ಗಣಪತಿ ಹಬ್ಬ
ಗಣಪತಿ ಹಬ್ಬ ಬಂದಿತು
ಬಂದಿತು ಬಂದಿತು ಗಣಪತಿ ಹಬ್ಬವಿನಾಯಕನ ಪೂಜಿಪ ಹಬ್ಬಪಾರ್ವತಿ ಪುತ್ರ ಗಣಪನ ಹಬ್ಬಕಾಯಿ ಕಡುಬು ಮೋದಕದ್ಹಬ್ಬಅಂಗಡಿಗಳಲಿ ಗಣಪತಿ ಮೇಳಜನಗಳ ಜಾತ್ರೆಯ ಮೀರಿಸೋ ಮೇಳತಾತನು ತಂದೆಯು ಮೊಮ್ಮಗ ಮರಿಮಗಅಣ್ಣ ತಮ್ಮ ಪುಟಾಣಿ ಸಿರಿಮೊಗಗಣಪರೆಲ್ಲರು ಸೇರಿಹರಲ್ಲಿಒಯ್ಯುವ ಭಕ್ತರ ಕಾಯುತಲಿಬಲಮುರಿ ಎಡಮುರಿ ಚಿಕ್ಕದು ದೊಡ್ಡದುಹಸಿರು ಕೆಂಪು ಹಳದಿ ನೀಲಿದುದಪ್ಪನೆ ಹೊಟ್ಟೆಯ ಮೋದಕ ಹಿಡಿದನಾಲ್ಕು ಕೈಗಳ ಪಂಚ ಮುಖದಕಿರೀಟ ಹೊತ್ತಿಹ ಚಕ್ರಾಂಕಿತದಏಕದಂತದ ಹಾವು ಸುತ್ತಿದಒಂದೇ ಎರಡೇ ಸಾವಿರದಿರವುವರ್ಣಿಸಲೆನಗದು ಅಸದಳವುಗಣಪತಿಕೊಳ್ಳಲು ಹೋದೆನು ನಾನುನೋಡು ನೋಡುತ ಗಣಪತಿ ಸಾಲನುಪಿಸು ಪಿಸು ಗುಸು ಗುಸು ಮಾತದು ಕೇಳಿತುಗಣಪನೊಬ್ಬನು ನುಡಿವುದು ಕೇಳಿತುಆಲಿಸುತಲ್ಲಿಯೆ ನಿಂತೆನು ನಾನುಕೇಳಲು ಅವರೇನೆನುವರೋ ಅದನುನುಡಿದನು ಹಿರಿಯಗೆ ಪುಟಾಣಿ ಗಣಪತಿನೋಡಿದಿರೇನು ಮನುಜರ ರೀತಿಅಂಗಡಿಯಿಂದಲಿ ಎಮ್ಮನು ಕೊಳ್ವರುಹೂವು ಹಣ್ಣು ಮೋದಕ ಕೊಡುವರುಧೂಪ ದೀಪ ನೈವೇದ್ಯ ತೋರ್ವರುಮಂಗಳಾರತಿ ಬೆಳಕನೀವರುಕಡೆಗೆ.....ಕಣ್ಣನು ಕೊರೆಯುವ ಕತ್ತಲ ರಾತ್ರಿಗೆಮೈ ಕೈ ಕೊರೆಯುವ ತಣ್ಣನೆ ನೀರಿಗೆಬೇಡಿದ ಕೈಗಳೆ ನಮ್ಮನು ಹಿಡಿದುನಿರ್ದಾಕ್ಷಿಣ್ಯದಿ ಮುಳುಗಿಸಿಬಿಡುವುದುಹಿರಿಯನು ನುಡಿದನು ಕಿರಿಯಗೆ ಕೂಡಲೆಮರುಗುವೆಯೇತಕೆ ನಿಜವರಿಯದೆಲೆಕಣ್ಣು ಬಾಯ್ಗಳಲಷ್ಟೇ ಉಳಿಸಿಮನದಿಂದಾಚೆಗೆ ನಮ್ಮನು ಓಡಿಸಿಕಾಯಿ ಕಪ್ಪುರ ಲಂಚವ ಕೊಟ್ಟರುಬುದ್ಧಿ ಮನಸನು ತಿದ್ದದೆ ಬಿಟ್ಟರುಇದುವೆ ಲೋಕದ ರೀತಿಯು ಪುತ್ರಅದಕೇ ನಾವವರಿಗೆ ಬರಿ ಕಲ್ಪನೆ... ಚಿತ್ರಕೇಳುತ ಕೇಳುತ ಗಣಪತಿ ಮಾತನುಅರಿತೆನು ನಾನು ದೇವನ ನೋವನುನಾಚಿಕೆಯಿಂದಲಿ ಮನವದು ಕುಗ್ಗಿತುಯಾಂತ್ರಿಕ ಪೂಜೆಯ ಸಡಗರ ತಗ್ಗಿತುಭಕ್ತಿಯ ಪೂಜೆಗೆ ಮನವದು ಒಲಿಯಿತುದೇವನ ಕಾಣುವ ಹಂಬಲ ಬಲಿಯಿತು.
ಈ ಕವನ ೦೪-೦೯-೨೦೨೧ ರಂದು ಉದಯವಾಣಿಯಲ್ಲಿ ಪ್ರಕಟವಾಗಿದೆ.
Comments
Post a Comment