Posts

Showing posts from June, 2021

ಆಶಾವಾದ

  ಆಶಾವಾದ   ಜೀವನದ ತೋಟದಲಿ ಕೆಲಸದಾಳುಗಳು ನಾವು ದೊರಕಿಹುದೆಮಗೆಹಲತೆರನ ಕಾಳುಗಳ ಬಟ್ಟಲು ಬಿತ್ತಲು ನಮ್ಮದೇ ನೆಲ ; ಆಯ್ಕೆಯೂ ನಮ್ಮವು ಅಂದಗೈಯಲು ಬೇಕು ಜೀವನವ , ಗುರಿಯು ತಿಳಿದಿರಲು   ಋತುಗಳುಬದಲಾಗಿ ಪ್ರಕೃತ್ತಿ ತೋರಲು ವಿರೋಧವನು ಕಾಲವದು ಬಹುದು ನಮ್ಮ ನಿಶ್ಚಲ ದೃಢತೆಗೆ ತಕ್ಕಂತೆ ತಾಳಿದವ ಬಾಳಿಯಾನು ಬೇಕೆಂದ ಫಲ ಪಡೆಯುವನು ಅಪಶೃತಿಗೆಡೆಗೊಡದೆ ಮೀಟಬೇಕು ತಂತಿ ಶೃತಿಗೆ ತಕ್ಕಂತೆ     ವಿಧಿ ಪ್ರತಿಕೂಲವಾಗಿರಲು ಪೂರ್ಣಪ್ರಜ್ಞ್ಯತೆಯಲಿ ಸ್ಪಂದಿಸು ತಡಕೆ ಪಂದ್ಯದ ಗುಟ್ಟು ಗೊತ್ತು ವಿಜಯದ ಲಕ್ಶ್ಯವುಳ್ಳವಗೆ ಒಂದು ಬಾಗಿಲು ಮುಚ್ಚಲು ತೆರೆವುದು ನೂರಾರು ಗುರುತಿಸು ಸುರಿವ ನೀರಿನ ಕೊರತೆಯಿರಲು ಶರಣಾಗು ನೆಲಬಾವಿಗೆ   ಹುಟ್ಟಿನೊಡನೆ ಬಲು ಭಾಗ್ಯವನು ತರದಿದ್ದರೇನು ? ಕರಗಳ ಮಂತ್ರ ಸ್ಪರ್ಶದಿ ಕಾಷ್ಟವ ಸುವರ್ಣವಾಗಿಸು ಒಮ್ಮೆ ಸೋತರದರಲ್ಲಡಗಿಲ್ಲವೇ ಗೆಲುವಿನಾ ಜೇನು ? ಹಾವಿನಾ ಹೆಡೆಯಲು ವಜ್ರವಡಗಿಹುದು ಗುರುತಿಸು   ಸಕಾರನಂಬಿಕೆಯಲಿ ನಡೆ ತೊರೆದು ನಕಾರದಾಲೋಚನೆಗಳ ಬೀಳುತಲೆಕಲಿ ಪಾಠವ ನೇಳಲು , ಭರವಸೆಯ ಹಗ್ಗದಲಿ ಧೈರ್ಯದಲಿ ಮುನ್ನುಗ್ಗು ನೋಡು ಮುಂದಿಹ ಪ್ರಜ್ವಲಿಪ ಕಿರಣಗಳ ಅವಕಾಶವನಂತವಪಾರ  ಹೊಸಯೋಜನೆಗಳ ಸಾಕ್ಷಾತ್ಕಾರದಲಿ   ನೆಲಕ್ಕಂಟಿದ ಮರದಂತಸಹಾಯನೆನಸಂಜದಿರು ನಿನಗುಂಟು ಬಲಿಷ್ಠ ಕಾಲುಗಳು , ರೆಕ್ಕೆಗಳು ಹಾರಲು ...

