ರಜಕನಾದನು ರಾಜನು
ರಜಕನಾದನು ರಾಜನು 1.ಬಿನ್ನಪವ ಲಾಲಿಪುದು ಗುರುವೇ ಗನ್ನಮಹಿಮಾ ಪಾದಯತಿಗಳ ಪೊನ್ನ ಚರಿತೆಯನು ಕೇಳ್ವ ಬಯಕೆಯು ಅಂತರಂಗದೊಳು ಇನ್ನು ಮುಂದಕೆ ಎತ್ತ ಪೋದರು ಸನ್ನುತವರ ಗುರುಯತಿಗಳೆಂಬು ದನೊಲುಮೆಯಲಿತಿಳಿಯಲುಲಿವುದೆನುತೆರಗಿದನು ಪದಕೆ 2.ಪದದೊಳೆರಗಿದ ಭಕ್ತನೇಳಿಸಿ ಮುದದೆ ಹರಸಿದ ಸಿದ್ಧರವನಿಗೆ ಪದುಮನಾಭನ ವಿಮಲಚರಿತೆಯ ಬಿಡದೆ ಪೇಳಿದರು ಪದವ ಬಿಡು ನೀ ಮೇಲೆ ಏಳೈ ಪದವ ಕೊಡುವಾ ಕತೆಯ ಪೇಳುವೆ ಪದದಿನುಡಿಯುತ ಗುರುಮಹಿಮೆಯಪಾದಯತಿವರನ 3.ಕುರುವ ಪುರದೊಳು ಗುರುವು ನೆಲೆಸಿರೆ ವರವ ಕೋರಿದ ರಜಕನೋರ್ವನು ಭರದಿ ಪಡೆದಾ ರಾಜ್ಯಪದವಿಯ ದೇಶಕೋಶಗಳ ಆರಿಗಾದರು ವರವ ನೀವರು ಗುರುವ ಕರುಣೆಯು ಹಿರಿದು ಎಲ್ಲಕು ಸಿರಿಯ ತರುವುದು ಬಯಸಿದೊಡನೆಯೆ ತಡವ ಮಾಡದೆಲೆ 4.ಗುರುವೆ ಕರುಣಿಪುದು ವಿವರಿಸುವುದು ವರಗುರುವ ವೃತ್ತಾಂತವನೆನಗೆ ಕರುಣೆತೋರ್ವುದುಪಾವನಗೊಳಿಸುವುದು ಜನುಮವನ್ನು ಕುರುವಪುರದಲಿ ರಜಕನವನಿಗೆ ಕರುಣೆಯಾದುದ ತಿಳಿಯೆ ಪೇಳ್ವುದು ವರವದೇವನು ಇತ್ತರೆನುವುದ ಬಿಡಿಸಿ ತಿಳಿಸುವುದು 5.ಅಂದು ಅಂಬಿಕೆ ವರವ ಪಡೆಯಲು ಮುಂದು ನಡೆದುದು ಬಹಳ ಮಹಿಮೆಯು ಚಂದದಿಂದಲಿ ಗುರುವು ಕುರುವಪುರದಲಿ ನೆಲೆಸಿರಲು ಬಂದು ನಿತ್ಯದಿ ಸ್ನಾನಗೈವರು ಸಂದ ಸಂಗಮ ತೀರ್ಥಗಳಲ್ಲಿ ಬಂದ ಭಕ್ತರ ಕರುಣಿಸುತತಾ ಪಾದಯತಿವರರು 6.ನಿತ್ಯದಲಗಸನೋರ್ವ ಬರುವನು ಸತ್ಯಮೂರುತಿ ಗುರುವ ಕಾಣುತ ಸತ್ಯದಿಂದಲಿ ನಮಿಸಿ ನಡೆವನುಪರಿವಿಡಿಯಲಂತೆ ಇಂತುದಿನಗಳು ಉರುಳಿಪೋಗಲು ಬಂತು ದಿನವದು ಬಾಳಲಗಸನ...