ಸಿಗಲಿಲ್ಲ ಪುರಸೊತ್ತು ಒಂದೊಮ್ಮೆ ಹುಡುಕಿ ದಣಿದಿದ್ದಳು ರಮಾಳ ಹೆಣ್ಮಗಳು ಮನೆಗೆಲಸದ ನಡುವಲ್ಲಿ, ಟಿಫಿನ್, ಕ್ಯಾರಿಯರ್ಗಳ ತಯಾರಿಯಲ್ಲಿ ಗಂಡನ ಉಪಚಾರದಲಿ , ಮಕ್ಕಳ ಹೋಂವರ್ಕ್ ಸಮಯಕ್ಕೆ ಮುಗಿಸುವಲ್ಲಿ ಸಮೀಪದ ಅಂಗಡಿಗಳಲಿ, ಎಲ್ಲಿ ,ಎಲ್ಲಿಯಾದರೂ ದೊರೆತೀತೆ? ಒಮ್ಮೆ ನಿಟ್ಟುಸಿರುಬಿಟ್ಟು ಕುಳಿತಿರಲು ದೊರೆತೀತೆ ? ಎಂದು ಎಲ್ಲೆಲ್ಲಿ ಅಲೆದು ಹುಡುಕಾಡಿದರೂ ಸಿಕ್ಕಿರಲಿಲ್ಲ ಪುರಸೊತ್ತು , ಅಂತೂ ಇಂತೂ ಎಡೆಬಿಡದ ಭಗೀರಥ ಪ್ರಯತ್ನದಲಿ ಕಡೆಗೂ ಸಿಕ್ಕಿತ್ತು ಬಹಳಷ್ಟು ಹಂಬಲಿಸಿದ ಆ ಸವಲತ್ತು! ಮಹಿಳೆಯರ ಸ್ವಾತಂತ್ರ್ಯದ ಕೂಗಿನಡಿಯಲ್ಲಿ ಸಮಾನತೆಗೆ ಹೋರಾಡುವ ಸತ್ಯಾಗ್ರಹದ ನಡುವಲ್ಲಿ ಪುರುಷರೊಡನೆ ಪೈಪೋಟಿಮಾಡುವ ಆಕ್ರೋಶದಲ್ಲಿ ತಮಗಾಗಿ ” ಸ್ಪೇಸ್ ” ಹುಡುಕುವ ತರಾತುರಿಯಲ್ಲಿ ! ಅಂದೇ ಬಂದಿತು ಕುತ್ತಿಗೆ! ಗಂಡಸಿನ ಪುರಸೊತ್ತಿಗೆ ಹುಡುಕುವ ಸರದಿ ಬಂದಿತು ಬಡಪಾಯಿ ಗಂಡಸಿಗೆ! ಮಕ್ಕಳನು ಶಾಲೆಗಟ್ಟುವ ಗಡಿಬಿಡಿಯಲ್ಲಿ, ಆಫೀಸಿನಲ್ಲಿ ದುಡಿದು ಸಂಜೆ ಮನೆ ಸೇರುವಲ್ಲಿ. ಒಗೆದ ಬಟ್ಟೆಗಳ ಮಡಿಸಿ ಜೋಡಿಸುವಲ್ಲಿ ಸ್ವಿಂಮ್ಮಿಂಗು , ಕ್ರಿಕೆಟ್ಟು , ಇತ್ಯಾದಿ ಗಳಿಗೆ ಮಕ್ಕಳನೊಯ್ಯುವಲ್ಲಿ ಮಾಡಿದ್ದ ಅಡಿಗೆ ಬಡಿಸುವಲ್ಲಿ . ಪಾತ್ರೆ ತೊಳೆಯುವಲ್ಲಿ. ಕಡೆಗೆ ಮನೆಕಸ ಗುಡಿಸಿ ಒರೆಸುವಲ್ಲಿ! ಸಂದು ಗೊಂದುಗಳಲಿ ಹುಡುಕಿ ದಣಿದದ...