಆಡಳಿತದ , ಇಂಗ್ಲೀಷ್ ಮಾಧ್ಯಮದ ಶಾಲೆಯಲ್ಲಿ ಕನ್ನಡವನ್ನು ಪ್ರಥಮಾ ಭಾಷೆಯಾಗಿ

ಜಾರಿಗೆ ತಂದ ಶ್ರೇಯಸ್ಸು ಇವರದು.

ಇವರ ಸತತ ಪರಿಶ್ರಮಸಾಹಿತ್ಯಕ ಆಸಕ್ತಿ ಹಲವಾರು ರೀತಿಯಲ್ಲಿ ಗೌರವವನ್ನು ತಂದಿತು. ಅವುಗಳಲ್ಲಿ ಕೆಲವು  ರೀತಿ ಇವೆ.

೧.    ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಯಲ್ಟಿಯೊಂದಿಗೆ ಇವರ  ಪಿ.ಎಚ್.ಡಿ.ಪ್ರಬಂಧದ ಪ್ರಕಟಣೆ.- (ಆಸ್ಥಾನ ವಿದ್ವಾನ್ ಪಂಡಿತ ಶಾಂತಿರಾಜ ಶಾಸ್ತ್ರಿಗಳ ಜೀವನ ಹಾಗೂ ಕೃತಿಗಳು ಡಾ. ಹಂಪನಾ ಅವರ ಮಾರ್ಗದರ್ಶನದಲ್ಲಿ.)

೨.     ಇವರು ಆರಿಸಿದ  ಕ್ಷೇತ್ರದಲ್ಲಿ ಸಂಶೋ್ಧನೆ ಮಾಡಿದ ಮೊಟ್ಟಮೊದಲ ಮಹಿಳೆ ಎಂಬ ಪತ್ರಿಕೆಗಳ ಹೊಗಳಿಕೆ.

೩.   ಜೈನ ಸಾಹಿತ್ಯ ಪರಿಷತ್ ನಿಂದ ಸ್ಕಾಲರ್ಶಿಪ್ ಜೊತೆಗೆ   ಪ್ರಸಿದ್ಧ ಜೈನ ಗುರುಗಳ  ಅಶ್ರಯದಲ್ಲಿ ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಾಗಿ ಸನ್ಮಾನ.

ಇವರ ಸಂಶೋಧನೆಯನ್ನು ಗೌರವಿಸಿ ವಿಜಯ ಪ್ರೌಢಶಾಲೆಯಲ್ಲಿ ಸನ್ಮಾನ.

. ಬೆಂಗಳೂರಿನ ವಿಜಯನಗರದ ಪೋಷಕವರ್ಗದಿಂದ ಅತ್ಯುತ್ತಮ ಅಧ್ಯಾಪಕಿ       ಎಂಬ ಸನ್ಮಾನ.

.    ಲೇಖಕಿಯರ ಸಂಘದಲ್ಲಿ "ಚಲನ ಚಿತ್ರದಲ್ಲಿ ಅಶ್ಲೀಲತೆ " ಎಂಬ  ಪ್ರಬಂಧ ಪ್ರಸ್ತುತಿಗೆ  ದಿ. ಅನುಪಮ ನಿರಂಜನ ಅವರಿಂದ ಮನ್ನಣೆ.

.     ಮಧುಗಿರಿಕೋಲಾರಬೆಂಗಳೂರು ಮೊದಲಾದ ಕಡೆಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಪ್ರಸ್ತುತ ಪಡಿಸಿದ ಹೆಮ್ಮೆ.

.  ಬೆಂಗಳೂರುಮೈಸೂರುಗಳಲ್ಲಿಕನ್ನಡ ಸಾಹಿತ್ಯ ಪರಿಷತ್ನ್ಯಾಷನಲ್ ಕಾಲೇಜುಗಳಲ್ಲಿ  ಡಾಕಮಲ ಹಂಪನಾ ಮೊದಲಾದವರ ಅಧ್ಯಕ್ಷತೆಯಲ್ಲಿ ಹಲವಾರು  ಕವಿ ಗೋಷ್ಟಿಗಳಲ್ಲಿ ಭಾಗವಹಿಸಿದ ಹಿರಿಮೆ.

ಶಿಕ್ಷಣ ಇಲಾಖೆಗಾಗಿ ತಯಾರಾದ ’ಶಬ್ದ ಮಾಲಿನ್ಯ’  ಸಾಕ್ಷ್ಯ ಚಿತ್ರದಲ್ಲಿ ನಾಯಕಿಯಾಗಿ ನಟನೆ. 

೧೦. ಮಲ್ಲಿಗೆಮಯೂರವನಿತಾಪ್ರಜಾವಾಣಿಸುಧಾಉದಯವಾಣಿಕಸ್ತೂರಿಕರ್ಮವೀರಅವಧಿ ವಿಶ್ವಧ್ವನಿಅನಿವಾಸಿ  ತುಷಾರದೇಸೀಸ್ವರ, ಶ್ರಾವಣ ಬ್ಲಾಗ್. ಕನ್ನಡಪ್ರಭ’,  ’ಕೆಂಡ ಸಂಪಿಗೆಮೊದಲಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಕವನಕಥೆ, ಪ್ರವಾಸ ಕಥನ ,ಹರಟೆವಿಚಾರ ಲೇಖನಗಳು ಹಾಗೂ  ಹಾಸ್ಯ ಲೇಖನಗಳ ಪ್ರಕಟಣೆ.

