Posts

ಏಳು ಪಾವನ ಚರಣ /ಏಳು ಪರಮಾ ಕರುಣ

 ಏಳು ಪಾವನ ಚರಣ /ಏಳು ಪರಮಾ ಕರುಣ ಏಳು ದತ್ತಾತ್ರೇಯ /ಏಳು ಗುರುವೇ ಏಳು ದೇವರದೇವ /ಗಾಣಗಾಪುರದೊಡೆಯ  ಏಳು ಭಕ್ತರರಕ್ಷ / ಪರಮ ಗುರುವೇ ಹಕ್ಕಿ ಚಿಲಿಪಿಲಿ ಗಾನ /ಮಧುರತೆಯ ಸುರತಾನ ನಿನಗೆ ಕಾದಿಹು/ದು  ಶ್ರೀಪಾದನೆ ಮಂದವಾಗೆಸೆಯುತಿಹ/ ಮಾರುತನು ತಾನಿಂದು ನಿನಗೆ ಕಾದಿಹನಯ್ಯ ಬೆಳಗಾಯಿತೂ ರಾಜ್ಯಪದವಿಯ ಪಡೆದ/ ರಜಕನಿಂದಿಹನಿಲ್ಲಿ ಚರಣವಾರೋಗಿಸಲು/ ಏಳು ಗುರುವೇ ವೇದವನೆ ನುಡಿದನಾ / ಕುಲಕೆ ಹೀನನು ತಾನು ಬಂದಿಹನು ನಿನ್ನನ್ನು/ ಸೇವಿಸೆ ದೇವ ವಿಶ್ವಮೂರ್ತಿಯು ನಿ/ನ್ನಪರಿಮಿತ ಶಕ್ತಿಯನು ಅರಿತ ತಿವಿಕ್ರ/ಮ ಯತಿ  / ಐತಂದಿಹನೂ ಪರಿಪರಿಯ ಪುಷ್ಪದೊಳು /ನಿನ್ನ ಪೂಜಿಸಲು ಕಾದು ನಿಂದಿಹನೇಳು/ ಬೆಳಗಾಯಿತೂ ಬಂಜೆ ಎಮ್ಮೆಯು ಕರೆದ /ಅದ್ಭುತವ ನೋಡಿದಾ ದಂಪತಿಗಳೈತಂದು /ನಿಂದಿಹರಿಲ್ಲಿ ಅಷ್ಟರೂಪದಿ ಅಂದು /ದೀವಳಿಗೆಗೈತಂದು ವಿಶ್ವರೂಪವ ನೀನು /ಮೆರೆದೆ ಗುರುವೇ ಈಶ ಕಲ್ಲೇಶ ನೀ /ಈಶ ಸರ್ವೇಶನೀ  ಪೊಗಳುತಲಿಹನು/ ನರಹರಿ ಕವಿಯು ಕುಷ್ಟರೋಗವ ಕಳೆದೆ /ಜ್ಞಾನವನು ಕರುಣಿಸಿದೆ ಮೂರ್ಖನಿಗೆ ಬುದ್ಧಿಯನು/ ನೀಡಿದೆ ಗುರುವೆ ನಿನ್ನ ನಂಬದೆ ಬಂದ/ ಎನಗನುಗ್ರಹಮಾಡಿ ಎನ್ನ ಉದ್ಧರಿಸಿದಾ/ ಗುರುವೆ ಏಳು ಎಂದು ಬೇಡುತಲಿಹನು/ ನಂದಿಕವಿ ಬಂದಿಲ್ಲಿ ಬೆಳಗಾಯಿತೇಳಯ್ಯ/ ಪರಮ ಗುರುವೇ ಭಕ್ತವೃಂದವು ನಿನ್ನ /ಸೇವೆಗೆ ಬಂದು  ನಿಂದಿಹರೇಳು/ ಬೆಳಗಾಯಿತೂ ನಿನ್ನ ಸೇವಿಸಲೆಂದು /ಹಾಲು ತುಪ್ಪವ ತಂದು ನೆರೆದಿಹರು ಶಿಷ್ಯರೇ/ಳಯ್ಯ ಗುರುವೇ    ಬಂಜೆ ಮುದುಕಿಯುಯೆನಗೆ/ ಪುತ್ರನನು ಕರುಣಿಸಿ

