ಅನಿವಾಸಿ

 

ಸಿರಿವಂತರ ಮನೆಯ ಕೆಲಸದಾಕಿ:

                     ಹೊಟ್ಟೆ ತುಂಬ ಊಟ

                ಮೈತುಂಬ ಬಟ್ಟೆ

                     ಕಣ್ತುಂಬ ನೋಟ

                     ಕಿಸೆ ತುಂಬ ಪೌಂಡು

                     ಎಲ್ಲವುಂಟು ಇಲ್ಲಿ ನೌಕರಿಯಲ್ಲಿ

                     ಸಂಸ್ಕೃತ ಬಿಟ್ಠೋಯ್ತು

                     ಕನ್ನಡ ಮರೆತ್ಹೋಯ್ತು

                     ಇಂಗ್ಲಿಷ್ ಬಾರದಾಯ್ತು,

                     ಕ್ಷಮಿಸಿ, ನಮಸ್ಕಾರ, ವಂದನೆಗಳು ಮರೆಯಾಯ್ತು

                     ಸಾರಿ, ಎಕ್ಸ್ಕ್ಯೂಸ್ಮಿ, ಥ್ಯಾಂಕ್ಯು ಗಳ ಸಂತೆಯಾಯ್ತು


ಯಂತ್ರಕ್ಕೆ ಯಂತ್ರವಾಗಿ


ಗಡಿಯಾರದ ಮುಳ್ಳಾಗಿ ತಿರುಗಿದ್ದಾಯ್ತು

                     ಇಂಗ್ಲಿಷಿನ ಕವಚ ತೊಟ್ಟಾಯ್ತು

                     ಅವರಂತಾಗಲೆತ್ನಿಸಿಯಾಯ್ತು

                     ಭೂಮಿಯನು ಬಿಟ್ಟಾಯ್ತು

                     ನೆನೆಸಿದ ಸ್ವರ್ಗ ಸಿಗದಾಯ್ತು

                     ವಿಶ್ವಾಮಿತ್ರನ ತ್ರಿಶಂಕು

                     ಆ ಭಾರತ ಭೂಮಿಯನು ಬಿಟ್ಟಾಯ್ತು

                    ಬಯಸಿದ ಇಂಗ್ಲೀಷ್ ಸ್ವರ್ಗ ಸಿಗದಾಯ್ತು

                     ಇವರ ಸಮಾಜದ ಹಿಸ್ಸೆಯಾಗದ

                     ನಿರಾಸೆ ನನ್ನದಾಯ್ತು

                     ನಾನು ನಿಜವಾಗಿಯೂ ಅನಿವಾಸಿ

 

ಡಾ ಸತ್ಯವತಿ ಮೂರ್ತಿ

ಅನಿವಾಸಿ ಅಂಗಳದಲ್ಲಿ ಪ್ರಕಟವಾಗಿದೆ.


 

Comments

Popular posts from this blog

ದೇವಾ ಕರುಣೆಯ ನು ತೋರ ಲಾರೆಯ

ಕವಾಲಿ

ಹೊಂದಾಣಿಕೆ