 

೧೧.  ಜನಪರ ಸಾಹಿತ್ಯದ ಆಶ್ರಯದಲ್ಲಿ ನಗೆಬರಹಗಳು ಹಾಗೂ ನಗೆ ನಾಟಕಗಳನ್ನೊಳಗೊಂಡ 

 ಪುಸ್ತಕಗಳ ಪ್ರಕಟಣೆ.

ಸಿಟಿಬಸ್ಸು ,  ತೆಳ್ಳಗಿರಬಾರದಯ್ಯ ಲೋಕದೊಳಗೆ ( ನಗೆಬರಹಗಳು) ,  ಗಿನ್ನೀಸ್ ರೆಕಾರ್ಡ್ ಹಾಗೂ ಇತರ ನಗೆ ನಾಟಕಗಳು

(ಡಾ ಹಂ.ಪ.ನಾ. ಅವರ ಅಧ್ಯಕ್ಷತೆಯಲ್ಲಿ ಜನಪರಸಾಹಿತ್ಯದ  ನೆರಳಲ್ಲಿ ಪ್ರಕಟವಾದ ಸಿಟಿಬಸ್ಸು ಪುಸ್ತಕ  ವರ್ಷದ ಚೊಚ್ಚಲ ಕ್ರತಿಗಳ ಪ್ರಶಸ್ತಿಗೆ ಆಯ್ಕೆಯಾದ ಪುಸ್ತಕಗಳ ಪಟ್ಟಿಯಲ್ಲಿ ಸೇರಿದರೂ  ಪ್ರಕಟವಾದ ತಾರೀಖಿನಿಂದ ೩೬೫ ಕ್ಕಿಂತ ಕೆಲವು ದಿನಗಳು ಹೆಚ್ಚಾದುವೆಂಬ ಕಾರಣದಿಂದ  ಹಿಂದುಳಿಯಿತು. ಆದರೆ ಪ್ರಕಟಿಸಿದ ೧೦೦೦ ಪ್ರತಿಗಳು ಎರಡೇ ವಾರದಲ್ಲಿ ಮುಗಿದುಹೋಗಿ  ಎರಡನೇ ಮುದ್ರಣಕ್ಕೆ ತಯಾರಾಯಿತು) ಅನಿವಾರ್ಯ ಕಾರಣಗಳಿಂದ ಎರಡನೆಯ ಮುದ್ರಣ ಇನ್ನೂ ಆಗುವುದರಲ್ಲೇ ಇದೆ.

೧೨. ರಾಜ್ಯ ಮಟ್ಟದಲ್ಲಿ ಮಾನ್ಯ ಮಂತ್ರಿಗಳ  ಅಧ್ಯಕ್ಷತೆಯಲ್ಲಿ ನಡೆದ  ಕಾರ್ಯಕ್ರಮಗಳ ಸಂಯೋಜನೆ ಹಾಗೂ ನಿರೂಪಣೆ.

೧೩.   ಆಕಾಶವಾಣಿ ಪರಿಮಳ ವಿಭಾಗದಿಂದ ಹಲವಾರು ವರ್ಷಗಳು ಬೋಧನೀಯ                                        ಕಾರ್ಯಕ್ರಮಗಳನ್ನು ನಡೆಸಿಕೊಟ್ಟ  ಹೆಮ್ಮೆಯ ಜೊತೆಗೆ ಆಕಾಶವಾಣಿಯ ಇತರ ವಿಭಾಗಗಳಿಂದ  ಸ್ವಂತ ಕವನ ಹಾಗೂ ಸಣ್ಣ ಕತೆಗಳ ವಾಚನರೇಡಿಯೋ ನಾಟಕಗಳಲ್ಲಿ ಅಭಿನಯದ ಗಳಿಕೆ.

೧೪. ಬೆಂಗಳೂರು ದೂರದರ್ಶನದಲ್ಲಿ  ಹಲವಾರು ಬೋಧನೀಯ ಕಾರ್ಯಕ್ರಮಗಳ ತಯಾರಿಕೆ ಹಾಗೂ ಪ್ರಸ್ತುತಿಯ ಜೊತೆಗೆ ಹಲವಾರು ಖ್ಯಾತ ವ್ಯಕ್ತಿಗಳ ಸಂದರ್ಶನ ಕಾರ್ಯಕ್ರಮವನ್ನೂ ನಡೆಸಿಕೊಟ್ಟ ಹೆಮ್ಮೆ.  

        ಇವರು ತಯಾರಿಸಿ  ಪ್ರಸ್ತುತಿ ಪಡಿಸಿದ ಟೆಲಿಫೋನಿನ ಆವಿಶ್ಕಾರಅದರ ಬಳಕೆಟೆಲಿಫೋನ್ ಎಕ್ಸ್ ಛೇಂಜ್ ಕಾರ್ಯ ಮಾಡುವ ರೀತಿಯನ್ನು ಒಳಗೊಂಡ ಕಾರ್ಯಕ್ರಮ ಭಾರತದ ಎಲ್ಲಾ ರಾಜ್ಯಗಳಿಂದಲೂ ಆಯಾ ಭಾಷೆಗಳಲ್ಲಿ ಪ್ರಸಾರವಾಯಿತು.

