ಸತ್ಯನಾರಾಯಣ ಕಥೆ
ಓಂ ಜಯ ಸತ್ಯನಾರಾಯಣ
ಸ್ವಾಮಿ ಸತ್ಯನಾರಾಯಣ
ಮುನಿಜನ ವಂದಿತ ಚರಣ(2)
ಆಶ್ರಿತ ಜನ ಶರಣ
ಭಕ್ತಿಗೆ ಮೆಚ್ಚಿ ಬ್ರಾಹ್ಮಣಗೆ
ಐಶ್ವರ್ಯವನಿತ್ತೆ ಸ್ವಾಮಿ
ಕಟ್ಟಿಗೆ ಹೊರುವಗೆ ಕರುಣಿಸಿ(2)
ಬಡತನವ ಕಳೆದೆ
ಭಜಿಸಿರೆ ನಿನ್ನ ಉಲ್ಕಮುಖ
ವಣಿಜನು ತಾನೋಡಿ(ಸ್ವಾಮಿ)
ಅರ್ಚಿಸಿ ನಿನ್ನನು ಪಡೆದನು(2)
ಮುದ್ದಿನ ಕುವರಿಯನು
ವರದಲಿ ಹಿಗ್ಗಿದ ವಣಿಜನು
ವ್ರತವನು ಮರೆತನು(ಸ್ವಾಮಿ)
ಪತ್ನಿಯು ನೆನಪನು ನೀಡಲು(2)
ಮದುವೆಯಾಗಲೆಂದ
ಬಂದನು ಅಳಿಯನು ಮನೆಗೆ
ಸ್ಮರಣೆಗೆ ಬರಲಿಲ್ಲ(ಸ್ವಾಮಿ)
ಹೊರಟನು ವಣಿಜಕೆ ದೂರಕೆ(2)
ನಿಂದೆಗೆ ಗುರಿಯಾದ
ಲೀಲಾವತಿಯು ಪೂಜಿಸಲು
ಕರುಣೆಯ ತೋರಿದೆ(ಸ್ವಾಮಿ ಹಡಗನು ಉಳಿಸಿದೆ)
ಪ್ರಸಾದ ತಿನ್ನದ ಕಲಾವತಿಗೆ(2)
ಭ್ರಮೆಯನು ತೋರಿದೆ
ಅರಿತಳು ತಪ್ಪನು ಕಲಾವತಿ
ಕ್ಷಮೆಯನು ಯಾಚಿಸಲು( ಸ್ವಾಮಿ ಪ್ರಸಾದ ಸೇವಿಸಲು)
ಮಾಯೆಯ ಮುರಿದೆ ಭರದೆ(2)
ಸುಖವನು ತಂದಿತ್ತೆ
ಗೋವಳ ಪೂಜೆಯು ಬೇಡೆಂದು
ಪ್ರಸಾದ ತಿನಲಿಲ್ಲ(ಅಂಗಧ್ವಜ)
ಕ್ಷಣದಲಿ ನಾಶವ ಕಂಡನು(2)
ಅರಿತನು ತಪ್ಪನು
ಸತ್ಯನಾರಯಣ ನೀನೆ
ಸತ್ಯವ್ರತ ನೀನೆ(ಸ್ವಾಮಿ)
ಸತ್ಯವತಿ ಕೃತ ಭಜನೆಗೆ ಮೆಚ್ಚಿ(2)
ಸಲಹೋ ಜಗವನ್ನೆ
ಸತ್ಯವತಿ ಮೂರ್ತಿ
ಇದರ ವಿಡಿಯೋ -ಶ್ರೀಮತಿ ದೀಪಿಕ ಗೋಪಾಲ ಕೃಷ್ಣ ಅವರ ಧ್ವನಿಯಲ್ಲಿ ಕೆ.ವೈ. ಮಂತ್ರಗಳು ವಾಹಿನಿಯ ಮೂಲಕ ಬಿಡುಗಡೆಗೊಂಡು ಜನಪ್ರಿಯವಾಗಿದೆ.
Comments
Post a Comment