ಆಟೋಚಾಲಕನ ಕಥೆ -ವ್ಯಥೆ

  ಆಟೋಚಾಲಕನ ಕಥೆ -ವ್ಯಥೆ       ಕಡಲ ತೀರದಲ್ಲಿ ಕುಳಿತ ರಾಜು ನೀರನ್ನೇ ದಿಟ್ಟಿಸುತ್ತಿದ್ದ. ಅಲೆಗಳು ಒಂದಾದಮೇಲೊಂದು ಬಂದು   ದಡಕ್ಕೆ ಅಪ್ಪಳಿಸುತ್ತಿದ್ದರೂ ದಡ ಮಾತ್ರ ಯಾವ ಪ್ರತಿರೋಧವನ್ನೂ ತೋರಿಸದೇ ಶಾಂತವಾಗಿ ಅವುಗಳನ್ನು ಅಪ್ಪಿಕೊಳ್ಳುತಿತ್ತು.ಮೌನದಿಂದ ಅವುಗಳ ಆಹತವನ್ನು ಸಹಿಸಿತ್ತು.ದಡದ ಅಸಾಹಾಯಕತೆಯನ್ನು ನೋಡಿ ರಾಜುವಿಗೆ ಮರುಕ ಬಂದಿತು. ಜೊತೆಜೊತೆಗೆ ಅದರ ಸ್ಥಿರತೆಯ ಬಗ್ಗೆ ಹೆಮ್ಮೆಯೂ ಆಯಿತು. ಜೀವನವೂ ಹಾಗೆಯೇ ಅಲ್ಲವೆ ? ಕಷ್ಟ ನೋವುಗಳೆಂಬ ಹೊಡೆತಗಳು ಎಷ್ಟು ಬಿದ್ದರೂ ಸಹಿಸಲೇಬೇಕು. ಅವಗಳನ್ನು ಅಪ್ಪಿಕೊಂಡು ಒಪ್ಪಿಕೊಳ್ಳಲೇ ಬೇಕು. ಅದರಲ್ಲೂ ನಮ್ಮಂತಹ ಕೆಳ ವರ್ಗದ ಜನ! ನಮ್ಮ ಪರಿಸ್ಥಿತಿಯೇ ಇದಕ್ಕೆ ಕಾರಣವೇ ? ಪ್ರತಿಭಟಿಸಲು ಸಾಧ್ಯವೇ ಇಲ್ಲವೆ ? ನೂರಾರು ಆಲೋಚನೆಗಳು ತಲೆಯನ್ನು ತುಂಬಿ ಕಾಡುತ್ತಿದ್ದವು. ಏಕ ಕೋಣೆಯ ಪುಟ್ಟಮನೆಯಲ್ಲಿ ಅಪ್ಪ ಅಮ್ಮಂದಿರೊಂದಿಗೆ   ವಾಸ. ಅಮ್ಮನ ಜೊತೆಗೆ   ಅಪ್ಪನೂ ಮನೆಯಲ್ಲೇ ಸದಾ ಇರುತ್ತಿದ್ದ.   ಎಲ್ಲೂಕೆಲಸಕ್ಕೆ ಹೋಗದಿದ್ದ ಅವನಿಗೆ ಹೆಂಡತಿಯ ಜೊತೆ ಕುಳಿತು ಟಿವೀ ನೋಡುವುದೊಂದೇ ಹವ್ಯಾಸ. ಹಾಗಿದ್ದರೂ ಇದುವರೆಗೂ ಹೇಗೋ ನಡೆದುಕೊಂಡು ಬಂದಿತ್ತು .ಆದರೆ ನೆನ್ನೆ ತಾನೇ ಮದುವೆಯಾಗಿ ಹೆಂಡತಿಯನ್ನು ಮನೆಗೆ ಕರೆತಂದಾಗಿದೆ.ಹೆಂಡತಿಯ ಹೆಸರು ಲಕ್ಷ್ಮಿ.   ಅದೂ ಅಮ್ಮನ ಆಯ್ಕೆಯೇ! ರಾಜು ತನ್ನ ಹೆಂಡತಿಯಾಗುವವಳನ್ನು ಮದುವೆಗೆ ಮುನ್ನ ನೋಡುವ ಅವಕಾಶವೇ ಸಿಗಲಿಲ್ಲ. ಹೆಸರಿಗೆ ತಕ್ಕಂತೆ ರೂಪ. ನಿರಾಭರ