೧೫. ಮೈಸೂರಿನಲ್ಲಿ ನಡೆದ ದಸರಾ ಮೆರವಣಿಗೆಯ ದೂರದರ್ಶನದ ವರದಿಯನ್ನು ಪ್ರಸ್ತುತ ಪಡಿಸಿದ ಹೆಮ್ಮೆ.

೧೬.  ಅಂತರ ಪ್ರೌಢಶಾಲಾ ಸ್ಪರ್ಧೆಗಳಲ್ಲಿ  ಬರೆದು ನಿರ್ದೇಶಿಸಿದ ನಾಟಕಗಳಿಗೆ ಬಹುಮಾನ.

೧೭. ಬೆಂಗಳೂರು ಆಕಾಶವಾಣಿ ಯವರು ಏರ್ಪಡಿಸಿದ್ದ ಪ್ರಕ್ರತಿಯ ಸಮತೋಲನ"  ಗಾಯನ ಸ್ಪರ್ಧೆಯಲ್ಲಿ  ಇವರು ಬರೆದು ಸಂಗೀತ ಸಂಯೋಜಿಸಿ ಹಾಡಿಸಿದ ಕವನಗಳಿಗೆ ವಿಜಯ. ಅಲ್ಲದೆ ಒಂದು ಕವನ ಕಾರ್ಯಕ್ರಮಕ್ಕೆ ಬಹಳ ಸೂಕ್ತವಾಗಿದ್ದದ್ದರಿಂದ  ಕವನ ಇಡೀ ವರ್ಷ ಕಾರ್ಯಕ್ರಮದ ಮೊದಲಿಗೆ ಪ್ರಸಾರಮಾಡಿದ ಮನ್ನಣೆ.

 

೧೮.  "ಮ್ಯಾಥಮ್ಯಾಟಿಕ್ಸ್ ಮಹಾಮೇಳ" ನಗೆಬರಹ ಕಾಲೇಜು ವಿದ್ಯಾರ್ಥಿಗಳಿಂದ ನಾಟಕವಾಗಿ ಆಕಾಶವಾಣಿಯಲ್ಲಿ ಅಭಿನಯಿಸಲ್ಪಟ್ಟ ಸಂತೋಷ.

೧೯.  ವಿಜಯ ಪ್ರೌಢಶಾಲೆಯ ಪರವಾಗಿ ಹಲವಾರು ಸಾರ್ವಜನಿಕ ಸಂಸ್ಥೆಗಳಿಗೆ ನೃತ್ಯನಾಟಕವನ್ನು ರೂಪಿಸಿ ನಿರ್ದೇಶಿಸಿದ ಹಾಗೂ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಮ್ಮೆ . ಅಂತರ ರಾಷ್ಟಿಯ ಉಳಿತಾಯ ದಿನಾಚರಣೆಯಲ್ಲಿ ಇವರೇ ಬರೆದು ಸಂಗೀತ ಸಂಯೋಜಿಸಿದ ’ಉಳಿತಾಯ’ವನ್ನು ಕುರಿತ ಸಮೂಹಗಾನದ ಪ್ರಸ್ತುತಿ.

೨೦.  ಕನ್ನಡ ಸಿನೆಮ ರಂಗದಲ್ಲಿ  ಹೆಸರು ಮಾಡಿದ ನಿರ್ದೇಶಕ ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ  ಶಿವರಾಜಕುಮಾರ್ ನಟಿಸಿದ ಚಲನಚಿತ್ರವೊಂದರ  ಗೀತೆಗೆ ಸಾಹಿತ್ಯ ಬರೆಯುವ ಅವಕಾಶ.

೨೧. "ಹೂ ಈಸ್ ಹೂ" ಏಶಿಯಾದ ಮೆನ್ ಅಂಡ್ ವಿಮೆನ್ ಆಫ್ ಅಛೀವ್ ಮೆಂಟ್ಸ್  ಡೈರೆಕ್ಟರಿಯಲ್ಲಿ ಇವರ ಹೆಸರಿನ ಉಲ್ಲೇಖನ.

೨೨. ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ಗುರು ದತ್ತಾತ್ರೇಯರ ಚರಿತ್ರೆಹಾಗೂ ದತ್ತಾತ್ರೇಯ ಸುಪ್ರಭಾತಭಜನೆಗಳು   ದೇವರನಾಮಗಳು ತಿರುಪತಿಯಿಂದ ಪ್ರಕಟವಾಗುವ "ಸಪ್ತಗಿರಿ" ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅದೃಷ್ಟ.