ನಿಲ್ಲಿಸದಿರು ಉಸಿರಾಟವ

  17-05-2021 ನಿಲ್ಲಿಸದಿರು ಉಸಿರಾಟವ ನನ್ನಮ್ಮಾ...... ನಿಲ್ಲಿಸದಿರು ನನ್ನಮ್ಮ ಉಸಿರಾಟವ ವಾಯುವನು ನೀ ನಿಯಂತ್ರಿಸು ಅವನೊಡನೆ ಹೋಗದಿರು ಕತ್ತಲೆಯ ರಾತ್ರಿಯೊಳಗೆ ನುಸುಳಿ ಇನ್ನೇನು ಬಂದೀತು ಕೊರೆಯಾದ ಆಮ್ಲಜನಕ ......   ಮುಖವಾಡದಲ್ಲಿರಬೇಕು ದೂರನಿಲ್ಲಬೇಕು ನಾನು ಎಷ್ಟುಹತ್ತಿರವಾದರೂ ಬಲುದೂರ ಸಮುದ್ರದ ನೀರು ನಾನಿಲ್ಲೇ ನಿನ್ನ ಸನಿಹದಲ್ಲಿ ! ಅಮ್ಮ ಕೇಳುವುದೇ ನನ್ನೀ ಕೂಗು ! ಇನ್ನೇನು ಬಂದೀತು ಬಂದೀತು ಆಮ್ಲಜನಕ ......   ತಾತಮುತ್ತಾತಂದರು , ಅಜ್ಜಿಯರು ಕರೆದರೆಂಬ ನೆಪಬೇಡ ಹೊಳೆವತಾರೆಗಳು ಮನಸೆಳೆದವೆನ್ನಬೇಡ ಕಾಲವಿನ್ನೂ ಮುಗಿದಿಲ್ಲ , ತೆರಳದಿರು ನಮ್ಮನಗಲಿ ! ಇನ್ನೇನು ಬಂದೀತು ಬಂದೀತು ಆಮ್ಲಜನಕ ......   ಹಾಲು ನೀಡುವವ , ಪೇಪರನು ಹಾಕುವವ ನೆರೆಮನೆಯ ಪುಟ್ಟಹುಡುಗಿ ಅವಳಾ ಮುದ್ದುಬೆಕ್ಕು ಅತ್ತೆ , ಅಮ್ಮ , ಅಕ್ಕ , ನಿನ್ನ ಹಿತೈಷಿಗಳು ಕಾದಿಹರು ಇನ್ನೇನು ಬಂದೀತು ಬಂದೀತು ಆಮ್ಲಜನಕ ..... [31]   ..   ಯಮನೊಡನೆ ಹೋರಾಡುವ ಡಾಕ್ಟರುಗಳು ಗಳಿಗೆಗೊಮ್ಮೆ ನಿನ್ನ ನೋಡುವ ನರ್ಸುಗಳು ಎಲ್ಲರ ಶುಭಾಶಯವು ನಿನಗೆ , ಉಸಿರಾಡುತ್ತಿರಮ್ಮ ಇನ್ನೇನು ಬಂದೀತು ಬಂದೀತು ಆಮ್ಲಜನಕ .......       ಆಮ್ಲಜನಕಕ್ಕಾಗಿ ಸಾಲಿನಲಿ ನಿಂತೆ ಗಂಟೆಗಂಟೆ ...

