Posts

Showing posts from August, 2021

ನಿನ್ನ ಹೆಸರೇನು?

                                               ನಿನ್ನ ಹೆಸರೇನು ?   ಜೀ ವಿ ಕೇಳಿದರು ನಿನ್ನ ಹೆಸರೇನು ? ನಾನಂದೆ ಹೆಸರು ಸತ್ಯ. ಸತ್ಯದಲಿ ಹೇಳುವೆನು ಕನ್ನಡದತ್ತ ಅವಳಮತಿ ನಿತ್ಯ ಪದ್ಯವೇಕೆ ಬರೆಯಬಾರದು ನೀನು ? ನಿನ್ನ ಹೆಸರಿನ ಮೇಲೆ ? ಹೌದೆಂದು ತಲೆಯಾಡಿಸಿದೆ ಪೆನ್ನ ಕೈಗೆತ್ತಿಕೊಂಡೆ. ಬರೆದೆ ನನ್ನ ಹೆಸರು ಸತ್ಯ ಶಂತನು ವರಿಸಿದ ಸತ್ಯವತಿಯಲ್ಲ. ಭೀಷ್ಮಪ್ರತಿಜ್ಞೆಯ ಹೆಗ್ಗುರುತಲ್ಲ ವಿವಾಹಕೆ ಮಗನ ಪಟ್ಟದ ಷರತ್ತು ಹಾಕಿದ ಬೆಸ್ತರವಳಲ್ಲ. ಸಾವಿತ್ರಿ ಗಂಡ ಸತ್ಯವಾನನಲ್ಲ ಶೂನ್ಯತೆಯಲಿ ಪೂರ್ಣತೆಯ ಕಾಣ್ವ ಪರಬ್ರಹ್ಮರೂಪವಿವಳಲ್ಲ ವೇದಬ್ರಹ್ಮರ ಪುತ್ರಿ ವೇದರತ್ನರ ಶಿಷ್ಯೆ ಮೂರ್ತಿ ಮನೆಮನಗಳೊಡತಿ ಈ ಸತ್ಯವತಿ. ಪಾಂಡಿತ್ಯವಿಲ್ಲ: ಕನ್ನಡದ ಸೊಗಡಿಲ್ಲ: ಬರೆಯುವ ಹಂಬಲವು ಮೈಯೆಲ್ಲ! ನನ್ನಂತರಂಗದಾಣೆ ಕನ್ನಡವೆ ನನ್ನುಸಿರು. ಕನ್ನಡವೆ ನನ್ಜೀವ   ಡಾ ಸತ್ಯವತಿ ಮೂರ್ತಿ   09-06-2021

ಹೊಂದಾಣಿಕೆ

  ಹೊಂದಾಣಿಕೆ   ಚೆದುರಿದ ಕಾಳನು ಅನ್ನದ ಅಗುಳನು ರೊಟ್ಟಿಯ ತುಣುಕನು ಚುಂಚಿನಲಿ ಒಂದನೂ ಬಿಡದೆ ಭೇದವ ಮಾಡದೆ ರುಚಿ ಅರುಚಿಗೆ ಕಾಲ ಕಳೆಯದೆ   ಅಪ್ಪ ಅಮ್ಮದಿರು ಅಕ್ಕತಂಗಿಯರು ಅಣ್ಣ ತಮ್ಮದಿರು ಬಂಧುಬಾಂಧವರು ಅಕ್ಕಪಕ್ಕದ ಅವರಿವರೆಲ್ಲರು ಕೂಡಿ ತಿನ್ನುತಿವೆ ಸಮಭೋಗದಲಿ ಸಮಭಾಗದಲಿ   ಶೀಘ್ರದಿ ನುಂಗಿ ಮುಗಿಸಲು ಬೇಕು ಹೊತ್ತನು ಮೀರದೆ ಹೋಗಲು ಬೇಕು ಗೂಡಲಿ ಹಸಿವೆಗೆಕಿರುಚುವ ಮರಿಗೆ ಹೊಟ್ಟೆಗೆ ತುತ್ತನು ಒಯ್ಯಲು ಬೇಕು   ಒಮ್ಮೆ ಒಂದು ಗುಟುಕನು ಹಿಡಿದು ಬಂದಿತು ದೂರದ ಮಾಡಿನ ಮೇಲ್ಗಡೆ ಉಳಿದವು ಹೆಕ್ಕಲು ಅನುವನು ಕೊಡುತ ತನ್ನಯ ಕೊಕ್ಕಿನ ಊಟವ ಮುಗಿಸಲು.   ಒಮ್ಮೆಯು ಒಂದರ ಕಚ್ಚಾಟವ ಕಾಣೆ ಜಗಳವದಂತೂ ಇಲ್ಲವೆ ಇಲ್ಲ ಸರದಿಗೆ ಕಾಯುತ ತಾಳ್ಮೆಯ ಲಿರುವರು ಎಲ್ಲರು ಅಲ್ಲಿ ಸಮಭಾಗಿಗಳು   ಕೂಡಿ ಬಾಳುವುದರಲ್ಲಿ ಸುಖವಿದೆ ಒಗ್ಗಟ್ಟಿನಲ್ಲಿ ಎಲ್ಲರ ಬಲವಿದೆ ಭೂಮಿಯು ಇತ್ತುದು ಎಲ್ಲರ ಸ್ವತ್ತು ಸ್ವಾರ್ಥಕೆ ಹಮ್ಮಿಗೆ ಇಲ್ಲವು ಹೊತ್ತು   ಹೊಂದಾಣಿಕೆಯಿದು ಮನುಜನಲ್ಲಿಲ್ಲ ಹಕ್ಕಿಯ ನೋಡಿಯೂ ಕಲಿಯುವುದಿಲ್ಲ ನಾನು ನನ್ನದು ಸ್ವಾರ್ಥವದಿಲ್ಲದೆ ಸಮತಾಭಾವವ ಹೇಳುತ್ತವಲ್ಲ!   ಅದಂದಿನ ಜೀವನ ಅಂದಿಗೆ ಮೀಸಲು ಬರುವುದು ನಾಳೆ ಏನೇ ಇರಲಿ ಇಂದಿನ ಬದುಕನು ಬದುಕುವ ತಂತ್ರವ ಹಕ್ಕಿಯ ನೋಡಿ ಕಲಿಯಲು ಬೇಕು   ...