ಇತ್ತೀಚೆಗೆ ಅವುಗಳನ್ನು ಅಸ್ಥಾನ ವಿದ್ವಾನ್ ಶ್ರೀ ಪ್ರಸನ್ನ ಕುಮಾರ್ಶ್ರೀಮತಿ ಸುರೇಖ ಹೆಗ್ಗಡೆಜ್ಯೋತಿ ಮಹೇಶ್, ಶ್ರೀಮತಿ ಸಾವಿತ್ರಿ ಸತ್ಯೇಂದ್ರ  ಮೊದಲಾದ  ಪ್ರಸಿದ್ಧ ಗಾಯಕರು ಇವರದೇ ಆದ ವಿಡಿಯೋ ಚಾನೆಲ್ಗಾಗಿ ಹಾಡಿರುವ ಗೌರವ.(ಚಾನೆಲ್ ಹೆಸರು - ಕೆ.ವೈ. ಮಂತ್ರಗಳು)

ಇವರು ಬರೆದ ಯುಗಾದಿ ಗೀತೆಚಂದ್ರಿಕಾ ಸಂಸ್ಥೆಯವರಿಂದ  ವಿಡಿಯೋಗೆ ಅಳವಡಿಕೆ. ದೀಪಾವಳಿಗೀತೆ ಯು.ಕೆ 

ಕನ್ನಡಬಳಗದ ಆಪ್ತಗೀತೆಯಾಯಿತು

ಇವರು ಬರೆದಿರುವ ದತ್ತಾತ್ರೇಯ ಅಷ್ಟೋತ್ತರ ’ಸ್ತೋತ್ರನಿಧಿ’ ಯಲ್ಲಿ ಪ್ರಕಟಣೆ.

ಭಾರತ ಬಿಟ್ಟು ಇಂಗ್ಲೆಂಡಿಗೆ ನೆಲಸಲು ಬಂದಾಗ  ನೀರಿನಿಂದ ಮೀನನ್ನು ಹೊರತೆಗೆದು ನೆಲದಮೇಲೆ ಬಿಟ್ಟ ಪರಿಸ್ಥಿತಿ. ಆದರೆ ಜೀವನದಲ್ಲಿ ಯಾವುದಕ್ಕೂ ಸೊಲೊಪ್ಪದ ಇವರ ಮನೋಬಲ ಇಲ್ಲಿಯೂ ಇವರನ್ನು ಕಾಪಾಡಿತು. ಒಂದು ವ್ಯಕ್ತಿ ಪಡೆಯಬಹುದಾದ ತುತ್ತತುದಿಯ ಡಿಗ್ರಿಯನ್ನು ಕನ್ನಡದಲ್ಲಿ ಪಡೆದಿದ್ದರೂಬಿ.ಎಸ್.ಸಿ. ಬಿ.ಎಡ್ ಗಳ ತುದಿಬಾಲವಿದ್ದರೂಕಂಪ್ಯೂಟರ್ ಡೇಟಬೇಸ್ ಡಿಪ್ಲೊಮ ಇದ್ದರೂ ಕೆಲಸ ಸಿಗುವುದು ಸುಲಭವಾಗಲಿಲ್ಲ. ಅದಕ್ಕಾಗಿ ಸುಮ್ಮನೆ ಕುಳಿತಿರದೆ ಎ.ಎ.ಟಿ ಹಾಗೂ ಸೀಮ

ಗಳನ್ನು (ಅಕೌಟಿಂಗ್ ಪರೀಕ್ಷೆಗಳು)  ಅಭ್ಯಸಿಸಿ ಪತಿಷ್ಟಿತ  ಕಂಪನಿಯೊಂದರಲ್ಲಿ  ಪ್ರಾಜೆಕ್ಟ್  ಅಕೌಂಟೆಂಟ್ ಕೆಲಸ ದೊರಕಿಸಿಕೊಂಡರು.

ಇಡೀ ಕಂಪೆನಿಗೆ  ಒಬ್ಬಳೇ ಅನ್ಯದೇಶೀಯಳಾಗಿ ಕೆಲಸ ಗಿಟ್ಟಿಸಿಕೊಂಡುದೂ ಅಲ್ಲಿಯ ’ಡೈರೆಕ್ಟರ್ ಟಿಂ ಬೇಕರ್’ ಇವರ ಸಾಧನೆಗಳನ್ನು  ಮೆಚ್ಚಿಕೊಂಡದ್ದರಿಂದ ಎಂದರೆ ಆಶ್ಚರ್ಯವಾಗದೆ ಇದ್ದೀತೆಅಲ್ಲಿಯೂ ನಮ್ಮದೇಶದ ಉಡುಪನ್ನೆ ಧರಿಸಿ ಅವರೆಲ್ಲರ ಪ್ರಶಂಸೆಗೆ ಪಾತ್ರರಾದ ಸಂತೋಷ ಇವರದು.  ಆರು ವರ್ಷಗಳ ಸೇವೆಯ ನಂತರ  ಕೆಲಸಕ್ಕೆ ಅನಿವಾರ್ಯ ಕಾರಣಗಳಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿತು.

ಅಲ್ಲಿಯ ಋಣಾನುಬಂಧ ಮುಗಿದ ಕೂಡಲೆ ಗೆ ಹತ್ತಿರದಲ್ಲೇ ಇದ್ದ  ’ಲಿಮೋ  ಬಿಸಿನೆಸ್ಸ್ ಕಂಪೆನಿಯಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಕೆಲಸ ಮಾಡಿ ಕಂಪೆನಿಯ ’ಸೆಕ್ರೆಟರಿಯಾಗಿ’ ಇತ್ತೀಚೆಗೆ ನಿವೃತ್ತರಾಗಿದ್ದಾರೆ.