ದೇವಾ ಕರುಣೆಯ ನು ತೋರ ಲಾರೆಯ

 ದೇವಾ ಕರುಣೆಯ ನು ತೋರ ಲಾರೆಯ ಮುನಿಸಿಂ ದನೀ ಛಲವಾಂತು ನಿಂದೆಯ ಎಲ್ಲೆಡೆ  ನಿನ್ನನೆ  ಅರಸುತ ನಡೆದೇ ನಿನ್ನನೆ ಸತತವು ಅರ್ಚಿಸಿ ದಣಿದೇ ನಿನ್ನಯ ಪಾದಕೆ ಎನ್ನನೆ ಮಣಿದೇ ಎನ್ನಯ  ಕಾಯುವ ಗುರು ನೀ ನೆಂದೇ/೧/ ಪಾಪದ ಬದುಕಿಗೆ ರೋಸಿದೆ ಜೀವಾ ನಿನ್ನನು ಕಾಣದೆ  ಮಿಡಿದಿದೆ ನೋವಾ ಶಾಂತಿಯ ಕರುಣಿಸು ನೋವನು ಹರಿಸೂ ಕ್ಲೇಶವನೆಲ್ಲವ ಕೊನೆಗೊಳಿಸು ಹರಸು//೨// ಅನಸೂಯೆಗಂದೊಲಿದೆಯೋ ಗುರುವೇ ಸೌಮಿನಿಯನಂದು ಕಾಯ್ದೆಯೋ ನೀನು ದೀನಳ ಮೇಲೀ ಕೋಪವಿದೇಕೋ ಕಾಯೋ ಗಾಣಗಾ ಪುರದರಸನೇ /೩ ಡಾ ಸತ್ಯವತಿ ಮೂರ್ತಿ- ಗಾಯನ  ಸುರೇಖ ಹೆಗ್ಗಡೆ

ದುಷ್ಟ ಅಂಚೆಯವನು

ನೀನೇಕೆ ಹತಾಶಳಾಗಿ ಕುಳಿತಿರುವೆ ನನ್ನಮ್ಮ  ಮಳೆಯ ಇರಿಚಲು ಒಳಗೆ ಹಾರುತಿವೆ ಬಟ್ಟೆ ನಿನ್ನವು ತೊಯ್ದುಹೋಗುತಿವೆ ಅರಿವಿರದೆ ಮೈಮರೆತು ನೆಲದಲ್ಲಿ ಕುಳಿತಿರುವೆ?  ಚರ್ಚಿನ ಗಡಿಯಾರ ನಾಲ್ಕು ಬಾರಿಸಿದ್ದೂ ಕೇಳಿಸಿಲ್ಲೇನು?  ಇನ್ನೇನು  ತಮ್ಮ ಬರುವ ಹೊತ್ತಾಯ್ತು ಶಾಲೆಯಿಂದ. ಅದರರಿವೂ ಇರದೆ ಅಪರಿಚಿತಳಂತಿರುವೆಯಲ್ಲ!  ಓ.... ! ಅಪ್ಪನಿಂದ ಪತ್ರಬರಲಿಲ್ಲವೇನು ಇನ್ನೂ? ನೋಡಿದ್ದೆ ನಾನು ಹೋಗುತ್ತಿದ್ದ ಅಂಚೆಯವನನ್ನ! ಎಲ್ಲರಿಗೂ ಪತ್ರ ತಂದುಕೊಟ್ಟವನನ್ನ! ಅಪ್ಪನ ಪತ್ರವನು ಮಾತ್ರ ಕೊಡದೆ ಹೋದನು,  ತನಗೇ ಓದಲು ಬೇಕೇನೋ? ಬಹಳ ದುಷ್ಟನವನು. ನೀ ಬೇಸರಿಸದಿರು ಅದಕಾಗಿ ನನ್ನಮ್ಮ. ನಾಳೆ ಸಂತೆಯು ನೆರೆಯೂರಿನಲಿ ಆಳುಗಳ ಕಳಿಸಿ  ತರಿಸು ಪೇಪರು ಪೆನ್ನುಗಳ ನಾನೇ ಕೈಯಾರ ಬರೆದುಕೊಡುವೆ ಅಪ್ಪನಾ ಪತ್ರಗಳ! ಎದೆ ತಟ್ಟಿ ಹೇಳುವೆನು, ಒಂದೂ ತಪ್ಪನು ನೀ ಕಾಣಲಾರೆ ನನಗೆಲ್ಲ ಗೊತ್ತು ’ಅ’ ಇಂದ ”ಅಃ" ತನಕ  ಏಕಮ್ಮ ನಗುತಿಹೆ ನನ್ನ ಮಾತನು ಕೇಳಿ? ನಿನಗೆ ನಂಬಿಕೆ ಯಿಲ್ಲವೇನು? ಅಪ್ಪನಂತೆ ನಾ  ಗುಂಡಾಗಿ ಬರೆಯೆನೇನು? ನಂಬು ನನ್ನನ್ನು , ಪೇಪರಿಗೆ ರೂಲುದೊಣ್ಣೆಯನಿಟ್ಟು  ಅಪ್ಪನಷ್ಟೇ ಮುತುವರ್ಜಿಯಲಿ , ಬರೆವೆನು ದಪ್ಪ ದಪ್ಪಕ್ಷರಗಳಲಿ ಚಿಂತಿಸಬೇಡ ನೀನು ನಾ ಬರೆದ ಪತ್ರವನು ಕೊಡೆನು ಅಂಚೆಯವನಿಗೆ ನಾನೇ ಕೊಡುವೆ ತಂದು ನಿನ್ನ ಕೈಗೆ! ಓದಿ ಹೇಳುವೆ ಒಂದೊಂದೇ ಅಕ್ಷರವ! ನನಗೆ ತಿಳಿದಿದೆ ಅಮ್ಮ ಅಂಚೆಯವನ ಮನಸ್ಸು, ! ನಿನಗೆ ಕೊಡಲಾರ ಅವ ಸುಂದರ ಪತ್ರಗಳ!! ಡಾ ಸತ್ಯವತಿ ಮ