ಓಂ ಜಯಜಯ ದತ್ತ ಪ್ರಭು

ಆರತಿ ಹಾಡು ಓಂ ಜಯಜಯ ದತ್ತ ಪ್ರಭು ಜಯ ದತ್ತ ಪ್ರಭು ಭಕ್ತರ ರಕ್ಷಕ ನೀನೇ ಕರುಣಾಕರನೆ ಅತ್ರಿಯ ತಪಸಿಗೆ ಮಣಿದೇ ಅನಸೂಯೆಗೊಲಿದೇ ಹರಿಹರ ರೂಪನು ನೀನೆ ದತ್ತಾತ್ರೇಯನೆ ಅವರೆಯ ಬಳ್ಳಿಯ ಕೀಳುತ ಬಡತನವ ಕಳೆದೆ ಗೊಡ್ಡೆಮ್ಮೆಯ ಕರೆಸಿದೆ ನೀ ನಿನಗೆಣೆ ಯಾರೈ ಒಣಗಿದ ಮರವನು ಚಿಗುರಿಸಿ ನರಹರಿಗೆ ಒಲಿದೆ ನಂದಿಯ ಸಂಶಯ ಬಿಡಿಸಿದೆ ಕುಷ್ಟವನು ಕಳೆದೆ ರಜಕನ ಭಕ್ತಿಗೆ ಮೆಚ್ಚಿದೆ ರಾಜ್ಯವ ನೀಡಿದೆ ಪಿಶಾಚ ಬಾಧೆಯ ಬಿಡಿಸಿದೆ ಮಗುವ ಬದುಕಿಸಿದೆ ಭಾಸ್ಕರ ತಂದ ಹಿಡಿಯನ್ನ ಅಕ್ಷಯವೆಸಗಿದೆ ಊರಿಗೆ ಊರನು ತಣಿಸುತ ಅದ್ಭುತವ ಮೆರೆದೆ ತಂತುಕ ಭಕ್ತಗೆ ಮರುಗಿ ಶಿಶೈಲಕ್ಕೊಯ್ದೆ ಹೊಲದ ಬೆಳೆಯನು ಹೆಚ್ಚಿಸಿ ರೈತನ ಹರಸಿದೆ ದತ್ತಾತ್ರೇಯನು ನೀನೆ ಶ್ರೀಪಾದನು ನೀ ನರಸಿಂಹ ಸರಸ್ವತಿ ನೀ ಲೀಲಾಮಯನೆ ನಿನ್ನಯ ಶರಣಕೆ ಬಂದೆನು ನಿನ್ನಾ ಮೊರೆಹೊಕ್ಕೆ ನೀನೇ ಕಾಯಲು ಬೇಕೈ ಅನ್ಯರ ಕಾಣೆನೋ ಅರ್ಚಿಸಲರಿಯೆನು ನಿನ್ನನು ಮೆಚ್ಚಿಸಲರಿಯೆನು ನೇಮ ನಿಯಮದರಿವಿಲ್ಲಾ ನೀನೇ ನನಗೆಲ್ಲ ನರಹರಿಯಾ ಭಕುತಿಯಿರದು ನಂದಿ ಹಟವಿರದು ರಜಕನ ನೇಮ ನನಗಿರದು ನೀಡೋ ನಿಷ್ಟೆಯಾ ಗಾಣಗಪುರದರಸನು ನೀ ನಂಬಿದರ ಪೊರೆದೆ ಕರುಣಿಸಿ ನಮ್ಮನು ಕಾಯೋ  ದತ್ತಾತ್ರೇಯನೇ

ಜೂಜು

                             ಜೂಜು ಇದೆಂಥ ಮಾಯೆಯೋ ಕಾಣೆನಣ್ಣ ಜನರೇಕೆ ಮಾರು ಹೋಗ್ತಾರಣ್ಣ ಆಡ್ತಾರೆ ಜೂಜಿನಾಟವನ್ನ ಮರೀತಾರೆ ಹೆಂಡತಿ ಮಕ್ಕಳನ್ನ! ಬೀಡಿ ಸಿಗರೇಟು ಸೇದೋಕೆ ಚುಟ್ಟ ಇಸ್ಪೀಟು ರೇಸು ಪಗಡೆ ಸಟ್ಟಾ ಯಾವುದಾದರೇನು ಜೂಜೆಲ್ಲ ಓಂದೇ ದಿನವೆಲ್ಲ ಬೆವರಿಳಿಸಿ ದುಡೀತಾರೆ  ಬಿಡದೆ ಕಳಿತಾರೆ ಕ್ಷಣಾದಲ್ಲಿ ಜೂಜಿಗೆ ಸುರಿದೆ ಬಿಡ್ತಾರೆ ನೀತಿ ಕಳ್ಕೋತಾರೆ ಶಾಂತಿ ಜಾತಿ ಧರ್ಮ ಬಿಟ್ಟು ಆಗ್ತಾರೆ ಕೋತಿ ಮನೆ ಮಠ ಇಡ್ತಾರೆ ಗಿರವಿ ಮಾರ್ತಾರೆ ಕೈಗೆ ಸಿಕ್ಕಿದ ಹರವಿ ಕೊಡ್ತಾರೆ ಹೆಂಡತಿ ಮಕ್ಕಳಕೈಗೆ ಕರಟವೋ ಬಿಕ್ಷಾಪಾತ್ರೆಯೊ ಕೊನೆಗೆ ಅಟ್ಟಮೇಲೆ ಉರೀತು ಒಲೆ ಕೆಟ್ಟಮೇಲೆ ಬಂತು ಬುದ್ಧಿ  ಮೊದಲೇನೆ ಎಚ್ಚತ್ತಿದ್ರೆ  ಬುದ್ಧಿ  ಆಗ್ತಿತ್ತು ಜೀವನ ಶುದ್ಧಿ !  

