Posts

Showing posts from July, 2021

ಆಸ್ಟ್ರೇಲಿಯಾ ಪ್ರವಾಸ ಕಥನ

  ಆಸ್ಟ್ರೇಲಿಯಾ   ಪ್ರವಾಸ ಕಥನ   ( ಈ ವಿವರಗಳು ಸುಮಾರು 20 ವರ್ಷಕ್ಕೂ ಹಳೆಯದಾಗಿದ್ದು ಇತ್ತೀಚೆಗೆ ಆಗಿರಬಹುದಾದ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ)     ಆಸ್ಟ್ರೇಲಿಯಾಕ್ಕೆ ಇದು ನನ್ನ ಮೊದಲ ಪ್ರಯಾಣವೇನೂ ಅಲ್ಲ. ಕಳೆದ ಡಿಸೆಂಬರ್ ನಲ್ಲಿ ಹೋಗಿ ಆರು ವಾರಗಳು ತಂಗಿದ್ದೆ . ಆದರೆ ಈ ಬಾರಿಯ ಪ್ರಯಾಣ ವಿಶೇವಾಗಿತ್ತು.ಮಗ ಡಿಗ್ರಿ ತೆಗೆದುಕೊಳ್ಳುವ ಸಮಾರಂಭವನ್ನು ನೋಡುವುದು ಸಂಭ್ರಮದ ವಿಷಯವಾಗಿತ್ತು. ಈ ಬಾರಿಯ ಪ್ರಯಾಣದಲ್ಲಿ ಮೂರ್ತಿ ಬೇರೆ ನನ್ನ ಜೊತೆಗಿದ್ದರು . ಪ್ರತಿಬಾರಿಯೂ ಅವರ ಕೆಲಸದ ಒತ್ತಡದಿಂದ ನಾನೊಬ್ಬಳೇ ಹೋಗಿ ಬರುವುದಾಗುತಿತ್ತು.ನಿಜವಾದ ಅರ್ಥದಲ್ಲಿ ಅದು ನಮ್ಮ ಪ್ರವಾಸವೇ ಸರಿ.ಮೇ 6 ನೇ ತಾರಿಖು ಬಹಳ ಕಾತರದಿಂದ ಎದುರು ನೋಡುತ್ತಿದ್ದ ದಿನ. ಆಸ್ಟ್ರೇಲಿಯದಲ್ಲಿ ಎಂ ಎಸ್ ಓದಿದ ನಮ್ಮ ಮಗ   , ಮೇ   ಹತ್ತನೇ ತಾರೀಖು    ಶಾಸ್ತ್ರೋಕ್ತವಾದ ರೀತಿಯಲ್ಲಿ ಪದವಿ ಸ್ವೀಕರಿಸುವವನಿದ್ದ.ಯಾವುದೇ ತಂದೆ ತಾಯಿಗಳ ಜೀವನದ ಮಹತ್ವದ ದಿನಗಳಲ್ಲಿ ಒಂದು. ಆ ಸಮಾರಂಭಕ್ಕೆ ನಾವೂ ಬರಲೇಬೇಕೆಂಬ ಒತ್ತಾಯವೂ ಇದ್ದು ನಮಗೂ ಹೋಗುವ ಆಸೆ ತೀವ್ರವಾಗಿದ್ದುದರಿಂದ ಪ್ರಯಾಣಕ್ಕೆ ಸಿದ್ಧರಾಗಿದ್ದೆವು. 6 ನೇ ತಾರೀಖು ಶನಿವಾರ ಬೆಳಗ್ಗೆ   9:30 ಕ್ಕೆ ಹೊರಡುವ ಸಿಂಗಪೂರ್ ಏರ್ಲೈನ್ಸ್   ಹತ್ತಿ ಆಸ್ಟ್ರೇಲಿಯಾಕ್ಕೆ ಹೊರಟೆವು.ಗೋಳದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರ...

