ಏಳು ಪಾವನ ಚರಣ /ಏಳು ಪರಮಾ ಕರುಣ
ಏಳು ಪಾವನ ಚರಣ /ಏಳು ಪರಮಾ ಕರುಣ ಏಳು ದತ್ತಾತ್ರೇಯ /ಏಳು ಗುರುವೇ ಏಳು ದೇವರದೇವ /ಗಾಣಗಾಪುರದೊಡೆಯ ಏಳು ಭಕ್ತರರಕ್ಷ / ಪರಮ ಗುರುವೇ ಹಕ್ಕಿ ಚಿಲಿಪಿಲಿ ಗಾನ /ಮಧುರತೆಯ ಸುರತಾನ ನಿನಗೆ ಕಾದಿಹು/ದು ಶ್ರೀಪಾದನೆ ಮಂದವಾಗೆಸೆಯುತಿಹ/ ಮಾರುತನು ತಾನಿಂದು ನಿನಗೆ ಕಾದಿಹನಯ್ಯ ಬೆಳಗಾಯಿತೂ ರಾಜ್ಯಪದವಿಯ ಪಡೆದ/ ರಜಕನಿಂದಿಹನಿಲ್ಲಿ ಚರಣವಾರೋಗಿಸಲು/ ಏಳು ಗುರುವೇ ವೇದವನೆ ನುಡಿದನಾ / ಕುಲಕೆ ಹೀನನು ತಾನು ಬಂದಿಹನು ನಿನ್ನನ್ನು/ ಸೇವಿಸೆ ದೇವ ವಿಶ್ವಮೂರ್ತಿಯು ನಿ/ನ್ನಪರಿಮಿತ ಶಕ್ತಿಯನು ಅರಿತ ತಿವಿಕ್ರ/ಮ ಯತಿ / ಐತಂದಿಹನೂ ಪರಿಪರಿಯ ಪುಷ್ಪದೊಳು /ನಿನ್ನ ಪೂಜಿಸಲು ಕಾದು ನಿಂದಿಹನೇಳು/ ಬೆಳಗಾಯಿತೂ ಬಂಜೆ ಎಮ್ಮೆಯು ಕರೆದ /ಅದ್ಭುತವ ನೋಡಿದಾ ದಂಪತಿಗಳೈತಂದು /ನಿಂದಿಹರಿಲ್ಲಿ ಅಷ್ಟರೂಪದಿ ಅಂದು /ದೀವಳಿಗೆಗೈತಂದು ವಿಶ್ವರೂಪವ ನೀನು /ಮೆರೆದೆ ಗುರುವೇ ಈಶ ಕಲ್ಲೇಶ ನೀ /ಈಶ ಸರ್ವೇಶನೀ ಪೊಗಳುತಲಿಹನು/ ನರಹರಿ ಕವಿಯು ಕುಷ್ಟರೋಗವ ಕಳೆದೆ /ಜ್ಞಾನವನು ಕರುಣಿಸಿದೆ ಮೂರ್ಖನಿಗೆ ಬುದ್ಧಿಯನು/ ನೀಡಿದೆ ಗುರುವೆ ನಿನ್ನ ನಂಬದೆ ಬಂದ/ ಎನಗನುಗ್ರಹಮಾಡಿ ಎನ್ನ ಉದ್ಧರಿಸಿದಾ/ ಗುರುವೆ ಏಳು ಎಂದು ಬೇಡುತಲಿಹನು/ ನಂದಿಕವಿ ಬಂದಿಲ್ಲಿ ಬೆಳಗಾಯಿತೇಳಯ್ಯ/ ಪರಮ ಗುರುವೇ ಭಕ್ತವೃಂದವು ನಿನ್ನ /ಸೇವೆಗೆ ಬಂದು ನಿಂದಿಹರೇಳು/ ಬೆಳಗಾಯಿತೂ ನಿನ್ನ ಸೇವಿಸಲೆಂದು /ಹಾಲು ತುಪ್ಪವ ತಂದು ನೆರೆದಿಹರು ಶಿಷ್ಯರೇ/ಳಯ್ಯ ಗುರುವೇ ...