ದಾರಿ ದರ್ಪಣ

ಈ ಮಾತು ನಡೆದು ಈಗಾಗಲೇ ಕೆಲವು ವರ್ಷಗಳೇ ಉರುಳಿವೆ. ಲಂಡನ್ ನಗರಕ್ಕೆ ಸಮೀಪದಲ್ಲಿರುವ ,ಸ್ವಿಂಡನ್ ನಗರದಲ್ಲಿ ನಮ್ಮ ಆಪ್ತರಾದ ಶ್ರೀನಿವಾಸ ಹಾಗೂ ಗೌರಿ ವಾಸವಾಗಿದ್ದಾರೆ. ಅಲ್ಲಿಗೆ ನಮ್ಮ ಮನೆಯಿಂದ 3-4 ಗಂಟೆಗಳ ರಸ್ತೆ ಕಾರಿನಲ್ಲಿ.ಅವರ ಮನೆಯಲ್ಲಿ  ಸತ್ಯನಾರಾಯಣನ ಪೂಜೆ . ಬೆಳಗ್ಗೆ ಹೋಗಿ ಮತ್ತೆ ಸಂಜೆಗೆ ಹಿಂತಿರುಗುವುದೆಂದರೆ ಸ್ವಲ್ಪ ಆಯಾಸದ ಕೆಲಸವೇ! ಅಲ್ಲಿ  ಮೂರ್ತಿಯೇ ಪೂಜೆ ಮಾಡಿಸುವವರಿದ್ದರಿಂದ ಡ್ರೈವ್ ಮಾಡಿದುದೇ ಅಲ್ಲದೆ ,  ಪೂಜೆ ಮಾಡಿಸಲು ಒಂದೇ ಸಮನೆ ಕುಳಿತಿರಬೇಕಾಗುತ್ತದೆ . ಆಮೇಲೆ ಮತ್ತೆ ಹಿಂತಿರುಗಿ ಬರುವುದು ದೂರದ ಮಾತು. ಆದ್ದರಿಂದ ನಾನೂ ಮೂರ್ತಿ ಹಿಂದಿನ ದಿನವೇ ಹೊರಡುವುದೆಂದು ನಿರ್ಧರಿಸಿದೆವು. ಶುಕ್ರವಾರ ಸಂಜೆ ನಾನು ಕೆಲಸ ಮುಗಿಸಿ ಮನೆಗೆ ಬರುವ ವೇಳೆಗೆ ಮೂರ್ತಿ ತಯಾರಾಗಿ ಕುಳಿತಿದ್ದರು. ಅವರು ಈಗಾಗಲೇ ಕೆಲಸದಿಂದ ನಿವೃತ್ತರಾಗಿದ್ದರಲ್ಲ! ಹೀಗೆ ಹೊರಗೆ ಹೋಗುವ ಅವಕಾಶಗಳು ಅವರಿಗೆ ತುಂಬ ಬೇಕಾದವುಗಳೇ ಆಗಿದ್ದವು. ನಾನೂ  ಕೆಲಸದಿಂದ ಬಂದೊಡನೆಯೇ ಕೈಕಾಲು ಮುಖ ತೊಳೆದು ಬೇರೆ ಸೀರೆಯುಟ್ಟು ಮುಖಕ್ಕೆ ಒಂದಿಷ್ಟು ಪೇಂಟ್ ಬಳಿದು ಸಿದ್ಧವಾಗಿ ನಿಂತೆ. ಗಂಟೆ ಆಗಲೇ 6-15 ತೋರಿಸುತ್ತಿತ್ತು.ನಾವಿರುವುದು ಮಾಂಚೆಸ್ಟರ್  ಗೆ ಸೇರಿದ ಒಂದು ಬಡಾವಣೆಯಲ್ಲಿ.”ಆಶ್ಟನ್ ಅಂಡರ್ ಲೈನ್" ಅದರ ಹೆಸರು. ಇಂಗ್ಲೆಂಡಿನ ಬಡವಾಣೆಗಳ ಕೆಲ ಹೆಸರುಗಳಂತೂ ಬಹಳ ವಿಚಿತ್ರವಾದವುಗಳು. ಕನ್ನಡಕ್ಕೆ ಅನುವಾದ ಮಾಡಿದಾಗ ಕೆಲವಂತೂ ತೀರ ಹಾಸ್ಯಾಸ್ಪದವಾಗಿ

ನಿನ್ನ ಹೆಸರೇನು?