ಹಕ್ಕಿ ತಿನ್ನುತಿದೆ ನೋಡಿದಿರಾ

  ಹಕ್ಕಿ ತಿನ್ನುತಿದೆ ನೋಡಿದಿರಾ ಚೆದುರಿದ ಕಾಳನು ಅನ್ನದ ಅಗುಳನು ರೊಟ್ಟಿಯ ತುಣುಕನು ಚುಂಚಿನಲಿ ಒಂದನೂ ಬಿಡದೆ ಭೇದವ ಮಾಡದೆ ರುಚಿ ಅರುಚಿಗೆ ಕಾಲ ಕಳೆಯದೆ .....ಹಕ್ಕಿ ಹೆಕ್ಕುತಿದೆ   ಅಪ್ಪ ಅಮ್ಮದಿರು ಅಕ್ಕತಂಗಿಯರು ಅಣ್ಣ ತಮ್ಮದಿರುಬಂಧುಬಾಂಧವರು ಅಕ್ಕಪಕ್ಕದ ಅವರಿವರೆಲ್ಲರು ಕೂಡಿ ಸಮಭೋಗದಲಿ ಸಮಭಾಗದಲಿ...ಹಕ್ಕಿ ಹೆಕ್ಕುತಿದೆ   ಶೀಘ್ರದಿ ನುಂಗಿ ಮುಗಿಸಲು ಬೇಕು ಹೊತ್ತನು ಮೀರದೆ ಹೋಗಲು ಬೇಕು ಗೂಡಲಿ ಹಸಿವೆಗೆಕಿರುಚುವ ಮರಿಗೆ ಹೊಟ್ಟೆಗೆ ತುತ್ತನು ಒಯ್ಯಲು ಬೇಕು...ಹಕ್ಕಿ ಹೆಕ್ಕುತಿದೆ   ಒಮ್ಮೆ ಒಂದು ಗುಟುಕನು ಹಿಡಿದು ಬಂದಿತು ದೂರದ ಮಾಡಿನ ಮೇಲ್ಗಡೆ ಉಳಿದವು ಹೆಕ್ಕಲು ಅನುವನು ಕೊಡುತ ತನ್ನಯ ಕೊಕ್ಕಿನ ಊಟವ ಮುಗಿಸಲು...ಹಕ್ಕಿ ಹೆಕ್ಕುತಿದೆ   ಒಮ್ಮೆಯು ಒಂದರ ಕಚ್ಚಾಟವ ಕಾಣೆ ಜಗಳವದಂತೂ ಇಲ್ಲವೆ ಇಲ್ಲ ಸರದಿಗೆ ಕಾಯುತ ತಾಳ್ಮೆಯ ಲಿರುವರು ಎಲ್ಲರು ಅಲ್ಲಿ ಸಮಭಾಗಿಗಳು...ಹಕ್ಕಿ ಹೆಕ್ಕುತಿದೆ   ಕೂಡಿ ಬಾಳುವುದರಲ್ಲಿ ಸುಖವಿದೆ ಒಗ್ಗಟ್ಟಿನಲ್ಲಿ ಎಲ್ಲರ ಬಲವಿದೆ ಭೂಮಿಯು ಇತ್ತುದು ಎಲ್ಲರ ಸ್ವತ್ತು ಸ್ವಾರ್ಥಕೆ ಹಮ್ಮಿಗೆ ಇಲ್ಲವು ಹೊತ್ತು...ಹಕ್ಕಿ ಹೆಕ್ಕುತಿದೆ   ಹೊಂದಾಣಿಕೆಯಿದು ಮನುಜನಲ್ಲಿಲ್ಲ ಹಕ್ಕಿಯ ನೋಡಿಯೂ ಕಲಿಯುವುದಿಲ್ಲ ನಾನು ನನ್ನದು ಸ್ವಾರ್ಥವದಿಲ್ಲದೆ ಸಮತಾಭಾವವ ಹೇಳುವುವಲ್ಲ! ...ಹಕ್ಕಿ ಹೆಕ್ಕು...

