ಉದಿಸಿ ಬಾ ತಾಯೆ
ಉದಿಸಿ ಬಾ ತಾಯೆ ಪುರಾಣಗಳಲ್ಲಿ ಓದಿದ್ದೇನೆ ಕತೆಗಳಲ್ಲಿ ಕೇಳಿದ್ದೇನೆ ರಕ್ಕಸರ ಹಾವಳಿಯನ್ನ ದುಷ್ಟ ಶಕ್ತಿಯ ದಬ್ಬಾಳಿಕೆಯನ್ನ ಮಹಿಷಾಸುರ, ಶುಂಭ ನಿಶುಂಭ ಚಂಡ ಮುಂಡ ರಕ್ತಬೀಜಾಸುರ ಶಿವನಿತ್ತ ವರದಲ್ಲಿ ಕೊಬ್ಬಿದ ರಕ್ಕಸರು ಮತಿಗೆಟ್ಟು ಧರೆಗೆ ಕಳವಳವ ತುಂಬಿದರು ಚಂಡಿ ಚಾಮುಂಡಿಯಾಗಿ ದುರ್ಗೆ ಮಹಾದೇವಿಯಾಗಿ ದುಷ್ಟಶಕ್ತಿಗಳ ನಾಶಮಾಡಿದ ದೇವಿ ಎಲ್ಲಿದ್ದೀಯೆ ತಾಯೆ? ಅವತರಿಸಿ ಬರಬಾರದೆ? ಕೋವಿಡ್-೧೯ ರಕ್ಕಸನ ಮುಗಿಸಬಾರದೆ? ವಿಜ್ಙಾನಿಗಳ ಬುದ್ಧಿಮತ್ತೆಯಲಿ ನೆಲಸಿ ಬಾ ಹೆತ್ತವರ ದುಖಃದ, ಕಂದಮ್ಮಗಳ ಕಣ್ಣಿರ ವಿಧವೆಯರ ನೋವ ಒಡಹುಟ್ಟಿದವರ ಅಳಲ ರೋಗಕ್ಕೆ ಬಲಿಯಾದವರ ಶಾಪವಾಗಿ ಬಾ ಕೀಟಾಣು ರಕ್ಕಸನ ಎದೆ ಬಗೆದು ಕೊರಳ ಸಿಗಿದು ಹೇಳ ಹೆಸರಿಲ್ಲದಂತೆ ಛಿದ್ರ ಛಿದ್ರ ಮಾಡಿ ಮುಗಿಸು ಬಾ ಅವನ ವರವೇ ಅವನಿಗೆ ಮುಳುವಾಗುವಂತೆ ವ್ಯಾಕ್ಸಿನ್ನಿನ ರೂಪದಲಿ ಅವತರಿಸು ಬಾ ಉದಿಸಿ ಬಾ ತಾಯೆ, ನೊಂದ ಮನುಜರ ವರವಾಗಿ ಜಗವನುದ್ಧರಿಸೆ ತ್ವರಿತದಿಂದುದಿಸಿ ಬಾ ಡಾ ಸತ್ಯವತಿ ಮೂರ್ತಿ ಉದವಾಣಿಯಲ್ಲಿ ಪ್ರಕಟವಾಗಿದೆ.