ಸುರಾಂಗನೆ

                                        ಸುರಾಂಗನೆ     ಬಂದಳು ಧರೆಗೆ ಸುರಾಂಗನೆ     ಬ್ರಿಟಿಷರೊಡನೆ ಮದಿರಾಂಗನೆ     ಮೋಹದ ಜಾಲವ ಬೀಸಿದಳಾಕೆ     ಭಾರತದ ಮುಗ್ಧಜನಗಳಿಗೀಕೆ      ಅಮೃತವ ಹಂಚೆ ಬಂದ ಮೋಹಿನಿ     ವಂಚಿಸಿ ನೀಡಿದಳು ಮದಿರವಾಹಿನಿ     ಅಮೃತದ ಹಾದಿಯಲಿ ಬಂದ     ಮದಿರೆಯೆ ರಕ್ಕಸಗಂದ      ಮಾನ ಮರ್ಯಾದೆಗಳ ನಾಶ     ಸಂಸಾರ ಸುಖದ ವಿನಾಶ          ತುಂಬಿ ಬರುತಿರೆ ಪಾಪದ ಕೋಶ     ಹೆಂಡತಿ ಮಕ್ಕಳ ಸರ್ವನಾಶ     ಮೋಹಿನಿಯಾಲಿಂಗದೊಳು     ಮತ್ತಿನಲಿ ಮಲಗಿರಲು     ಇವರರಿಯರು ಸುತ್ತಲಿನ ಪರಿವೆ     ಇವರಿಗಾಗದು ಜಗದ ಅರಿವೆ          ಕುಡಿವರು  ಜನವ ಮೆಚ್ಚಿಸೆ ಮೊದಲು     ಕುಡಿತವು ಕುಡಿವನ ಮೆಚ್ಚಿಸಲು     ಕುಡಿವರು ಕುಡಿವರು ಆಗದೆ ನಿಲ್ಲಿಸಲು     ನಂತರ ಬರುವುದೆ ಸಾವಿನ ಮೆಟ್ಟಿಲು     ಧರ್ಮೇಚ ಅರ್ಥೇಚಗಳ ವಿವ...

ಅನಿವಾಸಿ

  ಸಿರಿವಂತರ ಮನೆಯ ಕೆಲಸದಾಕಿ:                      ಹೊಟ್ಟೆ ತುಂಬ ಊಟ                 ಮೈತುಂಬ ಬಟ್ಟೆ                      ಕಣ್ತುಂಬ ನೋಟ                      ಕಿಸೆ ತುಂಬ ಪೌಂಡು                      ಎಲ್ಲವುಂಟು ಇಲ್ಲಿ ನೌಕರಿಯಲ್ಲಿ                      ಸಂಸ್ಕೃತ ಬಿಟ್ಠೋಯ್ತು                      ಕನ್ನಡ ಮರೆತ್ಹೋಯ್ತು   ...

