ಜ್ಯಾ-ಮಿತಿ ಜೀವನ

 ಜ್ಯಾ-ಮಿತಿ ಜೀವನ


ನಾವು 

ಕೇಂದ್ರ  ಬಿಂದುವಿನ ಸುತ್ತ

ನಿಶ್ಚಿತ ದೂರ 

ತಿರುಗುವ ತ್ರಿಜ್ಯಗಳು

ಕೇಂದ್ರವನ್ನೇ ಮುಟ್ಟಲು 

ಸೆಣಸುತ್ತಿರುವ ಭ್ರಮರ ಬಿಂದುಗಳು

ನಾವು

ವ್ರತ್ತದ ಪರಿಧಿಯಲ್ಲೇ ಚಲಿಸುತ್ತ ಚಲಿಸುತ್ತ

ಹೇಗೋ ಹತ್ತಿರವಾಗಲು ಯತ್ನಿಸುತ್ತಿರುವ

ಮೂರ್ಖರು ನಾವು

ಓ ಪ್ರಿಯರೆ ಮುಕ್ತಿಎಂಬ ಬಿಂದು ಕೇಂದ್ರ

ತಾಕುವುದು ಅನಿಶ್ಚಿತ

ಆದರೂ ಕೇಂದ್ರ ಮುಟ್ಟಲು ಯಾವುದೋ 

ಆಕರ್ಷಣೆ ಸೆಳೆತಸೆಳೆತ

ಕೊನೆಗೆ ಅಲ್ಲೇ ಗಸ್ತು ಹೊಡೆದು

ವೃತ್ತಪರಿಧಿಯಲ್ಲೇ

ಸೋಲೊಪ್ಪಿಕೊಳ್ಳುವ ಭೂಪರು ನಾವು,

ನಿನ್ನೆಯೂ , ಇಂದೂ ನಾಳೆಯೂ

ಮುಟ್ಟಲಾರದ ನಿತ್ಯ ನಿರಾಶೆಯ 

ಉರುಳಿಗೆ

ಕೊರಳು ಕೊಟ್ಟವರು ನಾವು

ಇಲ್ಲಾಸಿಕ್ಕ ಬಿಂದುವನ್ನೇ ಕೇಂದ್ರವೆಂದು ಭ್ರಮಿಸಿ ತಬ್ಬುವವರು 

ನಾವು



ಡಾ ಸತ್ಯವತಿ ಮೂರ್ತಿ


 ಉದಯವಾಣಿ ದೇಸಿಸ್ವರದಲ್ಲಿ 23-01-2021 ರಂದು ಪ್ರಕಟವಾಗಿದೆ


Comments

Popular posts from this blog

ದೇವಾ ಕರುಣೆಯ ನು ತೋರ ಲಾರೆಯ

ಕವಾಲಿ

ಹೊಂದಾಣಿಕೆ