                                               ನಿನ್ನ ಹೆಸರೇನು ?   ಜೀ ವಿ ಕೇಳಿದರು ನಿನ್ನ ಹೆಸರೇನು ? ನಾನಂದೆ ಹೆಸರು ಸತ್ಯ. ಸತ್ಯದಲಿ ಹೇಳುವೆನು ಕನ್ನಡದತ್ತ ಅವಳಮತಿ ನಿತ್ಯ ಪದ್ಯವೇಕೆ ಬರೆಯಬಾರದು ನೀನು ? ನಿನ್ನ ಹೆಸರಿನ ಮೇಲೆ ? ಹೌದೆಂದು ತಲೆಯಾಡಿಸಿದೆ ಪೆನ್ನ ಕೈಗೆತ್ತಿಕೊಂಡೆ. ಬರೆದೆ ನನ್ನ ಹೆಸರು ಸತ್ಯ ಶಂತನು ವರಿಸಿದ ಸತ್ಯವತಿಯಲ್ಲ. ಭೀಷ್ಮಪ್ರತಿಜ್ಞೆಯ ಹೆಗ್ಗುರುತಲ್ಲ ವಿವಾಹಕೆ ಮಗನ ಪಟ್ಟದ ಷರತ್ತು ಹಾಕಿದ ಬೆಸ್ತರವಳಲ್ಲ. ಸಾವಿತ್ರಿ ಗಂಡ ಸತ್ಯವಾನನಲ್ಲ ಶೂನ್ಯತೆಯಲಿ ಪೂರ್ಣತೆಯ ಕಾಣ್ವ ಪರಬ್ರಹ್ಮರೂಪವಿವಳಲ್ಲ ವೇದಬ್ರಹ್ಮರ ಪುತ್ರಿ ವೇದರತ್ನರ ಶಿಷ್ಯೆ ಮೂರ್ತಿ ಮನೆಮನಗಳೊಡತಿ ಈ ಸತ್ಯವತಿ. ಪಾಂಡಿತ್ಯವಿಲ್ಲ: ಕನ್ನಡದ ಸೊಗಡಿಲ್ಲ: ಬರೆಯುವ ಹಂಬಲವು ಮೈಯೆಲ್ಲ! ನನ್ನಂತರಂಗದಾಣೆ ಕನ್ನಡವೆ ನನ್ನುಸಿರು. ಕನ್ನಡವೆ ನನ್ಜೀವ   ಡಾ ಸತ್ಯವತಿ ಮೂರ್ತಿ   09-06-2021

ಹೊಂದಾಣಿಕೆ

  ಹೊಂದಾಣಿಕೆ   ಚೆದುರಿದ ಕಾಳನು ಅನ್ನದ ಅಗುಳನು ರೊಟ್ಟಿಯ ತುಣುಕನು ಚುಂಚಿನಲಿ ಒಂದನೂ ಬಿಡದೆ ಭೇದವ ಮಾಡದೆ ರುಚಿ ಅರುಚಿಗೆ ಕಾಲ ಕಳೆಯದೆ   ಅಪ್ಪ ಅಮ್ಮದಿರು ಅಕ್ಕತಂಗಿಯರು ಅಣ್ಣ ತಮ್ಮದಿರು ಬಂಧುಬಾಂಧವರು ಅಕ್ಕಪಕ್ಕದ ಅವರಿವರೆಲ್ಲರು ಕೂಡಿ ತಿನ್ನುತಿವೆ ಸಮಭೋಗದಲಿ ಸಮಭಾಗದಲಿ   ಶೀಘ್ರದಿ ನುಂಗಿ ಮುಗಿಸಲು ಬೇಕು ಹೊತ್ತನು ಮೀರದೆ ಹೋಗಲು ಬೇಕು ಗೂಡಲಿ ಹಸಿವೆಗೆಕಿರುಚುವ ಮರಿಗೆ ಹೊಟ್ಟೆಗೆ ತುತ್ತನು ಒಯ್ಯಲು ಬೇಕು   ಒಮ್ಮೆ ಒಂದು ಗುಟುಕನು ಹಿಡಿದು ಬಂದಿತು ದೂರದ ಮಾಡಿನ ಮೇಲ್ಗಡೆ ಉಳಿದವು ಹೆಕ್ಕಲು ಅನುವನು ಕೊಡುತ ತನ್ನಯ ಕೊಕ್ಕಿನ ಊಟವ ಮುಗಿಸಲು.   ಒಮ್ಮೆಯು ಒಂದರ ಕಚ್ಚಾಟವ ಕಾಣೆ ಜಗಳವದಂತೂ ಇಲ್ಲವೆ ಇಲ್ಲ ಸರದಿಗೆ ಕಾಯುತ ತಾಳ್ಮೆಯ ಲಿರುವರು ಎಲ್ಲರು ಅಲ್ಲಿ ಸಮಭಾಗಿಗಳು   ಕೂಡಿ ಬಾಳುವುದರಲ್ಲಿ ಸುಖವಿದೆ ಒಗ್ಗಟ್ಟಿನಲ್ಲಿ ಎಲ್ಲರ ಬಲವಿದೆ ಭೂಮಿಯು ಇತ್ತುದು ಎಲ್ಲರ ಸ್ವತ್ತು ಸ್ವಾರ್ಥಕೆ ಹಮ್ಮಿಗೆ ಇಲ್ಲವು ಹೊತ್ತು   ಹೊಂದಾಣಿಕೆಯಿದು ಮನುಜನಲ್ಲಿಲ್ಲ ಹಕ್ಕಿಯ ನೋಡಿಯೂ ಕಲಿಯುವುದಿಲ್ಲ ನಾನು ನನ್ನದು ಸ್ವಾರ್ಥವದಿಲ್ಲದೆ ಸಮತಾಭಾವವ ಹೇಳುತ್ತವಲ್ಲ!   ಅದಂದಿನ ಜೀವನ ಅಂದಿಗೆ ಮೀಸಲು ಬರುವುದು ನಾಳೆ ಏನೇ ಇರಲಿ ಇಂದಿನ ಬದುಕನು ಬದುಕುವ ತಂತ್ರವ ಹಕ್ಕಿಯ ನೋಡಿ ಕಲಿಯಲು ಬೇಕು   ಬಂದಿತು ಅಲ್ಲಿ ಹೊಸ ಹಕ್ಕಿಯೊಂದು ಬಣ್ಣದಿ ಅದುವೆ ಇವುಗಳ