ಜ್ಯಾ-ಮಿತಿ ಜೀವನ

 ಜ್ಯಾ-ಮಿತಿ ಜೀವನ ನಾವು  ಕೇಂದ್ರ  ಬಿಂದುವಿನ ಸುತ್ತ ನಿಶ್ಚಿತ ದೂರ  ತಿರುಗುವ ತ್ರಿಜ್ಯಗಳು ಕೇಂದ್ರವನ್ನೇ ಮುಟ್ಟಲು  ಸೆಣಸುತ್ತಿರುವ ಭ್ರಮರ ಬಿಂದುಗಳು ನಾವು ವ್ರತ್ತದ ಪರಿಧಿಯಲ್ಲೇ ಚಲಿಸುತ್ತ ಚಲಿಸುತ್ತ ಹೇಗೋ ಹತ್ತಿರವಾಗಲು ಯತ್ನಿಸುತ್ತಿರುವ ಮೂರ್ಖರು ನಾವು ಓ ಪ್ರಿಯರೆ ಮುಕ್ತಿಎಂಬ ಬಿಂದು ಕೇಂದ್ರ ತಾಕುವುದು ಅನಿಶ್ಚಿತ ಆದರೂ ಕೇಂದ್ರ ಮುಟ್ಟಲು ಯಾವುದೋ  ಆಕರ್ಷಣೆ ಸೆಳೆತಸೆಳೆತ ಕೊನೆಗೆ ಅಲ್ಲೇ ಗಸ್ತು ಹೊಡೆದು ವೃತ್ತಪರಿಧಿಯಲ್ಲೇ ಸೋಲೊಪ್ಪಿಕೊಳ್ಳುವ ಭೂಪರು ನಾವು, ನಿನ್ನೆಯೂ , ಇಂದೂ ನಾಳೆಯೂ ಮುಟ್ಟಲಾರದ ನಿತ್ಯ ನಿರಾಶೆಯ  ಉರುಳಿಗೆ ಕೊರಳು ಕೊಟ್ಟವರು ನಾವು ಇಲ್ಲಾಸಿಕ್ಕ ಬಿಂದುವನ್ನೇ ಕೇಂದ್ರವೆಂದು ಭ್ರಮಿಸಿ ತಬ್ಬುವವರು  ನಾವು ಡಾ ಸತ್ಯವತಿ ಮೂರ್ತಿ  ಉದಯವಾಣಿ ದೇಸಿಸ್ವರದಲ್ಲಿ 23-01-2021 ರಂದು ಪ್ರಕಟವಾಗಿದೆ