ಮೊದಲಿನಿಂದಲೂ ಸಾಹಿತ್ಯದಲ್ಲಿ ಬಹಳ ಚುರುಕಾಗಿದ್ದ ಇವರನ್ನು  ಇಂಗ್ಲೆಂಡಿನಲ್ಲೂ  ಬಹಳಷ್ಟು ಅವಕಾಶಗಳು  ಹುಡುಕಿಕೊಂಡು ಬಂದವು.

 

ಉದಾಹರಣೆಗೆ :

೨೩. ಕನ್ನಡ ಬಳಗ ಯು.ಕೆ:

ಬಳಗದ ರಜತ ಮಹೋತ್ಸವದಂದು ಕನ್ನಡ ಬಳಗದ ಬೆಳವಣಿಗೆಯ ಕುರಿತು ಪ್ರಬಂಧ ಮಂಡನೆ.

 

ಕಲಾ ಸಂಗಮ:

ಸಂಘದ ವತಿಯಿಂದ ಆಗಾಗ್ಗೆ ನಡೆಯುತ್ತಿದ್ದ ಕವಿಗೋಷ್ಟಿಯಲ್ಲಿ ಪ್ರಮುಖ ಪಾತ್ರ.

 

ಮೈಥಲಾಜಿಕಲ್ ಸೊಸೈಟಿ:

ಅಧ್ಯಾತ್ಮಿಕ ವಿಷಯಗಳನ್ನು ಕುರಿತು ಹಲವಾರು ಉಪನ್ಯಾಸಗಳನ್ನು ಇಂಗ್ಲೀಷ್ ಭಾಷೆಯಲ್ಲಿ ನೀಡಿ ವಿದ್ವಜ್ಜನರ ಮೆಚ್ಚುಗೆಗೆ ಪಾತ್ರವಾದ ಹಿರಿಮೆ.

 

ವೀರಶೈವ ಸಂಘ:

ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಘವಾಂಕನ ’ಸಿದ್ಧರಾಮ ಚಾರಿತ್ಯ್ರ’ವನ್ನು ಕುರಿತು ಉಪನ್ಯಾಸ.

 

ಕನ್ನಡ ಸಂಘ ನಾರ್ತ್ ಯು.ಕೆ:

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ  ಪ್ರಸ್ತುತಿ ಹಾಗೂ ನಿರೂಪಣೆ.

 

ಇವೆಲ್ಲ ಕಡೆಗಳಲ್ಲಿ ತಮ್ಮ  ವಾಗ್ವೈಖರಿಯಿಂದ  ಜನರ ಮನವನ್ನು ಗೆದ್ದಿದ್ದಾರೆ.

ಹೆಸರು ಪ್ರತಿಷ್ಟೆಗಳನ್ನು ಇವರು ಅರಸಿ ಹೋಗಲಿಲ್ಲ. ಅವೇ ಇವರನ್ನು ಅರಸಿ ಬಂದವು.

ಹಾಗೆಯೇ

೨೪.ಇಂಗ್ಲೆಂಡಿನಂತಹ ಅಪರಿಚಿತ ದೇಶದಲ್ಲೂ ಅನಿರೀಕ್ಷಿತವಾಗಿ  "HER MAJESTY" ಸರ್ಕಾರದಿಂದ " ಹಿಂದೂ ಪ್ರಿಸನ್ ಮಿನಿಸ್ಟರ್ ಆಗಿ ನೇಮಕಗೊಂಡರು.

 

೨೫. ಮ್ಯಾಂಚೆಸ್ಟರ್ ಯುನೈಟೆಡ್ "   ಪಂದ್ಯದ ಸಮಯದಲ್ಲಿ ನಡೆದ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಹೆಮ್ಮೆ ಇವರದು.

 

೨೬ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿರುವ " ರಾಯಲ್ ಸ್ಕೂಲ್ ಆಫ಼್ ಮ್ಯೂಸಿಕ್ "  ನಲ್ಲಿ  ಇಂಡಿಯನ್ ಹೈಕಮೀಷನರ್ ಸನ್ಮಾನ್ಯ  ಸಿಂಘವಿ  ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ  ಅವಕಾಶ.

 

೨೭."ವೇದರತ್ನ" ಬಿರುದು ಪಡೆದ  ವೇದವಿದ್ವಾನ್ ಚನ್ನಕೇಶವ ಅವಧಾನಿಗಳ ಬಳುವಳಿಯಾದ ವೇದದ ತಿಳುವಳಿಕೆಯಿಂದ ಯುವಪೀಳಿಗೆಗೆ ನಮ್ಮ ಸಂಸ್ಕ್ರತಿಯ ಪರಿಚಯ  ಮಾಡಿಕೊಡಲು  ಪತಿ ಕೃಷ್ಣಮೂರ್ತಿಗಳೊಂದಿಗೆ  ಸಮಾಜಸೇವೆಯನ್ನು ಈಗಲೂ  ಮಾಡುತ್ತಿದ್ದಾರೆ. ಕಲಿತ ವೇದಪಾಠದ ಕೆಲವಂಶವನ್ನು ವಿಡಿಯೋಗೆ ಅಳವಡಿಸಿ ಪ್ರಸ್ತುತ ಪಡಿಸಿದ್ದಾರೆ.