ಹಕ್ಕಿ ತಿನ್ನುತಿದೆ ನೋಡಿದಿರಾ

  ಹಕ್ಕಿ ತಿನ್ನುತಿದೆ ನೋಡಿದಿರಾ ಚೆದುರಿದ ಕಾಳನು ಅನ್ನದ ಅಗುಳನು ರೊಟ್ಟಿಯ ತುಣುಕನು ಚುಂಚಿನಲಿ ಒಂದನೂ ಬಿಡದೆ ಭೇದವ ಮಾಡದೆ ರುಚಿ ಅರುಚಿಗೆ ಕಾಲ ಕಳೆಯದೆ .....ಹಕ್ಕಿ ಹೆಕ್ಕುತಿದೆ   ಅಪ್ಪ ಅಮ್ಮದಿರು ಅಕ್ಕತಂಗಿಯರು ಅಣ್ಣ ತಮ್ಮದಿರುಬಂಧುಬಾಂಧವರು ಅಕ್ಕಪಕ್ಕದ ಅವರಿವರೆಲ್ಲರು ಕೂಡಿ ಸಮಭೋಗದಲಿ ಸಮಭಾಗದಲಿ...ಹಕ್ಕಿ ಹೆಕ್ಕುತಿದೆ   ಶೀಘ್ರದಿ ನುಂಗಿ ಮುಗಿಸಲು ಬೇಕು ಹೊತ್ತನು ಮೀರದೆ ಹೋಗಲು ಬೇಕು ಗೂಡಲಿ ಹಸಿವೆಗೆಕಿರುಚುವ ಮರಿಗೆ ಹೊಟ್ಟೆಗೆ ತುತ್ತನು ಒಯ್ಯಲು ಬೇಕು...ಹಕ್ಕಿ ಹೆಕ್ಕುತಿದೆ   ಒಮ್ಮೆ ಒಂದು ಗುಟುಕನು ಹಿಡಿದು ಬಂದಿತು ದೂರದ ಮಾಡಿನ ಮೇಲ್ಗಡೆ ಉಳಿದವು ಹೆಕ್ಕಲು ಅನುವನು ಕೊಡುತ ತನ್ನಯ ಕೊಕ್ಕಿನ ಊಟವ ಮುಗಿಸಲು...ಹಕ್ಕಿ ಹೆಕ್ಕುತಿದೆ   ಒಮ್ಮೆಯು ಒಂದರ ಕಚ್ಚಾಟವ ಕಾಣೆ ಜಗಳವದಂತೂ ಇಲ್ಲವೆ ಇಲ್ಲ ಸರದಿಗೆ ಕಾಯುತ ತಾಳ್ಮೆಯ ಲಿರುವರು ಎಲ್ಲರು ಅಲ್ಲಿ ಸಮಭಾಗಿಗಳು...ಹಕ್ಕಿ ಹೆಕ್ಕುತಿದೆ   ಕೂಡಿ ಬಾಳುವುದರಲ್ಲಿ ಸುಖವಿದೆ ಒಗ್ಗಟ್ಟಿನಲ್ಲಿ ಎಲ್ಲರ ಬಲವಿದೆ ಭೂಮಿಯು ಇತ್ತುದು ಎಲ್ಲರ ಸ್ವತ್ತು ಸ್ವಾರ್ಥಕೆ ಹಮ್ಮಿಗೆ ಇಲ್ಲವು ಹೊತ್ತು...ಹಕ್ಕಿ ಹೆಕ್ಕುತಿದೆ   ಹೊಂದಾಣಿಕೆಯಿದು ಮನುಜನಲ್ಲಿಲ್ಲ ಹಕ್ಕಿಯ ನೋಡಿಯೂ ಕಲಿಯುವುದಿಲ್ಲ ನಾನು ನನ್ನದು ಸ್ವಾರ್ಥವದಿಲ್ಲದೆ ಸಮತಾಭಾವವ ಹೇಳುವುವಲ್ಲ! ...ಹಕ್ಕಿ ಹೆಕ್ಕುತಿದೆ   ಅದಂದಿನ ಜೀವನ ಅಂದಿಗೆ ಮೀಸಲ