ಲಂಡನ್ ಸೇತುವೆಯ ಮೇಲಿಂದ

  ಲಂಡನ್ ಸೇತುವೆಯ ಮೇಲಿಂದ      ಇದಕಿಂತ ಸುಂದರವು ಕಾಣುವಳು ಎಂತು ಭೂತಾಯಿ ಸವಿಯದೆಲೆ ಇದನೆಲ್ಲ ಹೋಗುವನು ಕುರುಡನೋ ? ಅರಸಿಕನೋ ? ಹೃದಯ ತಟ್ಟುವ ಅತ್ಯಪೂರ್ವ   ಬೆಳಗಿನ ಸೌಂದರ್ಯ ರಾತ್ರಿ ಕಣ್ಣ ನು ಸೀಳ್ವ ಬೆಳಕಿನ ಕಿರಣಗಳ ಪ್ರಭೆಯಲ್ಲಿ   ಸೆರಗ ಹೊದ್ದು ಮೌನದಲಿ ನಿಂತಿರಲು ಲಂಡನ್ ವನಿತೆ ಗುಡಿ ಚರ್ಚು ಮಸೀದಿ ಹಡಗುಗಳು ಬಯಲಲ್ಲಿ ಮೈಚಾಚಿ ಆಗಸದಾ ಮೌನಕ್ಕೆ ಮನಸೋತು ನಿರುಕಿಸಿಹವು ಚೆಲ್ಲಿಹವು ಹೊಗೆರಹಿತ ಬೆಳಕಿನಾ ಕಿರಣವನೆಲ್ಲೆಡೆಯು   ಈ ಹಿಂದೆಂದು ಕಾಣಲಿಲ್ಲ ಈ ಬೆಡಗಿನಾ ರವಿಕಿರಣ ಬಂಡೆ ಬೆಟ್ಟಗಳಂತೆ ನಗರವನೂ ಮುದ್ದಿಡುವ ವೈಭವವ ಮೌನದಲಿ ತೆವಳುತಿಹ ಥೇಮ್ಸ್ ನದಿಯ ಪಯಣ ಬೆಳಗಿನ ಸವಿನಿದ್ದೆಯಲಿ ಮುಳುಗಿಹವು ಮನೆಗಳವು   ಸ್ಥಗಿತವಾಗಿದೆ ಇಲ್ಲಿ ಆಸ್ಫೋಟನೆಯನ್ನಡಗಿಸಿದ ದೈತ್ಯ ಹೃದಯ ಮೂಕಸಾಕ್ಷಿಯಾಗಿ ನಿಂತಿದೆ ಮೌನದಲಿ ಇಲ್ಲಿ ಬೃಹತ್   ಲಂಡನ್ ನಗರ   ಡಾ ಸತ್ಯವತಿ ಮೂರ್ತಿ      ಮೂಲ: ವಿಲಿಯಂ   ವರ್ಡ್ಸ್ವರ್ತ್ ನ ಅಪಾನ್ ದಿ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ’ 12-06-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ  

ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು

  ಯಗಾದಿ ಬರುತ್ತೆ ಬರುತ್ತೆ ಬಂತು --- ಓಡಿಹೋಯಿತು   ನಾಳೆ ಯುಗಾದಿ ಹಬ್ಬ. ಸಂಭ್ರಮವೋ ಸಂಭ್ರಮ. ಕೆಲಸದಿಂದ ನೇರವಾಗಿ ಮಾರ್ಕೆಟ್ಗೆ ಹೋಗಿ ಬೇಕಾದ ಪದಾರ್ಥಗಳನ್ನೆಲ್ಲ ತಂದಾಯಿತು. "ಬೆಳಗ್ಗೆ ಎಲ್ಲರೂ ಬೇಗನೆ ಏಳಬೇಕು. ಎದ್ದು ತಲೆಗೆ ಸ್ನಾನ ಮಾಡಿ , ಪೂಜೆಗೆ ಬರಬೇಕು.ಅಪ್ಪ , ಅಜ್ಜ ಇಬ್ರು ಪೂಜೆ ಮಾಡಿದಮೇಲೆ ಮಂಗಳಾರತಿ ತೆಗೆದುಕೊಂಡು ಬೇವುಬೆಲ್ಲ ತಿನ್ನಬೇಕು. ತಿಳೀತಾ ? " ಮನೆಯಲ್ಲಿ ಹಿಂದಿನ ರಾತ್ರಿಯೇ ಎಲ್ಲರಿಗೂ ತಾಕೀತು ಮಾಡಿಯಾಗಿತ್ತು. ಶೆಲ್ಫಿನ   ಹಿಂದಕ್ಕೆ   ಹೋಗಿ ಕುಳಿತಿದ್ದ ’ಯುಗ ಯುಗಾದಿ ಕಳೆದರೂ’ ಹಾಡಿನ ಧ್ವನಿ ಮುದ್ರಣ ವನ್ನು ಹುಡುಕಿ ತೆಗೆದಿಟ್ಟಾಯಿತು . ಬೆಳಗ್ಗೆ6 ಗಂಟೆಗೆ ಅಲಾರಂ ಹೊಡೆದ   ಕೂಡಲೆ ಎದ್ದು ಯುಗಾದಿ ಹಾಡನ್ನು ಹಚ್ಚಿ ,   ಪೊರಕೆಯಿಂದ ಅಂಗಳವನ್ನು ಗುಡಿಸಿ ಮನೆಮುಂದೆ ಅಂದವಾದ ರಂಗೋಲಿಯನ್ನು ಬಿಡಿಸಿ ನನ್ನ ಕಲಾಕೃತಿಗೆ ನಾನೇ ಮೆಚ್ಚಿಕೊಂಡು , ಒಳಗೆ ಬಂದು ದೇವರ ಪೂಜೆಗೆ ಅಣಿಮಾಡಿಯಾಯಿತು.ಅಷ್ಟರಲ್ಲಿ ಫೋನ್ನಲ್ಲಿ ಮೆಸ್ಸೇಜ್ ಬಂದ ಶಬ್ದವಾಯಿತು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುತ್ತ ಸಂದೇಶಗಳನ್ನು ಕಳುಹಿಸುತ್ತಿರುವ ಮಿತ್ರರು ಬಂಧುಗಳಿಗೆಲ್ಲ ನಾನೂ ಸಂದೇಶ ಕಳುಹಿಸಿದ್ದಾಯಿತು.(ಇಂಡಿಯದಲ್ಲಾಗಲೇ ಮಧ್ಯಾಹ್ನ ಅಲ್ಲವೆ ?) ಆ ವೇಳೆಗೆ ಗಂಟೆ 9 ಹೊಡೆಯಿತು. ಅಷ್ಟು ಹೇಳಿದ್ದರೂ ಇನ್ನೂ ರಜೆಯ ಗುಂಗಿನಲ್ಲಿ ಮಲಗೇ ಇದ್ದ ಮಕ್ಕಳನ್ನು   ಬಲವಂತವಾಗಿ ಏಳಿಸಿ ಸ್ನಾನಕ್ಕೆ ...

