ಸಕಲ...
ಸಕಲ ಗಣಗಳಿಗೊಡೆಯ ಏಕದಂತ
ಕರುಣಾಳುಬೆನಕ ಶ್ರೀವರದಾಯಕ
ವಿಘ್ನವಿನಾಶಕ ಸಿದ್ಧಿದಾಯಕ
ಪಾರ್ವತೀಸುತ ನಮಸ್ತೆ ನಮಃ
ಗೀರ್ವಾಣಿ ಸಕಲ ಕಲಾರೂಪಿಣಿ
ಶರ್ವಾಣಿ ವೀಣಾಪಾಣಿ
ಬ್ರಹ್ಮನ ರಾಣಿ ನೆಲೆಸಿ ನಾಲಗೆಯಲಿ
ಹರಸು ಸರಸ್ವತಿಯೆ ನಿನಗೆ ನಮಸ್ತೆ ನಮಃ
ಗುರುವರ್ಯರೆ ಸಕಲಹಿರಿಯರೆ
ಲೋಪದೋಷಗಳನು ಮನ್ನಿಸಿ
ಹಂಸಕ್ಷೀರ ನ್ಯಾಯದ ತೆರದೊಳು
ಹರಸಿರಮ್ಮನು ಮುದದಲಿ
Comments
Post a Comment