ಆಟೋಚಾಲಕನ ಕಥೆ -ವ್ಯಥೆ
ಆಟೋಚಾಲಕನ ಕಥೆ -ವ್ಯಥೆ ಕಡಲ ತೀರದಲ್ಲಿ ಕುಳಿತ ರಾಜು ನೀರನ್ನೇ ದಿಟ್ಟಿಸುತ್ತಿದ್ದ. ಅಲೆಗಳು ಒಂದಾದಮೇಲೊಂದು ಬಂದು ದಡಕ್ಕೆ ಅಪ್ಪಳಿಸುತ್ತಿದ್ದರೂ ದಡ ಮಾತ್ರ ಯಾವ ಪ್ರತಿರೋಧವನ್ನೂ ತೋರಿಸದೇ ಶಾಂತವಾಗಿ ಅವುಗಳನ್ನು ಅಪ್ಪಿಕೊಳ್ಳುತಿತ್ತು.ಮೌನದಿಂದ ಅವುಗಳ ಆಹತವನ್ನು ಸಹಿಸಿತ್ತು.ದಡದ ಅಸಾಹಾಯಕತೆಯನ್ನು ನೋಡಿ ರಾಜುವಿಗೆ ಮರುಕ ಬಂದಿತು. ಜೊತೆಜೊತೆಗೆ ಅದರ ಸ್ಥಿರತೆಯ ಬಗ್ಗೆ ಹೆಮ್ಮೆಯೂ ಆಯಿತು. ಜೀವನವೂ ಹಾಗೆಯೇ ಅಲ್ಲವೆ ? ಕಷ್ಟ ನೋವುಗಳೆಂಬ ಹೊಡೆತಗಳು ಎಷ್ಟು ಬಿದ್ದರೂ ಸಹಿಸಲೇಬೇಕು. ಅವಗಳನ್ನು ಅಪ್ಪಿಕೊಂಡು ಒಪ್ಪಿಕೊಳ್ಳಲೇ ಬೇಕು. ಅದರಲ್ಲೂ ನಮ್ಮಂತಹ ಕೆಳ ವರ್ಗದ ಜನ! ನಮ್ಮ ಪರಿಸ್ಥಿತಿಯೇ ಇದಕ್ಕೆ ಕಾರಣವೇ ? ಪ್ರತಿಭಟಿಸಲು ಸಾಧ್ಯವೇ ಇಲ್ಲವೆ ? ನೂರಾರು ಆಲೋಚನೆಗಳು ತಲೆಯನ್ನು ತುಂಬಿ ಕಾಡುತ್ತಿದ್ದವು. ಏಕ ಕೋಣೆಯ ಪುಟ್ಟಮನೆಯಲ್ಲಿ ಅಪ್ಪ ಅಮ್ಮಂದಿರೊಂದಿಗೆ ವಾಸ. ಅಮ್ಮನ ಜೊತೆಗೆ ಅಪ್ಪನೂ ಮನೆಯಲ್ಲೇ ಸದಾ ಇರುತ್ತಿದ್ದ. ಎಲ್ಲೂಕೆಲಸಕ್ಕೆ ಹೋಗದಿದ್ದ ಅವನಿಗೆ ಹೆಂಡತಿಯ ಜೊತೆ ಕುಳಿತು ಟಿವೀ ನೋಡುವುದೊಂದೇ ಹವ್ಯಾಸ. ಹಾಗಿದ್ದರೂ ಇದುವರೆಗೂ ಹೇಗೋ ನಡೆದುಕೊಂಡು ಬಂದಿತ್ತು .ಆದರೆ ನೆನ್ನೆ ತಾನೇ ಮದುವೆಯಾಗಿ ಹೆಂಡತಿಯನ್ನು ಮನೆಗೆ ಕರೆತಂದಾಗಿದೆ.ಹೆಂಡತಿಯ ಹೆಸರು ಲಕ್ಷ್ಮಿ. ಅದೂ ಅಮ್ಮನ ಆಯ್ಕೆಯೇ! ರಾಜು ತನ್ನ ಹೆಂಡತಿಯಾಗುವವಳನ್ನು ಮದುವೆಗೆ ಮುನ್ನ ನೋಡುವ ಅ...