ಸುರಾಂಗನೆ

                                        ಸುರಾಂಗನೆ


    ಬಂದಳು ಧರೆಗೆ ಸುರಾಂಗನೆ
    ಬ್ರಿಟಿಷರೊಡನೆ ಮದಿರಾಂಗನೆ
    ಮೋಹದ ಜಾಲವ ಬೀಸಿದಳಾಕೆ
    ಭಾರತದ ಮುಗ್ಧಜನಗಳಿಗೀಕೆ
    ಅಮೃತವ ಹಂಚೆ ಬಂದ ಮೋಹಿನಿ
    ವಂಚಿಸಿ ನೀಡಿದಳು ಮದಿರವಾಹಿನಿ
    ಅಮೃತದ ಹಾದಿಯಲಿ ಬಂದ
    ಮದಿರೆಯೆ ರಕ್ಕಸಗಂದ
    ಮಾನ ಮರ್ಯಾದೆಗಳ ನಾಶ
    ಸಂಸಾರ ಸುಖದ ವಿನಾಶ    
    ತುಂಬಿ ಬರುತಿರೆ ಪಾಪದ ಕೋಶ
    ಹೆಂಡತಿ ಮಕ್ಕಳ ಸರ್ವನಾಶ
    ಮೋಹಿನಿಯಾಲಿಂಗದೊಳು
    ಮತ್ತಿನಲಿ ಮಲಗಿರಲು
    ಇವರರಿಯರು ಸುತ್ತಲಿನ ಪರಿವೆ
    ಇವರಿಗಾಗದು ಜಗದ ಅರಿವೆ    
    ಕುಡಿವರು  ಜನವ ಮೆಚ್ಚಿಸೆ ಮೊದಲು
    ಕುಡಿತವು ಕುಡಿವನ ಮೆಚ್ಚಿಸಲು
    ಕುಡಿವರು ಕುಡಿವರು ಆಗದೆ ನಿಲ್ಲಿಸಲು
    ನಂತರ ಬರುವುದೆ ಸಾವಿನ ಮೆಟ್ಟಿಲು
    ಧರ್ಮೇಚ ಅರ್ಥೇಚಗಳ ವಿವರ
    ಕಟ್ಟಿಕೊಂಡ ಹೆಂಡತಿ ಮಕ್ಕಳ ಪ್ರವರ
    ಹಣವನ್ನು ತರತಾರೆ ದಿನವೆಲ್ಲ ದುಡಿದು
    ಮಲಗುತಾರೆ ಮೈಮರೆತು ಮೈತುಂಬ ಕುಡಿದು
    ಅನ್ಕೋತಾರೆ ಸಿಗುತ್ತೆ ಶಾಂತಿ ಕುಡಿದಾಗ
    ತಿಳುವಳಿಕೆ ಬರುತ್ತೆ ಎಲ್ಲ ಹರಾಜಾದಾಗ!

ಡಾ ಸತ್ಯವತಿ ಮೂರ್ತಿ
    












    



Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