ಬಂತು ಭಾನುವಾರ

 ಬಂತು ಭಾನುವಾರ  ಲೇ ಸರೂ ಈ ಶರ್ಟಿನ ಗುಂಡಿ ಒಂದು ಬಿಟ್ ಹೋಗಿದೆ ಕಣೆ ಸ್ವಲ್ಪ ಹಾಕಿಕೊಡ್ತೀಯಾ? "ಹಾಕೊಡ್ತೀನಿ ರೀ . ಆದ್ರೆ ಈಗಲ್ಲ . ವೀಕ್ ಎಂಡ್ ಬರಲಿ . ಖಂಡಿತ ಹಾಕ್ಕೊಡ್ತೀನಿ." ಒಂದು ಗುಂಡಿ ಹಾಕ್ಕೊಡೋಕ್ಕೂ ವೀಕ್ ಎಂಡ್ ಬರ್ಬೇಕಾ?  ಹೌದೂರಿ , ಆತುರದಲ್ಲಿ ಅದನ್ನು ತಪ್ಪುತಪ್ಪಾಗಿ ಹಾಕಿ ಮತ್ತೆ ಬಿಚ್ಚೋ ಕೆಲ್ಸ ಯಾರು ಮಾಡ್ಕೊಳ್ಳೋರು? ಇನ್ನೇನು ಬಂತಲ್ಲ ಶನಿವಾರ , ಭಾನುವಾರ ಒಂದಿನ ಹಾಕೊಡ್ತೀನಿ ಬಿಡಿ. ಆಯ್ತು ಕಣೆ. ಮರೀಬೇಡ ಅಷ್ಟೆ  ಹೂಂ ರೀ ಜೊತೆಗೆ ಈ ವಾರವೆಲ್ಲ ತುಂಬಿದ ಕೆಲಸ. ಕ್ಲಿನಿಕ್ಕಿನ ಕೆಲಸ , ಮನೆಕೆಲಸ ಎರಡನ್ನೂ ಮೇಳೈಸಿಕೊಂಡು ಹೋಗ್ಬೇಕಲ್ವೆ? ನೀವು ನನ್ನ ಸಮ ಸಮಕ್ಕೆ ಸಹಾಯ ಮಾಡ್ತೀರಿ. ಅದೂ ನೀವು ಈಗ ಸದ್ಯಕ್ಕೆ ಮನೆಯಿಂದ ಕೆಲಸ ಮಾಡ್ತ ಇರೋದರಿಂದ.  ಆದ್ರೂ ಒಮ್ಮೊಮ್ಮೆ ಕಷ್ಟ ಅನ್ನಿಸುತ್ತೆ.  ರೀ ಅಂದಹಾಗೆ ಈ ಭಾನುವಾರ ಬಿಡುವು ಮಾಡಿಕೊಂಡು ಹೋಗಿ ಒಂದಿಷ್ಟು ಗಿಡಗಳನ್ನು ತರಬೇಕು ರೀ . ಬೇಸಗೆಯಲ್ಲಿ ಗಿಡಗಳು ಚೆನ್ನಾಗಿ ಚಿಗುರುತ್ತವೆ, ಅವಗಳಲ್ಲಿ ಅರಳುವ ಹೂಗಳನ್ನು ನೋಡೋದಕ್ಕೇ ಒಂದು ಸಂತೋಷ.  ನೀನ್ಹೇಳೋದು ನಿಜ. ಆಯ್ತು ನೋಡೋಣ .  ಅಂತೂ ಬಹಳ ನಿರೀಕ್ಷೆಗಳಿಂದ ಬಯಸುತ್ತಿದ್ದ ವಾರದ ಕೊನೆ ಬಂತು. ಶನಿವಾರವೆಲ್ಲ ವಾರದ ಬಟ್ಟೆಗಳನ್ನೊಗೆದು ,ಇಸ್ತ್ರಿ ಬೇಕಾದಲ್ಲಿ ಮಾಡಿ ಎಲ್ಲರ ಬಟ್ಟೆಗಳನ್ನೂ  ಮುಂದಿನ ವಾರಕ್ಕೆ ಸಿದ್ಧಮಾಡಿ ಇಡುವುದರಲ್ಲೇ ಕಳೆದು ಹೋಯಿತು. ನನ್ನ ಸ್ಥಿತಿ ಇದಾದರೆ ನನ್ನ ಪತಿದೇವರು ಮನೆಯನ್ನೆಲ್ಲ ಹೂ