ಅಮರ ಪ್ರೇಮ

  ಅಮರ ಪ್ರೇಮ   ಮದುವೆಯೆಂಬುದೊಂದಾತ್ಮಗಳಮಿಲನವದಕೇ ಕೆದೇಹಗಳ ಮಿಲನಕ್ಕೆ ಬಂಧನ ? ತೊಡರೇಕೆ ? ಪ್ರೇಮ ಪ್ರೇಮವೆ ಸಲ್ಲ ಮಣಿದಿರಲು ಪರಿಸರಕೆ ಪ್ರೇಯಸಿಯಪ್ರೇಮರಾಗದಪಶ್ರುತಿಮಿಡಿತಕೆ.     ಚಿರವಾದ ಬೆಳಕಿನ ಮನೆಯದುವೆ ದಾರಿಗುಸುರು ಬಿರುಗಾಳಿಗಂಜದೆಲೆ ಅಳುಕದೆಲೆ ನಿಲ್ವುದದು ದಡಮುಟ್ಟೆತೊಳಲಾಡ್ವನಾವಿಕರಕಲ್ಪತರು ಎತ್ತರದಿ ನಿಂದಿಹ ಧ್ರುವತಾರೆ ನಿತ್ಯವದು     ಅಧರವದರಮೃತವಕಳೆದುಕೆನ್ನೆ ರಂಗಳಿಸಿ ನಿಂದರೂ ಕಾಲನ ಹೊಡೆತಕೆ ಸಿಗದು ಪ್ರೇಮ ವರುಷಗಳುರುಳಿದರೂ ಮಾಸದದರ ರಂಗಳಿಸಿ ಮರಣದಂಗಳದಲೂ ಮಿನುಗುವುದು ನಿಜಪ್ರೇಮ   ಇದಸತ್ಯವೆನಿಸಿದರೆ ನಿಲಿಸುವೆನು ಬರೆವುದನು ಇರಲಿಲ್ಲ ಇಂಥ ಪ್ರೇಮಿಗಳೆಂದು ನಂಬುವೆನು.   ಈ ಕವನದ ಮೂಲ Let me not to the marriage of true minds  BY  WILLIAM SHAKESPEARE   ಡಾ ಸತ್ಯವತಿ ಮೂರ್ತಿ  26-06-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ ಕುವೆಂಪು ಪ್ರಾಧಿಕಾರದಿಂದ ಪ್ರಕಟವಾಗುವ ಚಾತುರ್ಮಾಸಿಕ ಪತ್ರಿಕೆ೩ ರಲ್ಲೂ ಪ್ರಕಟವಾಗಿದೆ

