ನಿನ್ನ ಹೆಸರೇನು?
ನಿನ್ನ ಹೆಸರೇನು?
ಜೀ ವಿ ಕೇಳಿದರು ನಿನ್ನ ಹೆಸರೇನು?
ನಾನಂದೆ ಹೆಸರು ಸತ್ಯ.
ಸತ್ಯದಲಿ ಹೇಳುವೆನು
ಕನ್ನಡದತ್ತ ಅವಳಮತಿ ನಿತ್ಯ
ಪದ್ಯವೇಕೆ ಬರೆಯಬಾರದು ನೀನು?
ನಿನ್ನ ಹೆಸರಿನ ಮೇಲೆ?
ಹೌದೆಂದು ತಲೆಯಾಡಿಸಿದೆ
ಪೆನ್ನ ಕೈಗೆತ್ತಿಕೊಂಡೆ.
ಬರೆದೆ ನನ್ನ ಹೆಸರು ಸತ್ಯ
ಶಂತನು ವರಿಸಿದ ಸತ್ಯವತಿಯಲ್ಲ.
ಭೀಷ್ಮಪ್ರತಿಜ್ಞೆಯ ಹೆಗ್ಗುರುತಲ್ಲ
ವಿವಾಹಕೆ ಮಗನ ಪಟ್ಟದ
ಷರತ್ತು ಹಾಕಿದ ಬೆಸ್ತರವಳಲ್ಲ.
ಸಾವಿತ್ರಿ ಗಂಡ ಸತ್ಯವಾನನಲ್ಲ
ಶೂನ್ಯತೆಯಲಿ ಪೂರ್ಣತೆಯ ಕಾಣ್ವ
ಪರಬ್ರಹ್ಮರೂಪವಿವಳಲ್ಲ
ವೇದಬ್ರಹ್ಮರ ಪುತ್ರಿ
ವೇದರತ್ನರ ಶಿಷ್ಯೆ
ಮೂರ್ತಿ ಮನೆಮನಗಳೊಡತಿ
ಈ ಸತ್ಯವತಿ.
ಪಾಂಡಿತ್ಯವಿಲ್ಲ: ಕನ್ನಡದ ಸೊಗಡಿಲ್ಲ:
ಬರೆಯುವ ಹಂಬಲವು ಮೈಯೆಲ್ಲ!
ನನ್ನಂತರಂಗದಾಣೆ ಕನ್ನಡವೆ ನನ್ನುಸಿರು.
ಕನ್ನಡವೆ ನನ್ಜೀವ
ಡಾ ಸತ್ಯವತಿ ಮೂರ್ತಿ
Comments
Post a Comment