ನಾನು ಮತ್ತು ನಮ್ಮವರ ಸ್ವೀಟಿ

  ನಾನು ಮತ್ತು ನಮ್ಮವರ ಸ್ವೀಟಿ ಹಲವಾರು ವರ್ಷಗಳ ಹಿಂದೆ ನನ್ನ ಕೊಡೆ ಲೇಖನ ಓದಿದ ನೆನಪಿದೆ. ನಾನು ಈ ಲೇಖನ ಬರೆಯುವಾಗ ಇದು ಅದರ ಅನುಕರಣೆಯಾಗಬಾರದು ಎಂಬ ಎಚ್ಚರಿಕೆಯೂ ಇದೆ. ಎಲ್ಲಿ ಇದು “ಅದರಂತೆ” ಎಂದು ಎನಿಸಿಬಿಡುತ್ತದೋ ಎಂಬ ಗಾಬರಿಯಿಂದಲೇ ಇಷ್ಟು ದಿನಗಳವರೆಗೆ ಈ ಲೇಖನ ಬರೆಯಲು ಪ್ರಾರಂಭಿಸದೆ ಇದ್ದೆ. ಆದರೆ ನನ್ನ ಒಂದು ಅನುಭವ ಯಾರದೋ ಅನುಭವವನ್ನು ನೆನಪಿಗೆ ತಂದುಕೊಡುತ್ತದೆ ಎಂದರೆ ಅದಕ್ಕೆ ನಾನು ಹೊಣೆಯಲ್ಲ.ಅಲ್ಲದೆ ಒಬ್ಬಿರಿಗಾದ ತೆರನ ಅನುಭವ ಮತ್ತೊಬ್ಬರಿಗೂ   ಆಗಬಾರದೆಂದೇನೂ ಇಲ್ಲವಲ್ಲ ! ಎಂದೆಲ್ಲ ತರ್ಕಿಸಿ ಈ ಲೇಖನಕ್ಕೆ ಕೈ ಹಾಕುತ್ತಿದ್ದೇನೆ. ನಾನು ಇಂಗ್ಲೆಂಡಿಗೆ ಬಂದು ನೆಲಸಿ ಮೂರು ವರ್ಷಗಳೇ ಉರುಳಿವೆ.ಆದರೆ ಮೊಟ್ಟಮೊದಲ ಬಾರಿ ಇಂಗ್ಲೆಂಡಿನಲ್ಲಿ ಕಾಲಿಟ್ಟ ದಿನದ ನೆನಪು ಇನ್ನೂ ಹಚ್ಚ ಹಸುರಾಗಿದೆ. ತಿಳಿ ಹಸಿರು ಬಣ್ಣದ “ವಾಕ್ಸಾಲ್ ಆಸ್ಟ್ರಾ” ನನ್ನನ್ನು ಎದುರುಗೊಳ್ಳಲು ಬಂದಿತ್ತು.ನನಗಾಗಿ ನನ್ನ ಹೆಸರಲ್ಲೇ ಖರೀದಿಸಿ ತಂದಿದ್ದರು ಮೂರ್ತಿ.ಹೊಚ್ಚಹೊಸ ಕಾರಲ್ಲವಾದರೂ ಹಳೆಯದೇನೂ ಅಲ್ಲ. ಅಚ್ಚುಕಟ್ಟಾದ ಸುಂದರಮೈಮಾಟದ ಆಕರ್ಷಕ ಗಾಡಿ ನನಗೂ ಮೆಚ್ಚಿಗೆಯಾಯಿತು. ’ಮೂರ್ತಿ, ಇದಕ್ಕೆ ಒಂದು ಒಳ್ಳೆ ಹೆಸರಿಡೋಣ ’ ಎಂದೆ. ಉತ್ಸಾಹದಲ್ಲಿ. ಮೂರ್ತಿಯೂ ನನ್ನ ಉತ್ಸಾಹ ಕಂಡು ’ಯಾಕಾಗಬಾರದು?....ಆದರೆ ಯಾವ ಹೆಸರಿಡೋದು?’ಎಂದರು. ಅದಷ್ಟೆ ನನಗೆ ಬೇಕಾಗಿದ್ದದ್ದು. ತಕ್ಷಣ ’ರೋಜಿ’ ಅಂತ ಇಡೋಣ್ವ ? ಅಂದೆ. ’ಛೇ ಛೇ ಏನೇ ಇದು ಇಷ್...