 

’ಇವರಿಂದ ತಮ್ಮ ಜೀವನದಲ್ಲಿ ಬಹಳ ದೊಡ್ದ ಪರಿವರ್ತನೆಯೇ ಉಂಟಾಯಿತು’ ಎನ್ನುತ್ತಾರೆ ಎಂ.ಬಿ.ಇ. ಆಗಿ ಸೇವೆ ಸಲ್ಲಿಸುತ್ತಿರುವ ಡಾ ಸೂರ್ಯನಾರಾಯಣ ಸೆಟ್ಟರು. ಅವರು ಕೊಡುವ ಕಾರಣ ಸತ್ಯವತಿಯವರು ಬರೆದ ಸೆಟ್ಟರನ್ನು ಕುರಿತ ಲೇಖನ ಸುಧಾ" ಪತ್ರಿಕೆಯಲ್ಲಿ ಪ್ರಕಟವಾದದ್ದು

 

ನೌಕರಿಯಿಂದ ನಿವ್ರತ್ತರಾದರೂ ಬರವಣಿಗೆಯಿಂದ ನಿವ್ರತ್ತಿಯನ್ನು ಹೊಂದಿಲ್ಲ. ಕೊನೆಯ ಉಸಿರಿರುವವರೆಗೂ ಬರೆಯುವ ಹಂಬಲವನ್ನು ಇಟ್ಟುಕೊಂಡಿರುವ ಇವರು  ಶಿವಮೊಗ್ಗದಿಂದ ಪ್ರಕಟವಾಗುವ ಸಂಕೇತಿ ಸಂಪದ ಮಾಸ ಪತ್ರಿಕೆಗೆ "ಬಹಳ ವರ್ಷಗಳಿಂದ ಬರೆಯುತ್ತಿದ್ದಾರೆ.

೨೮.ದೇಸೀಸ್ವರ ಆರಂಭವಾದ ದಿನದಿಂದ ಇಂದಿನವರೆಗೂ ಹತ್ತು ಹಲವಾರು ಕವನಗಳುನಗೆಲೇಖನಗಳುವಿಚಾರಾತ್ಮಕ ಪ್ರಬಂಧಗಳುಸಣ್ಣಕತೆ  ಬರೆಯುತ್ತಿದ್ದಾರೆ.

’ಕನ್ನಡ ಪ್ರಭ ಎನ್.ಆರ್.ಐ’ ಪಾಕ್ಷಿಕ ಪತ್ರಿಕೆಗೆ ’ಬಿಳಿಯರ ಜೀವನ’ ಅಂಕಣವನ್ನುಬರೆಯುತ್ತಿದ್ದಾರೆ  ಹಾಗೂ ಶ್ರಾವಣ ಬ್ಲಾಗ್ ಗೆ  ತೆರೆಯ ಮರೆಗೆ ಸರಿದ ಸ್ವಾತಂತ್ರ ವೀರರನ್ನು ಕುರಿತು ಅಂಕಣಬರೆಯಲು ಪ್ರಾರಂಭಿಸಿದ್ದಾರೆ.

೨೯.'ಕನ್ನಡ ನಿಮಗಾಗಿವೆಬ್ಸೈಟ್"ಕೆ. ವೈ ಮಂತ್ರಗಳು" ಮತ್ತು "ಸಾಹಿತ್ಯ ಸಂಗಮ"  ವಿಡಿಯೋ ಚಾನೆಲ್ಗಳ ಮೂಲಕ ಸಾಹಿತ್ಯಕ ಹಾಗೂ ವೈದಿಕ  ಸೇವೆಯನ್ನು ಮಾಡುತ್ತಿದ್ದಾರೆ.

 (ವೆಬ್ಸೈಟ್  ಅರ್ಥವಿವರಣೆಗಳೊಂದಿಗೆ ೫೦೦ಕ್ಕೂ ಮಿಕ್ಕಿದಂತೆ ಗಾದೆಗಳು ಕವನಗಳುನಗೆಬರಹಗಳುಗುರುಚರಿತ್ರೆಮೊದಲಾದವುಗಳನ್ನು ಒಳಗೊಂಡಿದೆ).

೩೦.ಇಂಗ್ಲೆಂಡಿನ ಬಿ.ಎಚ್.ಎಫ಼್ ರೇಡಿಯೋ ಗಾಗಿ ಡಾ. ಜಿ.ಎನ್ ಉಪಾಧ್ಯರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕವನಗಳ ಪ್ರಸ್ತುತಿ.