ಆಸ್ಟ್ರೇಲಿಯಾ ಪ್ರವಾಸ ಕಥನ

  ಆಸ್ಟ್ರೇಲಿಯಾ   ಪ್ರವಾಸ ಕಥನ   ( ಈ ವಿವರಗಳು ಸುಮಾರು 20 ವರ್ಷಕ್ಕೂ ಹಳೆಯದಾಗಿದ್ದು ಇತ್ತೀಚೆಗೆ ಆಗಿರಬಹುದಾದ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ)     ಆಸ್ಟ್ರೇಲಿಯಾಕ್ಕೆ ಇದು ನನ್ನ ಮೊದಲ ಪ್ರಯಾಣವೇನೂ ಅಲ್ಲ. ಕಳೆದ ಡಿಸೆಂಬರ್ ನಲ್ಲಿ ಹೋಗಿ ಆರು ವಾರಗಳು ತಂಗಿದ್ದೆ . ಆದರೆ ಈ ಬಾರಿಯ ಪ್ರಯಾಣ ವಿಶೇವಾಗಿತ್ತು.ಮಗ ಡಿಗ್ರಿ ತೆಗೆದುಕೊಳ್ಳುವ ಸಮಾರಂಭವನ್ನು ನೋಡುವುದು ಸಂಭ್ರಮದ ವಿಷಯವಾಗಿತ್ತು. ಈ ಬಾರಿಯ ಪ್ರಯಾಣದಲ್ಲಿ ಮೂರ್ತಿ ಬೇರೆ ನನ್ನ ಜೊತೆಗಿದ್ದರು . ಪ್ರತಿಬಾರಿಯೂ ಅವರ ಕೆಲಸದ ಒತ್ತಡದಿಂದ ನಾನೊಬ್ಬಳೇ ಹೋಗಿ ಬರುವುದಾಗುತಿತ್ತು.ನಿಜವಾದ ಅರ್ಥದಲ್ಲಿ ಅದು ನಮ್ಮ ಪ್ರವಾಸವೇ ಸರಿ.ಮೇ 6 ನೇ ತಾರಿಖು ಬಹಳ ಕಾತರದಿಂದ ಎದುರು ನೋಡುತ್ತಿದ್ದ ದಿನ. ಆಸ್ಟ್ರೇಲಿಯದಲ್ಲಿ ಎಂ ಎಸ್ ಓದಿದ ನಮ್ಮ ಮಗ   , ಮೇ   ಹತ್ತನೇ ತಾರೀಖು    ಶಾಸ್ತ್ರೋಕ್ತವಾದ ರೀತಿಯಲ್ಲಿ ಪದವಿ ಸ್ವೀಕರಿಸುವವನಿದ್ದ.ಯಾವುದೇ ತಂದೆ ತಾಯಿಗಳ ಜೀವನದ ಮಹತ್ವದ ದಿನಗಳಲ್ಲಿ ಒಂದು. ಆ ಸಮಾರಂಭಕ್ಕೆ ನಾವೂ ಬರಲೇಬೇಕೆಂಬ ಒತ್ತಾಯವೂ ಇದ್ದು ನಮಗೂ ಹೋಗುವ ಆಸೆ ತೀವ್ರವಾಗಿದ್ದುದರಿಂದ ಪ್ರಯಾಣಕ್ಕೆ ಸಿದ್ಧರಾಗಿದ್ದೆವು. 6 ನೇ ತಾರೀಖು ಶನಿವಾರ ಬೆಳಗ್ಗೆ   9:30 ಕ್ಕೆ ಹೊರಡುವ ಸಿಂಗಪೂರ್ ಏರ್ಲೈನ್ಸ್   ಹತ್ತಿ ಆಸ್ಟ್ರೇಲಿಯಾಕ್ಕೆ ಹೊರಟೆವು.ಗೋಳದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಯಾಗಿ 180 ಡಿಗ್ರಿಗಳಲ್ಲಿ ಪ್ರಯಾಣ. ಸುಮಾರು 25 1/2 ಗಂಟೆಗಳ ದೀ