ಜೂಜು
ಜೂಜು
ಇದೆಂಥ ಮಾಯೆಯೋ ಕಾಣೆನಣ್ಣ
ಜನರೇಕೆ ಮಾರು ಹೋಗ್ತಾರಣ್ಣ
ಆಡ್ತಾರೆ ಜೂಜಿನಾಟವನ್ನ
ಮರೀತಾರೆ ಹೆಂಡತಿ ಮಕ್ಕಳನ್ನ!
ಬೀಡಿ ಸಿಗರೇಟು ಸೇದೋಕೆ ಚುಟ್ಟ
ಇಸ್ಪೀಟು ರೇಸು ಪಗಡೆ ಸಟ್ಟಾ
ಯಾವುದಾದರೇನು ಜೂಜೆಲ್ಲ ಓಂದೇ
ದಿನವೆಲ್ಲ ಬೆವರಿಳಿಸಿ ದುಡೀತಾರೆ ಬಿಡದೆ
ಕಳಿತಾರೆ ಕ್ಷಣಾದಲ್ಲಿ ಜೂಜಿಗೆ ಸುರಿದೆ
ಬಿಡ್ತಾರೆ ನೀತಿ ಕಳ್ಕೋತಾರೆ ಶಾಂತಿ
ಜಾತಿ ಧರ್ಮ ಬಿಟ್ಟು ಆಗ್ತಾರೆ ಕೋತಿ
ಮನೆ ಮಠ ಇಡ್ತಾರೆ ಗಿರವಿ
ಮಾರ್ತಾರೆ ಕೈಗೆ ಸಿಕ್ಕಿದ ಹರವಿ
ಕೊಡ್ತಾರೆ ಹೆಂಡತಿ ಮಕ್ಕಳಕೈಗೆ
ಕರಟವೋ ಬಿಕ್ಷಾಪಾತ್ರೆಯೊ ಕೊನೆಗೆ
ಅಟ್ಟಮೇಲೆ ಉರೀತು ಒಲೆ
ಕೆಟ್ಟಮೇಲೆ ಬಂತು ಬುದ್ಧಿ
ಮೊದಲೇನೆ ಎಚ್ಚತ್ತಿದ್ರೆ ಬುದ್ಧಿ
ಆಗ್ತಿತ್ತು ಜೀವನ ಶುದ್ಧಿ !
Comments
Post a Comment