೩೧.ಇತ್ತೀಚಿನ ಬೆಳವಣಿಗೆಯಾಗಿ " ಡಾ. ದ. ರಾ ಬೇಂದ್ರೆ ಕಾವ್ಯವಿಹಾರ" ಕಾರ್ಯಕ್ರಮವನ್ನು ಮುಂಬೈ ವಿಶ್ವವಿದ್ಯಾನಿಲಯ ಹಾಗೂವಿವಿಡ್ಲಿಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡು ಬೇಂದ್ರೆಯವರ ಆಪ್ತ ಶಿಷ್ಯರಾದ ಡಾ .ಜಿ. ವಿ ಕುಲಕರ್ಣಿಯವರೊಡನೆ ಸಂದರ್ಶನ ಕಾರ್ಯಕ್ರಮಗಳನ್ನು ನಡೆಸಿ ಅದನ್ನು ವಿಡಿಯೋ  ಸರಣಿಯಾಗಿ  ಪ್ರಸಾರಮಾಡುತ್ತಿದ್ದಾರೆ.  (ಆಸಕ್ತರು  ಸಾಹಿತ್ಯ ಸಂಗಮ "ವಿವಿಡ್ಲಿಪಿ" ಅಥವ ಮುಂಬೈ "ವಿಶ್ವವಿದ್ಯಾನಿಲಯ" ಚಾನೆಲ್ ಗಳಲ್ಲಿ  ಕಾರ್ಯಕ್ರಮಗಳನ್ನು  ನೋಡಿ ಕೇಳಿ ಆನಂದಿಸಬಹುದು. ಬೇಂದ್ರೆಯವರ ಬದುಕಿನ ತೆರೆದ ಮುಖದ ವಿಶ್ಲೇಷಣೆ ಇಲ್ಲಿ ಸಿಗುತ್ತದೆ. ಸಾಮಾನ್ಯ ಓದುಗನ ಅರಿವಿಗೆ ಬಾರದ ಹಲವಾರು ವಿಷಯಗಳ ಮೇಲೆ ಜೀ.ವಿ" ಯವರು ಬೆಳಕು ಚೆಲ್ಲಿದ್ದಾರೆ.)

೩೨.ರೇಡಿಯೋ "ಬಿ ಎಚ್ ಎಫ಼್ "  ಮೂಲಕ ಹಲವಾರು ಸಾಹಿತ್ಯಕ ಕಾರ್ಯಕ್ರಮಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿನ  ಹಲವಾರು ವಿದ್ವಾಂಸರ ಸಾಹಿತ್ಯಕ ಜ್ಞಾನವನ್ನು  ಇಂಗ್ಲೆಂಡ್ ಕನ್ನಡಿಗರಿಗೆ ದೊರಕಿಸಿಕೊಟ್ಟಿದ್ದಾರೆ.

೩೩.ಇವರ ಸಾಧನೆಯನ್ನು ಗಮನಿಸಿದ "ನಮ್ ರೇಡಿಯೋ" ಇವರೊಡನೆ ಸಂದರ್ಶನವನ್ನು" ವಾಟ್ಸಪ್ ಯುಕೆ" ಕಾರ್ಯಕ್ರಮದಲ್ಲಿ  ಏರ್ಪಡಿಸಿತ್ತು.

 

೩೪.ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಡಾಗಿರೀಶ್ ಅಜ್ಜಕ್ಕಳ ಅವರ ಅಧ್ಯಕ್ಷತೆಯಲ್ಲಿ  ಇಂಗ್ಲಿಷಿನಲ್ಲಿ ನಡೆದ ಜಾಲಗೋಷ್ಟಿ ಸರಣಿಯಲ್ಲಿ ರಾಷ್ಟ್ರಕವಿ ಕುವೆಂಪುರವರನ್ನು ಕುರಿತು ಉಪನ್ಯಾಸ , ಕರ್ನಾಟಕದ ಹಲವಾರು ಸ್ವಾತಂತ್ರಹೋರಾಟಗಾರರನ್ನು ಕುರಿತ ಪುಸ್ತಕಗಳನ್ನು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ ಹೆಮ್ಮೆ,  ಚಾತುರ್ಮಾಸಿಕ ಪತ್ರಿಕೆಯಲ್ಲಿ ಅನುವಾದಿತ ಕವನಗಳ ಪ್ರಕಟಣೆ .

 

೩೫. ಇದುವರೆವಿಗೆ ೬೦ಕ್ಕೂ ಮಿಕ್ಕಿದಂತೆ  ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ 

ಕವನಗಳು೬೦ಕ್ಕೂ ಮೀರಿದ ಸಂಖ್ಯೆಯ ಸ್ವರಚಿತ ಕವನಗಳೂ  ಪುಸ್ತಕ ರೂಪದಲ್ಲಿ  ಪ್ರಕಟಣೆಗೆ ಸಿದ್ಧವಾಗಿವೆ.

 

೩೬.ಬೆಂಗಳೂರಿನ ’ಲಲಿತ ಸಾಹಿತ್ಯ ವೇದಿಕೆ  ವತಿಯಿಂದ ಕುವೆಂಪುರವರ ’ರಾಮಾಯಣ ದರ್ಶನ’ ಹಾಗೂ 

’ಕಥನ ಕವನಗಳನ್ನು ಕುರಿತು ಉಪನ್ಯಾಸ.

