Posts

Showing posts from November, 2020

ಓಂ ದತ್ತ

 ಓಂ ದತ್ತ ಓಂದತ್ತ ಪರತ್ಪರಾ ದತ್ತ ಓಂಕಾರ ದತ್ತ ತವಶರಣಂ ನಮಾಮಿ ದತ್ತ ಸ್ಮರಾಮಿ ದತ್ತ ಪಾಹಿ ಪಾಹಿ ದತ್ತ ತವ ಶರಣಂ ಬ್ರಹ್ಮ ವಿಷ್ಣು ಮಹೇಶ್ವರ ರೂಪ ತ್ರಿಮೂರ್ತ್ಯಾತ್ಮಕ ತವಶರಣಂ ತ್ರಿಮೂರ್ತಿರೂಪ ತ್ರಿಗುಣಾತೀತ ಹೇ ಅತ್ರಿಪುತ್ರ ತವಶರಣಂ ದತ್ತಾತ್ರೇಯ ಓಂ ಶ್ರೀಪಾದ ಯತಿ ಓಂ ನರಸಿಂಹ ಸರಸ್ವತಿ ತವಶರಣಂ  ಭಕ್ತವತ್ಸಲ ಭಕ್ತ ಪರಧೀನ ಗಾಣಗಪುರಧೀಶ ತವಶರಣಂ ಪ್ರತಿ ಸಾಲನ್ನೂ ಎರಡೆರಡು ಬಾರಿ ಉಚ್ಚರಿಸಬೇಕು ಸತ್ಯವತಿ ಮೂರ್ತಿ

ಶರಣು ಬಂದೆನು ನಾನು

 ಶರಣು ಬಂದೆನು ನಾನು  ನಿನ್ನ ಚರಣಕೆ ದೇವ ಅನ್ಯರನು ನಾ ಕಾಣೆ ಕಷ್ಟಗಳ ಪರಿಹರಿಸೋ  /ಪಲ್ಲವಿ                ನಾನು ನನ್ನದು ಎಂಬ ಸ್ವಾರ್ಥದಿಂದಲಿ ನಡೆದು                ನಿನ್ನ ಸ್ಮರಣೆಯನೂ ಮರೆತಿದ್ದೆನಯ್ಯ                ಎಲ್ಲ ಅರಿತಿಹೆನೆಂಬ ಅಹಂಕಾರದಲಿ ಮೆರೆದು                 ಏನನೂ ಅರಿಯದಿಹ ಮೂಢಳಾದೆ ದೇವಾ/1/ ಪತಿಸುತರು ಎನ್ನವರು ಹಿತವನ್ನೆ ಕೋರುವರು  ಒಡಹುಟ್ಟಿದವರಿವರು ಎನ್ನ ಬಾಂಧವರು ಎಂದೆಲ್ಲ ಗಳಹುತಲಿ ಮೆರೆದಿದ್ದೆ ನಾನು  ದಿಟವಾಗಿ ಎನ್ನೊಡೆಯ ನಿನ್ನ ಮರೆತೇನಯ್ಯ/2/                ಮೂಢತನವದು ನನ್ನ ಮುಸುಕಿರಲು ಹೇ ದೇವಾ           ನಿನ್ನ ಮಹಿಮೆಯ ನಾನು ಅರಿಯಲಾರದೆ ಹೋದೆ           ಅಂದು ಆ ರಜಕನಿಗೆ ತಿಳಿವ ನೀಡಿದ ತೆರದಿ           ಬಂದು ನೀ ನನ್ನನ್ನು ಉದ್ಧರಿಸು ಗುರುವೇ/3/ ಅನಸೂಯೆಗೊಲಿದ ತ್ರಿಮೂರ್ತಿಯೂ ನೀನೆ  ಶ್ರೀಪಾದನಾಗಿ ಮೆರೆದ ದತ್ತಮೂರ್ತಿಯು ನೀನೆ ನೀನೆ ...

ನಮ್ಮನೀ ಕಪಾಟು

  ನಮ್ಮನೀ ಕಪಾಟು ನಮ್ಮನೀ ಕಪಟಿನೊಳ್ಗ ಸೀರೆಗಳ್ನಗ್ತಾವ? ಅವ್ರೇನ್ ಹೇಳ್ತಾರಂತ ನಿತ್ಕೊಂಡ್ವಸಿ ಕೇಳಾಂವ? ಭಾಳದಿನಗಳ್ಮೇಲೆ ಸಿಕ್ಕದ ನಮಗೊಂದಿಷ್ಟಾರಾಮ ಸದ್ಯ ತಪ್ತುಮೈಗಂಟಿಕೊಂಡಿರೋ ವ್ಯಾಯಾಮ ಬಲೇ ಕುಸಿ ಮಾಸ್ದಿರೋ ಇಸ್ತ್ರೀನ ನೋಡಿ ಏನ್ಹೇಳ್ತಿ ನಗಂತೂ ಚಾನ್ಸು ಉಳಿಯೋಕ್ಕೆ ನಿಂಜೋಡಿ. ಬೆಚ್ಗೆ ಒಳ್ಗೆಇರ್ಬೋದು ಹ್ಯಾಂಗರ್ಗೆ ತಬ್ಕೊಂಡು ಹೊರಗೋದ್ರೆ ಕಾಡ್ತದೆ ಸೀತ್ಗಾಳಿ ಹೊಡ್ಕೊಂಡು ಆದ್ರೂನೆ ಏನೋ ಅಪಸ್ವರ ಕೇಳಿಸ್ತದ ನಮ್ಮೊಡ್ತಿ ಕಣ್ಣಾಗ ನಿರಾಸೆ ಕಾಣಿಸ್ತದ ಒಂದಿಷ್ಟು ದಿನ ಚೆಂದಅಲ್ಪ ವಿರಾಮ  ನುಸಿಗ್ನಮ್ಮನ್ನತಳ್ತದೆ ಈ ದೀರ್ಘವಿರಾಮ  ಅಷ್ಟೆ ಏನು ನಮ್ಮಂದ ಎಲ್ಲ್ರಿಗೂ ತೋರ್ಸ್ಬೇಕು ನೋಡೋರ್ಕಣ್ ಬೆರ್ಗಾಗಿ ಶಾಭಾಸ್ ಅನ್ಬೇಕು ಅದ್ಕೊಂದೇ ಉಪಾಯ ಕರೋನ ತೊಲಗ್ಬೇಕು ಮೊದ್ಲಿದ್ದ ನೆಮ್ದಿ ಬೇಗ್ಲೇನೆ ಬರ್ಬೇಕು ನಮಸ್ಕಾರ ಕರೋನ  ಅಡ್ಬಿದ್ದೆ ನಿನಗಣ್ಣ ನಮ್ಮನ್ನ ಬಿಟ್ಟು ಬೇಗನೆ ತೊಲಗಣ್ಣ ನಮ್ಮೊಡತಿ ನಮ್ಮನ್ನ ತಬ್ಕೊಂಡು ನಲೀಲಿ ನಮ್ಗೂನೆ ಒಡಹುಟ್ಟಿದೋರ್ನ್ನೋಡೊ ಚಾನ್ಸ್ ಬೇಗನೆ ಸಿಗ್ಲಿ ಡಾ ಸತ್ಯವತಿ ಮೂರ್ತಿ 23-01-2021 ರಂದು ಉದಯವಾಣಿ ದೇಸಿಸ್ವರದಲ್ಲಿ ಪ್ರಕಟವಾಗಿದೆ