ಬಂತು ಭಾನುವಾರ

 ಬಂತು ಭಾನುವಾರ  ಲೇ ಸರೂ ಈ ಶರ್ಟಿನ ಗುಂಡಿ ಒಂದು ಬಿಟ್ ಹೋಗಿದೆ ಕಣೆ ಸ್ವಲ್ಪ ಹಾಕಿಕೊಡ್ತೀಯಾ? "ಹಾಕೊಡ್ತೀನಿ ರೀ . ಆದ್ರೆ ಈಗಲ್ಲ . ವೀಕ್ ಎಂಡ್ ಬರಲಿ . ಖಂಡಿತ ಹಾಕ್ಕೊಡ್ತೀನಿ." ಒಂದು ಗುಂಡಿ ಹಾಕ್ಕೊಡೋಕ್ಕೂ ವೀಕ್ ಎಂಡ್ ಬರ್ಬೇಕಾ?  ಹೌದೂರಿ , ಆತುರದಲ್ಲಿ ಅದನ್ನು ತಪ್ಪುತಪ್ಪಾಗಿ ಹಾಕಿ ಮತ್ತೆ ಬಿಚ್ಚೋ ಕೆಲ್ಸ ಯಾರು ಮಾಡ್ಕೊಳ್ಳೋರು? ಇನ್ನೇನು ಬಂತಲ್ಲ ಶನಿವಾರ , ಭಾನುವಾರ ಒಂದಿನ ಹಾಕೊಡ್ತೀನಿ ಬಿಡಿ. ಆಯ್ತು ಕಣೆ. ಮರೀಬೇಡ ಅಷ್ಟೆ  ಹೂಂ ರೀ ಜೊತೆಗೆ ಈ ವಾರವೆಲ್ಲ ತುಂಬಿದ ಕೆಲಸ. ಕ್ಲಿನಿಕ್ಕಿನ ಕೆಲಸ , ಮನೆಕೆಲಸ ಎರಡನ್ನೂ ಮೇಳೈಸಿಕೊಂಡು ಹೋಗ್ಬೇಕಲ್ವೆ? ನೀವು ನನ್ನ ಸಮ ಸಮಕ್ಕೆ ಸಹಾಯ ಮಾಡ್ತೀರಿ. ಅದೂ ನೀವು ಈಗ ಸದ್ಯಕ್ಕೆ ಮನೆಯಿಂದ ಕೆಲಸ ಮಾಡ್ತ ಇರೋದರಿಂದ.  ಆದ್ರೂ ಒಮ್ಮೊಮ್ಮೆ ಕಷ್ಟ ಅನ್ನಿಸುತ್ತೆ.  ರೀ ಅಂದಹಾಗೆ ಈ ಭಾನುವಾರ ಬಿಡುವು ಮಾಡಿಕೊಂಡು ಹೋಗಿ ಒಂದಿಷ್ಟು ಗಿಡಗಳನ್ನು ತರಬೇಕು ರೀ . ಬೇಸಗೆಯಲ್ಲಿ ಗಿಡಗಳು ಚೆನ್ನಾಗಿ ಚಿಗುರುತ್ತವೆ, ಅವಗಳಲ್ಲಿ ಅರಳುವ ಹೂಗಳನ್ನು ನೋಡೋದಕ್ಕೇ ಒಂದು ಸಂತೋಷ.  ನೀನ್ಹೇಳೋದು ನಿಜ. ಆಯ್ತು ನೋಡೋಣ .  ಅಂತೂ ಬಹಳ ನಿರೀಕ್ಷೆಗಳಿಂದ ಬಯಸುತ್ತಿದ್ದ ವಾರದ ಕೊನೆ ಬಂತು. ಶನಿವಾರವೆಲ್ಲ ವಾರದ ಬಟ್ಟೆಗಳನ್ನೊಗೆದು ,ಇಸ್ತ್ರಿ ಬೇಕಾದಲ್ಲಿ ಮಾಡಿ ಎಲ್ಲರ ಬಟ್ಟೆಗಳನ್ನೂ  ಮುಂದಿನ ವಾರಕ್ಕೆ ಸಿದ್ಧಮಾಡಿ ಇಡುವುದರಲ್ಲೇ ಕಳೆದು ಹೋಯಿತು. ನನ್ನ ಸ್ಥಿತಿ ಇ...