 

೩೭.ಕಥಾ ಪರಂಪರೆ ಕ್ಲಬ್ ಹೌಸನಲ್ಲಿ ಸಕ್ರಿಯ ಪಾತ್ರ . ಇವರದೇ ಹಲವಾರು ಪ್ರಬಂಧಗಳು , ಕಥೆಗಳು  ಇವರದೇ ಆದ ’ರೇಡಿಯೋ ಕಣ್ಮಣಿ’ ಯಲ್ಲೂ ಶೋತೃಗಳಿಗೆ ದೊರಕಿದೆ.

೩೮.ಭಾವಪದ’,”ಸಂಪ್ರದಾಯ’, ’ರೇಷ್ಮೆ ವಸ್ತ್ರದಲ್ಲಿ ಕಗ್ಗ’, ’ವಾಯಿಸ್ ಸ್ಟುಡಿಯೋ ಮ್ಯೂಸಿಕ್ ಕ್ಲಬ್’  ಮೊದಲಾದ ಕ್ಲಬ ಹೌಸ್ ಗಳಲ್ಲಿ ಸಕ್ರಿಯ ಭಾಗಿಗಳಾಗಿಬಹುಮುಖ ಪ್ರತಿಭೆಯೆಂದು ಗುರುತಿಸಲ್ಪಟ್ಟಿದ್ದಾರೆ.

೩೯. ಕ್ಯಾಲಿಫೋರ್ನಿಯ ದ ’ಟಿ.ವಿ.ಕೆ.ಎಸ್’ ಸಂಘದಿಂದ ಪ್ರಕಟವಾಗುವ ’ಮಿನುಗು’ ವಾರ್ಶಿಕ ಪತ್ರಿಕೆಯಲ್ಲಿ ಕವನಗಳ ಪ್ರಕಟಣೆ ಹಾಗೂ  ಸಂಘದ ಕಾರ್ಯಕ್ರಮದಲ್ಲಿ ಬೇಂದ್ರೆಯವರನ್ನು ಕುರಿತು ಉಪನ್ಯಾಸ.

೪೦. ಚಿಕ್ಕಂದಿನಿಂದಲೂ ಹಲವಾರು ತೊಂದರೆಗಳನ್ನೇ ಎದುರಿಸುತ್ತ ಬಂದಿದ್ದರೂ ಕಲಿಯುವುದರಲ್ಲಿಕಲಿಸುವುದರಲ್ಲಿ ಈಗಲೂ ಅದೇ ಉತ್ಸಾಹದಲ್ಲಿರುವ ಇವರು ಸತತವಾಗಿ ಪುಸ್ತಕಗಳನ್ನು ಓದಿ ಅದಕ್ಕೆ ವಿಮರ್ಶೆಗಳನ್ನು ಬರೆಯುವುದರ ಜೊತೆಗೆ , ವಿಷ್ಣು ಸಹಸ್ರನಾಮಭಗವದ್ಗೀತೆಲಲಿತ ಸಹಸ್ರನಾಮ ಮೊದಲಾದ ಪ್ರಚಲಿತ ವೈದಿಕ ಸಾಹಿತ್ಯವನ್ನು ಆನ್ಲೈನ್ ಮೂಲಕ ಆಸಕ್ತರಿಗೆ ಹೇಳಿಕೊಡುವುದರ ಜೊತೆಗೆ ನಮ್ಮ ಸಂಪ್ರದಾಯಗಳಲ್ಲಿರಬೇಕಾದ ತಿದ್ದುಪಡಿಯನ್ನೂ ವಿವರಿಸುತ್ತಾರೆ. 

 

೪೧. ೪೦ ವರ್ಷಗಳಿಂದಲೂ ಸತತವಾಗಿ ಕನ್ನಡ ಸಾಹಿತ್ಯದ ಸೇವೆಯನ್ನು ಮಾಡಿಕೊಂಡು ಬಂದಿರುವ ಇವರು ವಿದೇಶದಲ್ಲಿ ಕನ್ನಡವಲ್ಲದ ಪರಿಸರದಲ್ಲೂ ಕನ್ನಡವನ್ನು , ಹಿಂದೂ ಸಂಸ್ಕೃತಿಯನ್ನೂ ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಸತ್ಯವತಿ ಮೂರ್ತಿ

 


Comments

  1. ಸಂಕೇತಿ ವ್ಯಕ್ತಿ ಪರಿಚಯದ ಪುಸ್ತಕ ಬರುತ್ತಿದೆ. ಅದರಲ್ಲಿ ಶ್ರೀ ಲ ನ. ಶಾಸ್ತ್ರಿ ಅವರು ಬರೆದ ವೇ.ಚೆನ್ನಕೇಶವ ಅವಧಾನಿಗಳ ಬಗೆಗಿನ ಲೇಖನ ಹಾಕಿಕೊಳ್ಳುತ್ತೇನೆ. ನಿಮ್ಮ ಪರಿಚಯ ಲೇಖನವನ್ನೂ ಹಾಕುತ್ತೇನೆ. ನಿಮ್ಮ ವಂಶವೃಕ್ಷ ಬರೆದು ಕಳಿಸಿ.ನಿಮ್ಮ ಸಾಧನೆಗಳು ಗೌರವ ಹೆಚ್ಚಿಸಿವೆ.

    ReplyDelete

Post a Comment

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