ಜ್ಯಾಮಿತಿ ಜೀವನ

 

ನಾವು
ಕೇಂದ್ರ  ಬಿಂದುವಿನ ಸುತ್ತ
ನಿಶ್ಚಿತ ದೂರ
ತಿರುಗುವ ತ್ರಿಜ್ಯಗಳು
ಕೇಂದ್ರವನ್ನೇ ಮುಟ್ಟಲು
ಸೆಣಸುತ್ತಿರುವ ಭ್ರಮರ ಬಿಂದುಗಳು
ನಾವು
ವ್ರತ್ತದ ಪರಿಧಿಯಲ್ಲೇ ಚಲಿಸುತ್ತ ಚಲಿಸುತ್ತ
ಹೇಗೋ ಹತ್ತಿರವಾಗಲು ಯತ್ನಿಸುತ್ತಿರುವ
ಮೂರ್ಖರು ನಾವು
ಓ ಪ್ರಿಯರೆ ಮುಕ್ತಿಎಂಬ ಬಿಂದು ಕೇಂದ್ರ
ತಾಕುವುದು ಅನಿಶ್ಚಿತ
ಆದರೂಕೇಮ್ದ್ರ ಮುಟ್ಟಲು ಯಾವುದೋ
ಆಕರ್ಷಣೆ ಸೆಳೆತಸೆಳೆತ
ಕೊನೆಗೆ ಅಲ್ಲೇ ಗಸ್ತು ಹೊಡೆದು
ಸೋಲೊಪ್ಪಿಕೊಳ್ಳುವ ಭೂಪರು ನಾವು
ನಿನ್ನೆಯೂ , ಇಂದೂ ನಾಳೆಯೂ
ಮುಟ್ಟಲಾರದ ನಿತ್ಯ ನಿರಾಶೆಯ
ಉರುಳಿಗೆ
ಕೊರಳು ಕೊಟ್ಟವರು ನಾವು
ಇಲ್ಲಾಸಿಕ್ಕ ಬಿಂದುವನ್ನೇ ಕೇಂದ್ರವೆಂದು ಭ್ರಮಿಸಿ ತಬ್ಬುವವರು
ನಾವು
ಉದಯವಾಣಿ - ಪತ್ರಿಕೆಯಲ್ಲಿ ಪ್ರಕಟವಾಗಿದೆ.


Comments

Popular posts from this blog

ಕವಾಲಿ

ಏಳು ಪಾವನ ಚರಣ /ಏಳು ಪರಮಾ ಕರುಣ

ದೇವಾ ಕರುಣೆಯ ನು ತೋರ ಲಾರೆಯ