ಅಪ್ಪನಿಗೆ

  ಅಪ್ಪನಿಗೆ     ಅಪ್ಪ ನಿನ್ನನ್ನು ನೋಡಿದಾಗಲೆಲ್ಲ ಅಂದುಕೊಳ್ಳುತ್ತೇನೆ ಎಷ್ಟು ಕಠಿಣ ನೀ ಕಲ್ಲೆದೆಯವನು!   ನಡೆಯಲು ಬರದೆ ನಾ ಅಡಿಗಡಿಗೆ ಬೀಳುತಿದ್ದಾಗ ಕಣ್ಣೀರು ಕೆನ್ನೆಮೇಲುರುಳಿ ಕೆಳಗಿಳಿಯುವಾಗ ಅಮ್ಮ ಬಂದು ನನ್ನನೆತ್ತಿ ಮುದ್ದಾಡಿ ರಮಿಸಿರಲು ಮಡಿಲಿಂದ ನನ್ನ ಬಿಡಿಸಿಬಿಟ್ಟು ಕೆಳಗಿಟ್ಟು ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು !   ಶಾಲೆಯಲ್ಲಿ ಮೊದಲದಿನ ಅಪರಿಚಿತರೆಲ್ಲ ಅಮ್ಮನೂ ಬಳಿಯಲ್ಲಿಲ್ಲ , ನನ್ನನರಿತವರಾರೂ ಇಲ್ಲ ಒಬ್ಬಂಟಿ ನಾನು ಹೆದರಿಕೆಯಲಿ ಅಳಲು ಮುದ್ದಿಸಲಿಲ್ಲ , ಸಂತೈಸಲಿಲ್ಲ ಬದಲಾಗಿ ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು!   ಆಟವಾಡುವ ನಡುವೆ ನಾ ಬಿದ್ದು ಪೆಟ್ಟ ತಿಂದು ಮಂಡಿ ತರಚಿರಲು , ಸಹಿಸ ಲಾ ರದ ನೋವಿರಲು ಗೆಳೆಯರೆನ್ನನು ಛೇಡಿಸುತ್ತ ನಗುತ್ತಿದ್ದರೆ ಬಳಿಬಂದು ನೀವುತಲಿ ಮಂಡಿಯನು ನೀಹೇಳುತ್ತಿದ್ದೆ , ಗಟ್ಟಿಯಾಗಬೇಕು ನೀನು!     ಕ್ಲಾಸಿನಲಿ ಟೀಚರಿಂದ ಏಟು ತಿಂದುದನು   ಅಮ್ಮನಿಗೆ ಹೇಳಿ ಅಳುತಿದ್ದರೆ ಅವಮಾನದಲಿ ಎಲ್ಲಿಂದಲೋ ಬಂದು ಬಳಿ ನಿಲ್ಲುತ್ತಿದ್ದೆ   ಬಂದುದನು ಎದುರಿಸಬೇಕು , ಅಳದಿರಬೇಕು ನೀ ಹೇಳುತ್ತಿದ್ದೆ , ಗಟ್ಟಿಯಾಗಬೇಕು ನೀನು!   ಎಲ್ಲದಕು ಯಾವುದಕು ಒಂದೆ ಮಂತ್ರವು ನಿನ್ನದು ನೀ ಗಟ್ಟಿಯಾಗಬೇಕು , ನೀ ಗಟ್ಟಿಯಾಗಬೇಕು. ಈಗ ನನ್ನದೊಂದೇ ಮಾತ...

