ಲಂಡನ್ ಸೇತುವೆಯ ಮೇಲಿಂದ

 

ಲಂಡನ್ ಸೇತುವೆಯ ಮೇಲಿಂದ  

 

ಇದಕಿಂತ ಸುಂದರವು ಕಾಣುವಳು ಎಂತು ಭೂತಾಯಿ

ಸವಿಯದೆಲೆ ಇದನೆಲ್ಲ ಹೋಗುವನು ಕುರುಡನೋ ?ಅರಸಿಕನೋ?

ಹೃದಯ ತಟ್ಟುವ ಅತ್ಯಪೂರ್ವ  ಬೆಳಗಿನ ಸೌಂದರ್ಯ

ರಾತ್ರಿ ಕಣ್ಣನು ಸೀಳ್ವ ಬೆಳಕಿನ ಕಿರಣಗಳ ಪ್ರಭೆಯಲ್ಲಿ

 

ಸೆರಗ ಹೊದ್ದು ಮೌನದಲಿ ನಿಂತಿರಲು ಲಂಡನ್ ವನಿತೆ

ಗುಡಿ ಚರ್ಚು ಮಸೀದಿ ಹಡಗುಗಳು ಬಯಲಲ್ಲಿ ಮೈಚಾಚಿ

ಆಗಸದಾ ಮೌನಕ್ಕೆ ಮನಸೋತು ನಿರುಕಿಸಿಹವು

ಚೆಲ್ಲಿಹವು ಹೊಗೆರಹಿತ ಬೆಳಕಿನಾ ಕಿರಣವನೆಲ್ಲೆಡೆಯು

 

ಹಿಂದೆಂದು ಕಾಣಲಿಲ್ಲ ಬೆಡಗಿನಾ ರವಿಕಿರಣ

ಬಂಡೆ ಬೆಟ್ಟಗಳಂತೆ ನಗರವನೂ ಮುದ್ದಿಡುವ ವೈಭವವ

ಮೌನದಲಿ ತೆವಳುತಿಹ ಥೇಮ್ಸ್ ನದಿಯ ಪಯಣ

ಬೆಳಗಿನ ಸವಿನಿದ್ದೆಯಲಿ ಮುಳುಗಿಹವು ಮನೆಗಳವು

 

ಸ್ಥಗಿತವಾಗಿದೆ ಇಲ್ಲಿ ಆಸ್ಫೋಟನೆಯನ್ನಡಗಿಸಿದ ದೈತ್ಯ ಹೃದಯ

ಮೂಕಸಾಕ್ಷಿಯಾಗಿ ನಿಂತಿದೆ ಮೌನದಲಿ ಇಲ್ಲಿ ಬೃಹತ್  ಲಂಡನ್ ನಗರ

 

ಡಾ ಸತ್ಯವತಿ ಮೂರ್ತಿ

     ಮೂಲ: ವಿಲಿಯಂ   ವರ್ಡ್ಸ್ವರ್ತ್ ನ ಅಪಾನ್ ದಿ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ’

12-06-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ


 

Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