ಆಶಾವಾದ

  ಆಶಾವಾದ ಜೀವನ ತೋಟದ ಉಸ್ತುವಾರಿಯ ಬಂಟರು ನಾವು ದೊರೆತಿಹುದೆಮಗೆ ನಾನಾತೆರನ ಕಾಳುಗಳ ಬಟ್ಟಲು ನಮ್ಮದೇ ತೋಟವಿದು ನಮ್ಮಂತೆ ಬೆಳೆಯಬಹುದು ಜೀವನವ ಸೊಗಯಿಸಲು ನಮ್ಮದೇ ಅಳತೆಗೋಲು ಶಿಶಿರ ಋತುಬರಬಹುದು ಅಂಜಿಕೆಯ ತರಬಹುದು ನೆನಪಿರಲಿ ಮುಂದಿಹುದು ವಸಂತ, ಶ್ರಮಿಸುವುದ ಬಿಡದಿರು ತಾಳಬೇಕು ತಾಳಿಗೆಲ್ಲಬೇಕು , ಪಡೆಯಬೇಕು ಬಯಸಿದುದು ಖಿನ್ನನಾಗದೆ ’ಸೋವಾಟ್?’ಎನುತ ನಗುತ ಮುನ್ನುಗ್ಗುತಿರು ಪ್ರತಿಕೂಲದಲಿ ನೆನೆ ವಾಲ್ಮೀಕಿಯ ’ಮರಾ’ ದಲ್ಲಿದ್ದ’ರಾಮ’ ನೆಗೆತದಲಿ ನುರಿತವಗೆ ಉಂಟು ತಡಕೆ ಪಂದ್ಯದ ಜಯ ಬಾಗಿಲೊಂದು ಮುಚ್ಚಿದೆಅಷ್ಟೆ, ತೆರೆದಿರುವುವಸೀಮ ನೀರ ಕೊರತೆಯಲಿ ನೆಲವಗೆದು ತೆಗೆವಾ ತೋಳ್ಬಲಕೆ ಜಯ ಹುಟ್ಟದಿದ್ದರೇನು ಅಮಿತ ಭಾಗ್ಯವ ಹೊತ್ತು ಆತ್ಮನಂಬಿಕೆಯಿರೆ ಒಣಮರವು ಚಿಗುರುವುದು ಸೋತರೇನು ತರಬಹುದದೇ! ಗೆಲುವಿನ ರಾಗದ ಸೊತ್ತು  ನಾಗರ ಹೆಡೆಯಲೂ ಮಣಿಯ ಕಾಣ್ವ ಶಕ್ತಿ ಮೂಡುವುದು ನಿರಾಶೆಯನು ಬದಿಗಿಡು, ಆಶಾವಾದಿಯಾಗಿರು ಸದಾ ಕಮರಿಯಲಿ ಬಿದ್ದರೂ ಮೆಲೇರು ಭರವಸೆಯ ಹಗ್ಗಹಿಡಿದು ಧೈರ್ಯದಲಿ ಮುನ್ನುಗ್ಗು ,ಹೊಸ ಹಾದಿ, ಬೆಳಕು ನಿನಾದ  ನೂರಾರು ಕವಲುಗಳು , ಒಂದೊಂದೂ ಉಜ್ವಲವಹುದು ನೆಲಕಂಟಿದ ಮರವಾಗದಿರು, ಅಸಹಾಯತೆಗೆ ಶರಣಾಗದಿರು ಓಡಲು ಕಾಲುಗಳಿಗೆ ಬಲವುಂಟು, ರೆಕ್ಕೆಗಳುಂಟು ಹಾರಲು ಹುಟ್ಟುಸ್ವತಂತ್ರ ನೀನು, ಹಿಡಿದಿಡುವ ಬಂಧನಕೆ ಬೆದರದಿರು ಜಯದೇವಿಯಪ್ಪುವಳು ಸಾಧನೆಯ ಹಾದಿಯಲಿ ನೀನಿರಲು ಡಾ ಸತ್ಯವತಿ ಮೂರ್ತಿ ಈ ಕವನ  ಡಾ ಜೀ.ವಿ ಕುಲ...